ಜೈನ್ ವಿಶ್ವವಿದ್ಯಾಲಯದ 15ನೇ ಘಟಿಕೋತ್ಸವ ಸಂಭ್ರಮ – ಡಾ. ಬಿ.ಕೆ. ವೆಂಕಟೇಶ್ ಪ್ರಸಾದ್ ಅವರಿಗೆ ಗೌರವ ಡಾಕ್ಟರೇಟ್

ಜೈನ್ ವಿಶ್ವವಿದ್ಯಾಲಯದ 15ನೇ ಘಟಿಕೋತ್ಸವ ಸಂಭ್ರಮ – ಡಾ. ಬಿ.ಕೆ. ವೆಂಕಟೇಶ್ ಪ್ರಸಾದ್ ಅವರಿಗೆ ಗೌರವ ಡಾಕ್ಟರೇಟ್

ಜೀವನದಲ್ಲಿ ವೈಫಲ್ಯಗಳನ್ನು ಅಪ್ಪಿಕೊಳ್ಳಿ, ಅನಿಶ್ಚಿತತೆಗಳನ್ನು ಸ್ವೀಕರಿಸಿ.”ದೃಢವಾಗಿರಿ, ಮುಂದುವರೆಯಿರಿ, ಎಂದೂ ತಲೆತಗ್ಗಿಸಬೇಡಿ. ಸ್ಥಿರತೆ, ನಿರಂತರತೆ, ಆಶಾವಾದ ಮತ್ತು ದೃಢ ಉದ್ದೇಶದೊಂದಿಗೆ ನೀವು ಬಯಸುವ ಗುರಿಗಳನ್ನು ಖಂಡಿತಾ ತಲುಪುವಿರಿ.” –ಚಾನ್ಸಲರ್ ಡಾ. ಚೆನ್ರಾಜ್ ರಾಯಚಂದ್ ಅಭಿಮತ 

ಬೆಂಗಳೂರು, 19 ನವೆಂಬರ್ 2025 : ಭಾರತದ ಪ್ರಮುಖ ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಜೈನ್ (ಡೀಮ್ಡ್-ಟು-ಬಿ ಯೂನಿವರ್ಸಿಟಿ)ಯು ತನ್ನ 15 ನೇ ಘಟಿಕೋತ್ಸವ ಸಮಾರಂಭವನ್ನು ಹೆಮ್ಮೆಯಿಂದ ಆಚರಿಸಿಕೊಂಡಿತು .ಈ ಸಂದರ್ಭದಲ್ಲಿ ಮಾಜಿ ಭಾರತೀಯ ಕ್ರಿಕೆಟಿಗ ಡಾ. ಬಿ.ಕೆ. ವೆಂಕಟೇಶ್ ಪ್ರಸಾದ್ ಅವರಿಗೆ ಗೌರವ ಡಾಕ್ಟರೇಟ್ (Doctor Honoris Causa) ಪದವಿ ಪ್ರದಾನ ಮಾಡಲಾಯಿತು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕಲ್ಯಾಣ್ ಜ್ಯುವೆಲ್ಲರ್ಸ್‌ನ ಕಾರ್ಯನಿರ್ವಾಹಕ ನಿರ್ದೇಶಕರಾದ ಟಿ.ಕೆ. ಸೀತಾರಾಂ, ಜೈನ್ (ಡೀಮ್ಡ್-ಟು-ಬಿ ಯೂನಿವರ್ಸಿಟಿ)ಯ ಚಾನ್ಸಲರ್ ಡಾ. ಚೆನ್ರಾಜ್ ರಾಯಚಂದ್, ಪ್ರಭಾರ ಕುಲಪತಿ ಮತ್ತು ರಿಜಿಸ್ಟ್ರಾರ್ ಡಾ. ಜಿತೇಂದ್ರ ಕುಮಾರ್ ಮಿಶ್ರಾ ಹಾಗೂ ಪ್ರೊ-ವೈಸ್ ಚಾನ್ಸಲರ್ ಡಾ. ದಿನೇಶ್ ನೀಲಕಂಠ ಅವರು ಸೇರಿದಂತೆ ಪ್ರಮುಖ ಗಣ್ಯ ವ್ಯಕ್ತಿಗಳು ಉಪಸ್ಥಿತರಿದ್ದರು.

ಡಾ. ಬಿ.ಕೆ. ವೆಂಕಟೇಶ್ ಪ್ರಸಾದ್ (ಮಾಜಿ ಭಾರತೀಯ ಕ್ರಿಕೆಟಿಗ) ಗೌರವ ಡಾಕ್ಟರೇಟ್ ಪದವಿ ಸ್ವೀಕರಿಸಿ ಸಭಿಕರನ್ನುದ್ದೇಶಿಸಿ ಮಾತನಾಡುತ್ತಾ, ಉದ್ದೇಶಪೂರ್ವಕ ಬೆಳವಣಿಗೆಯ ಮಹತ್ವವನ್ನು ಒತ್ತಿ ಹೇಳಿದರು. ಮುಂದುವರೆದು ಮಾತನಾಡುತ್ತ ಪದವಿ ಪುರಷ್ಕೃತರೆ

“ನಿಜವಾಗಿಯೂ ಮುಖ್ಯವಾದದ್ದು ನಿಮ್ಮ ಒಳಗಿನ ಉತ್ಸಾಹವನ್ನು ಹಿಂಬಾಲಿಸುವುದು. ಏಕೆಂದರೆ ಆ ಆಂತರಿಕ ಪ್ರೇರಣೆ, ನಿಮ್ಮ ಉದ್ದೇಶದ ಭಾವನೆ ಯಾವುದಕ್ಕೂ ಬದಲಾಯಿಸಲಾಗದಂಥದ್ದು. ಅದು ಎಂಜಿನಿಯರಿಂಗ್‌ನೇ ಆಗಿರಲಿ, ಕೃತಕ ಬುದ್ಧಿಮತ್ತೆಯೇ ಆಗಿರಲಿ ಅಥವಾ ಬೇರೆ ಯಾವ ಮಾರ್ಗವೇ ಆಗಿರಲಿ, ಟ್ರೆಂಡ್‌ಗಳು ನಿಮ್ಮನ್ನು ಮುನ್ನಡೆಸದಿರಲಿ; ನಿಮ್ಮ ಉತ್ಸಾಹವೇ ನಿಮ್ಮ ಪಯಣಕ್ಕೆ ದಾರಿದೀಪ.” ನೀವು ಲೋಕದ ನಿರೀಕ್ಷೆಗಳ ಹಿಂದೆ ಹೋಗಬೇಡಿ, ನಿಮ್ಮೊಳಗಿನ ಜ್ಞಾನದ ಬೆಳಕಿನೊಂದಿಗೆ ಸಾಗಿ 

ಯಶಸ್ಸು ತಾನಾಗಿಯೇ ನಿಮ್ಮನ್ನು ಹಿಂಬಾಲಿಸುತ್ತದೆ.”ಎಂದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಕಲ್ಯಾಣ್ ಜ್ಯುವೆಲ್ಲರ್ಸ್‌ನ ಕಾರ್ಯನಿರ್ದೇಶಕರಾದ ಟಿ.ಕೆ. ಸೀತಾರಾಮ್ ಮಾತನಾಡುತ್ತ “ನಮ್ಮಲ್ಲಿ ಪ್ರತಿಯೊಬ್ಬರನ್ನೂ ಉತ್ತಮ ಮಾನವರನ್ನಾಗಿ ಮಾಡುವ ಕೆಲವು ಗುಣಗಳೂ ಮತ್ತು ಸದ್ಗುಣಗಳೂ ಇವೆ. ಅವುಗಳಲ್ಲಿ ಅತ್ಯಂತ ಮುಖ್ಯವಾದ ಗುಣವೆಂದರೆ ಅಂತಃಕರಣ .ನೀವು ಇತರರಿಗೆ ಸಂತೋಷವನ್ನು ತಂದುಕೊಡಬಲ್ಲೆವೆಂದಾದರೆ, ಅದು ನೀವು ನೀಡಬಹುದಾದ ಅತ್ಯುತ್ತಮ ಕೊಡುಗೆಯಾಗಿರುತ್ತದೆ.” ಮುಂದುವರೆದು ಮಾತನಾಡುತ್ತ

ಪದವಿ ಪಡೆದ ವಿದ್ಯಾರ್ಥಿಗಳನ್ನು ಶ್ಲಾಘಿಸುತ್ತಾ 

“ನೀವೆಲ್ಲರೂ ಅತ್ಯಂತ ಗೌರವಕ್ಕೆ ಪಾತ್ರರೂ, ಅದೃಷ್ಟವಂತರೂ ಮತ್ತು ಪ್ರತಿಭಾವಂತರೂ ಆದ ವ್ಯಕ್ತಿಗಳು. ಹೊರಗಿನ ಸ್ಪರ್ಧಾತ್ಮಕ ಜಗತ್ತಿಗೆ ಸಂಪೂರ್ಣ ಸಿದ್ಧರಾಗಿದ್ದೀರಿ.” ಎಂದರು 

ಜೈನ್ (ಡೀಮ್ಡ್-ಟು-ಬಿ ಯೂನಿವರ್ಸಿಟಿ)ಯ ಚಾನ್ಸಲರ್ ಡಾ. ಚೆನ್ರಾಜ್ ರಾಯಚಂದ್ ಅವರು ಮಾತನಾಡುತ್ತಾ

“ನನ್ನ ಅನುಭವದಲ್ಲಿ ವೈಫಲ್ಯವು ಹೆಚ್ಚಾಗಿ ಭಯವನ್ನುಂಟುಮಾಡುತ್ತದೆ, ಆದರೆ ಯಶಸ್ಸು ಮತ್ತು ವೈಫಲ್ಯ ಎರಡೂ ಅವಕಾಶಗಳೇ ಆಗಿವೆ. ನಾನು ನಿಮಗೆ ಭರವಸೆ ನೀಡುತ್ತೇನೆ – ವೈಫಲ್ಯವು ಪಯಣದ ಒಂದು ಭಾಗ, ಅದು ಯಶಸ್ಸಿನಲ್ಲೇ ಅಡಕವಾಗಿರುತ್ತದೆ. ಯಶಸ್ಸು ಕಲಿಸಲಾರದ ಅನೇಕ ವಿಷಯಗಳನ್ನು ವೈಫಲ್ಯವು ಕಲಿಸಿಕೊಡುತ್ತದೆ. ಆದ್ದರಿಂದ ಜೀವನದಲ್ಲಿ ವೈಫಲ್ಯಗಳನ್ನು ಅಪ್ಪಿಕೊಳ್ಳಿ, ಅನಿಶ್ಚಿತತೆಗಳನ್ನು ಸ್ವೀಕರಿಸಿ.”

ದೃಢವಾಗಿರಿ, ಮುಂದುವರೆಯಿರಿ, ಎಂದೂ ತಲೆತಗ್ಗಿಸಬೇಡಿ. ಸ್ಥಿರತೆ, ನಿರಂತರತೆ, ಆಶಾವಾದ ಮತ್ತು ದೃಢ ಉದ್ದೇಶದೊಂದಿಗೆ ನೀವು ಬಯಸುವ ಗುರಿಗಳನ್ನು ಖಂಡಿತಾ ತಲುಪುವಿರಿ. ಎಂದರು.

ಪ್ರಭಾರ ಕುಲಪತಿಗಳು ಹಾಗೂ ರಿಜಿಸ್ಟ್ರಾರ್ ರಾದ ಡಾ. ಜಿತೇಂದ್ರ ಕುಮಾರ್ ಮಿಶ್ರಾ ಅವರು ಮಾತನಾಡುತ್ತಾ 

15 ನೇ ವಾರ್ಷಿಕ ಘಟಿಕೋತ್ಸವ ಸಮಾರಂಭದಲ್ಲಿ ವಿವಿಧ ವಿಭಾಗಗಳ 30,439 ಸ್ನಾತಕರಿಗೆ ಪದವಿಗಳನ್ನು ಪ್ರದಾನ ಮಾಡಲಾಯಿತು. ಇದರಲ್ಲಿ 127 ಚಿನ್ನದ ಪದಕಗಳು ಮತ್ತು 360 ರ್ಯಾಂಕ್ ಪಡೆದವರು ಸೇರಿದ್ದಾರೆ. 2010 ರಲ್ಲಿ ಪ್ರಾರಂಭವಾದ ಪಿಎಚ್‌ಡಿ ಕಾರ್ಯಕ್ರಮದಲ್ಲಿ ಇಂದು 1,335 ಡಾಕ್ಟೋರಲ್ ವಿದ್ಯಾರ್ಥಿಗಳು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಈ ಸಮಾರಂಭದಲ್ಲಿ 92 ಪಿಎಚ್‌ಡಿ ಪದವಿಗಳನ್ನು ಪ್ರದಾನ ಮಾಡಲಾಯಿತು. ಪದವೀಧರರ ಈ ಸಾಧನೆಗಳು ಸಂಸ್ಥೆಯ ನಿರಂತರ ಪ್ರಗತಿಗೆ ಸಂಶೋಧನಾ ಕ್ಷೇತ್ರದಲ್ಲಿ ಬಲಗೊಳ್ಳುತ್ತಿರುವುದರ ಸ್ಥಾನಮಾನವನ್ನು ಪ್ರತಿಬಿಂಬಿಸುತ್ತದೆ ಎಂದರು.ಈ ಸಮಾರಂಭದಲ್ಲಿ ವಿವಿಧ ವಿಭಾಗದ ಡೀನ್ ,ಮುಖ್ಯಸ್ಥರು,ಪ್ರಾಧ್ಯಾಪಕರು,ವಿದ್ಯಾರ್ಥಿಗಳು ಪಾಲಕರು ಪೋಷಕರು ಪಾಲ್ಗೊಂಡಿದ್ದರು.