ಅ.ವಿ.ಮಹಾ ಸಭಾ ರಾಜ್ಯ ಘಟಕಕ್ಕೆ, ಸ್ಪರ್ಧಿಸಿದ್ದ ಶಶಿಕಾಂತ ಪಾಟೀಲ್, ಸಂತೋಷ ಪಾಟೀಲ್, ರಾಜಶೇಖರ ಸಿರಿಗೆ ಗೆಲುವು
ಅ.ವಿ.ಮಹಾ ಸಭಾ ರಾಜ್ಯ ಘಟಕಕ್ಕೆ,ಸ್ಪರ್ಧಿಸಿದ್ದ ಶಶಿಕಾಂತ ಪಾಟೀಲ್, ಸಂತೋಷ ಪಾಟೀಲ್, ರಾಜಶೇಖರ ಸಿರಿಗೆ ಗೆಲುವು
ಕಲಬುರಗಿ : ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ರಾಜ್ಯ ಘಟಕದ ಕಾರ್ಯನಿರ್ವಾಹಕ ಸದಸ್ಯ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜಿಲ್ಲೆಯಿಂದ ಸ್ಪರ್ಧಿಸಿದ್ದ ಸಂತೋಷ ಪಾಟೀಲ ಶ್ರೀನಿವಾಸ ಸರಡಗಿ, ರಾಜಶೇಖರ ಸೀರಿ, ಶಶಿಕಾಂತ ಪಾಟೀಲ ಭರ್ಜರಿ ಗೆಲುವು ಸಾಧಿಸಿದ್ದಾರೆ.
ರಾಜ್ಯ ಘಟಕದ ಕಾರ್ಯನಿರ್ವಾಹಕದ 27 ಸ್ಥಾನಗಳಿಗೆ ಆ.25ರಂದು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಮತದಾನ ಮಾಡಲಾಗಿತ್ತು. ಒಟ್ಟು 31 ಜಿಲ್ಲೆಗಳ 31,145 ಮತಗಳಲ್ಲಿ 18,016 ಮತ ಚಲಾವಣೆ ಆಗಿದ್ದವು. ಇದರಲ್ಲಿ ಶಶಿಕಾಂತ ಪಾಟೀಲ್ 11,482, ಸಂತೋಷ ಪಾಟೀಲ್ 11,321, ರಾಜಶೇಖರ ಸಿರಿ 11,172 ಮತಗಳನ್ನು ಪಡೆಯುವ ಮೂಲಕ ಭರ್ಜರಿ ಜಯ ಸಾಧಿಸಿದರು.
ಜಿಲ್ಲೆಯ ಮೂವರ ಗೆಲುವಿನ ಹಿನ್ನೆಲೆ ಮಹಾಸಭಾ ಜಿಲ್ಲಾಧ್ಯಕ್ಷ ಶರಣಕುಮಾರ ಮೋದಿ ನೇತೃತ್ವದಲ್ಲಿ ಜಗತ್ ವೃತ್ತದಲ್ಲಿರುವ ವಿಶ್ವಗುರುಬಸವಣ್ಣನವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದ ನಂತರ ನೂತನವಾಗಿ ಆಯ್ಕೆಯಾದವರಿಗೆ ಸನ್ಮಾನಿಸಲಾಯಿತು.
ಮಲ್ಲಿಕಾರ್ಜುನ ಖೇಮಜಿ, ಶಿವಾನಂದ ಪಾಟೀಲ ಮರತೂರ, ವೈಜನಾಥ ತಡಕಲ್, ಜಿಲ್ಲಾ ಘಟಕದ ಕಾರ್ಯಕಾರಿ ಸಮಿತಿ ಸದಸ್ಯರಾದ ಭೀಮಾಶಂಕರ ಮೇಟೆಕಾರ, , ಶಾಂತ ಕುಮಾರ ದುಧನಿ, ಉದಯಕುಮಾರ ಜೇವರ್ಗಿ, ಜ್ಯೋತಿ ಮರಗೋಳ ಸೇರಿ ಸಮಾಜದ ಮುಖಂಡರಾದ ರಾಜಕುಮಾರ ಪಾಟೀಲ, ಆನಂದ ಪಾಟೀಲ, ರವಿಕುಮಾರ ಪಾಟೀಲ, ಈರಣಗೌಡ, ಶರಣಗೌಡ ಪಾಟೀಲ, ಸಿದ್ದು ಬಾಳಿ, ನೀಲಕಂಠ ಪಾಟೀಲ, ಸಂಗನಗೌಡ ಗುಳ್ಯಾಳ, ನೀಲಕಂಟ, ಮಲ್ಲಣಗೌಡ ನೇದಲಗಿ, ಭೀಮಾಶಂಕರ ಪಾಟೀಲ, ಶಿವಾನಂದ ಮಠಪತಿ, ರವಿ ಕೋಳಕೂರ, ಸಂಜುಕುಮಾರ ಸೀರಿ, ಮಹಾದೇವ ಸೀರಿ, ಗುರುಲಿಂಗಯ್ಯ ಸ್ವಾಮಿ, ಸಕ್ರೆಪ್ಪ ಗೌಡ ಖೇದಾಪೂರ. ಲಿಂಗರಾಜ ಸೀರಿ, ಕಾರ್ತಿಕ ಸೀರಿ, ವಿಶಾಲ ಹರವಾಳ, ಶರಣು ಜನಿವಾರ, ಜಗನ್ನಾಥ ಪಾಟೀಲ, ಅಶೋಕ ಇಂಡಿ ಸೇರಿದಂತೆ ಸಮಾಜದ ಗಣ್ಯರು, ಯುವ ಮುಖಂಡರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು ಎಂದು ನಾಗಲಿಂಗಯ್ಯ ಮಠಪತಿ ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.