ಕಲಬುರಗಿ: ವಿಕಲಚೇತನ ಪುನರ್ವಸತಿ ಕಾರ್ಯಕರ್ತರಿಗೆ ಕನಿಷ್ಠ ವೇತನ ಜಾರಿಗೊಳಿಸುವಂತೆ ಮನವಿ

ಕಲಬುರಗಿ: ವಿಕಲಚೇತನ ಪುನರ್ವಸತಿ ಕಾರ್ಯಕರ್ತರಿಗೆ ಕನಿಷ್ಠ ವೇತನ ಜಾರಿಗೊಳಿಸುವಂತೆ ಮನವಿ

ಕಲಬುರಗಿ: ವಿಕಲಚೇತನ ಪುನರ್ವಸತಿ ಕಾರ್ಯಕರ್ತರಿಗೆ ಕನಿಷ್ಠ ವೇತನ ಜಾರಿಗೊಳಿಸುವಂತೆ ಮನವಿ

ಕರ್ನಾಟಕ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ MRW/VRW/URW ವಿಕಲಚೇತನ ಪುನರ್ವಸತಿ ಗೌರವಧನ ಕಾರ್ಯಕರ್ತರಿಗೆ ಕನಿಷ್ಠ ವೇತನ ಜಾರಿಗೊಳಿಸಬೇಕೆಂದು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ.

ವಿರಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 6,860 MRW, VRW ಹಾಗು URW ಕಾರ್ಯಕರ್ತರು ಆರಂಭದಿಂದಲೂ ರೂ.750ರಿಂದ ಪ್ರಾರಂಭವಾದ ಗೌರವಧನವು ಹಲವು ಹಂತಗಳಲ್ಲಿ ಹೆಚ್ಚಾಗಿ ಪ್ರಸ್ತುತ MRWಗಳಿಗೆ ರೂ.16,000 ಹಾಗೂ VRW/URWಗಳಿಗೆ ರೂ.10,000ಕ್ಕೆ ಏರಿಕೆಯಾಗಿದೆ. ಆದಾಗ್ಯೂ ಜೀವನೋಪಾಯಕ್ಕೆ ಇದು ಅಪರ್ಯಾಪ್ತವಾಗಿದ್ದು ತಕ್ಷಣ ಕನಿಷ್ಠ ವೇತನ ಜಾರಿಗೊಳಿಸಬೇಕೆಂದು ಮನವಿಯಲ್ಲಿ ಕಳಕಳಿ ವ್ಯಕ್ತಪಡಿಸಲಾಗಿದೆ.

ಹಲವು ಇಲಾಖೆಗಳ ನೌಕರರು, ಗ್ರಾಮ ಸಹಾಯಕರು, ಅಂಗನವಾಡಿ–ಆಶಾ ಕಾರ್ಯಕರ್ತೆಯರು ಹಾಗೂ ವಿವಿಧ ಯೋಜನೆಗಳ ಕಾರ್ಮಿಕರ ವೇತನದಲ್ಲಿ ಸರ್ಕಾರ ಇತ್ತೀಚಿಗೆ ಹೆಚ್ಚಳ ಮಾಡಿರುವುದನ್ನು ಉಲ್ಲೇಖಿಸಿ, ವಿಕಲಚೇತನ ಪುನರ್ವಸತಿ ಕಾರ್ಯಕರ್ತರಿಗೂ ಸಮಾನ ನ್ಯಾಯ ದೊರಕಬೇಕು ಎಂದು ಒತ್ತಾಯಿಸಲಾಗಿದೆ.

ರಾಜ್ಯದ ಕಾರ್ಮಿಕ ಸಚಿವರಾದ ನಂತೋಷ್ ಲಾಡ್ ಅವರು ಈಗಾಗಲೇ ಈ ನಿಟ್ಟಿನಲ್ಲಿ ಕಡತ ಸಿದ್ಧಪಡಿಸಿರುವುದನ್ನು ಮನವಿಯಲ್ಲಿ ಉಲ್ಲೇಖಿಸಿ, ಮಾನ್ಯ ಮುಖ್ಯಮಂತ್ರಿಗಳು, ಕಾರ್ಮಿಕ ಸಚಿವರು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವರು ತಕ್ಷಣ ಸಭೆ ನಡೆಸಿ ಕನಿಷ್ಠ ವೇತನ ಜಾರಿಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಲಾಗಿದೆ.

ಅದೇ ರೀತಿ, ಗ್ರಾಮೀಣ ವಿಕಲಚೇತನ ಪುನರ್ವಸತಿ ಕಾರ್ಯಕರ್ತರ ಇ-ಹಾಜರಾತಿಗೆ ಪೂರಕವಾಗಿ ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಶೇಕಡಾ 5ರ ವಿಕಲಚೇತನರ ಅನುದಾನದಿಂದ ಪ್ರತ್ಯೇಕ ಬಯೋಮೆಟ್ರಿಕ್ ಯಂತ್ರಗಳನ್ನು ಖರೀದಿಸಿ ಅಳವಡಿಸಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ.

ಮನವಿ ಸಲ್ಲಿಸುವ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಫಕೀರ್ ಗೌಡ ಪಾಟೇಲ್, ರಾಜ್ಯಾಧ್ಯಕ್ಷರು ಡಾ. ಅಂಬಾಜಿ ಪಿ. ಮೇಟೆ, ರಾಜ್ಯ ಉಪಾಧ್ಯಕ್ಷರು ಖಾಸಿಂಮ, ವೆಂಕಟಪ್ಪ ಚವ್ಹಾಣ, ಜಿಲ್ಲಾಧ್ಯಕ್ಷರು ಮಲ್ಲಿಕಾರ್ಜುನ್ ಕಟ್ಟಿಮಣಿ (ಕಲಬುರಗಿ), ನಾನಾಗೌಡ ಹೊನ್ನಳ್ಳಿ, ಜಬ್ಬಾರ್ ಆಲಿ ಮನಿಯಾರ್, ಸಿದ್ಧಾರೂಢ ಬಿರಾದಾರ್ ಸೇರಿದಂತೆ ಅನೇಕರು ಹಾಜರಿದ್ದರು.