ಕಲಬುರಗಿ: ಜಿಲ್ಲಾ ವಾರ್ಷಿಕ ಕರಡು ಯೋಜನೆ ಶೀಘ್ರ ಸಲ್ಲಿಕೆಗೆ ಸೂಚನೆ

ಕಲಬುರಗಿ: ಜಿಲ್ಲಾ ವಾರ್ಷಿಕ ಕರಡು ಯೋಜನೆ ಶೀಘ್ರ ಸಲ್ಲಿಕೆಗೆ ಸೂಚನೆ

ಕಲಬುರಗಿ: ಜಿಲ್ಲಾ ವಾರ್ಷಿಕ ಕರಡು ಯೋಜನೆ ಶೀಘ್ರ ಸಲ್ಲಿಕೆಗೆ ಸೂಚನೆ

ಕರ್ನಾಟಕ ರಾಜ್ಯ ವಿಕೇಂದ್ರಿಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಡಿ.ಆರ್. ಪಾಟೀಲ ಅವರು ಶನಿವಾರ ಕಲಬುರಗಿಯಲ್ಲಿ 2026-27ರ ಜಿಲ್ಲಾ ವಾರ್ಷಿಕ ಕರಡು ಯೋಜನೆ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.

ಸಭೆಯಲ್ಲಿ ಮಾತನಾಡಿದ ಅವರು, ಕಲಬುರಗಿ ವಿಭಾಗದ ಎಲ್ಲಾ ಜಿಲ್ಲೆಗಳು ನವೆಂಬರ್ ತಿಂಗಳ ಅಂತ್ಯಕ್ಕೂ ಮುನ್ನ ಡಿ.ಪಿ.ಸಿ (District Planning Committee) ಸಭೆಗಳನ್ನು ಕಡ್ಡಾಯವಾಗಿ ಕೂಡಿ, ಅಂತಿಮ ಕರಡು ವಾರ್ಷಿಕ ಯೋಜನೆಯನ್ನು ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಸೂಚಿಸಿದರು.

ಜಿಲ್ಲೆಗಳ ಯೋಜನಾ ಸಿದ್ಧತೆ, ಯೋಜನೆಗಳ ಪ್ರಗತಿ, ವಿಭಾಗವಾರು ಸಾಧನೆ, ಬಜೆಟ್ ಅಂದಾಜು ಹಾಗೂ ಅಭಿವೃದ್ಧಿ ಕಾರ್ಯಗಳ ಪರಿಶೀಲನೆ ನಡೆಸಿದ ಅವರು, ಅಭಿವೃದ್ಧಿ ಚಟುವಟಿಕೆಗಳಲ್ಲಿ ವಿಳಂಬವಾಗದಂತೆ ಯೋಜನೆಗಳ ಸರಿಯಾದ ಸಮಯಪಾಲನೆ ಅತ್ಯಗತ್ಯ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಯೋಜನಾ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.