ಸೈಯದ್ ಚಿಂಚೋಳಿಯಲ್ಲಿ ದರ್ಗಾ ಸಾತೋ ಶಹೀದ್ ಉರುಸ್ ಯಶಸ್ವಿ

ಸೈಯದ್ ಚಿಂಚೋಳಿಯಲ್ಲಿ ದರ್ಗಾ ಸಾತೋ ಶಹೀದ್ ಉರುಸ್ ಯಶಸ್ವಿ
ಕಲಬುರಗಿ: ನಗರದ ಹೊರ ವಲಯದ ಸೈಯದ್ ಚಿಂಚೋಳಿಯಲ್ಲಿರುವ ದರ್ಗಾ ಹಜರತ್ ಸಾತೋ ಶಹೀದ್ ಅವರ ಮೂರು ದಿನಗಳ ಉರುಸ್ ಸೆ. 08/09/2025 ರಿಂದ 10/09/25 ಬುಧವಾರ ಸಮಾರೋಪಗೊಂಡಿತು. ದರ್ಗಾದ ವಂಶಪರAಪರೆ ಮೂತವಲ್ಲಿ ಹಾಗೂ ಸಜ್ಜದಾ ನಶೀನ್ ಆಶ್ಚಾಕ್ ಅಹ್ಮದ್ ಸಿದ್ದೀಖಿ ಅವರ ನೇತೃತ್ವದಲ್ಲಿ ಸಂದಲ್ (ಗಂಧ), ಚಿರಗಾನ್ (ದೀಪ) ಮತ್ತು ಜಿಯಾರತ್, ಮುಸ್ಲಿಂ ಧಾರ್ಮಿಕ ಕಾರ್ಯಕ್ರಮಗಳನ್ನು ನೇರವೇರಿದವು.
ದರ್ಗಾದ ಸಜ್ಜದಾ ನಶೀನ್ ಆಶ್ಚಾಕ್ ಅಹ್ಮದ್ ಸಿದ್ದೀಖಿ ಅವರು ಅತಿಥಿಗಳಾದ ಚಿತ್ತಾಪುರ ತಾಲ್ಲೂಕಿನ ದರ್ಗಾ ಹಜರತ್ ಚಿತಾಶಾವಲಿಯ ಸಜ್ಜದಾ ನಶೀನ್ ಸೈಯದ್ ಮಿನ್ಹಾಜುದ್ದೀನ್ ಸಾಹೇಬ್, ದರ್ಗಾ ಬೆಣ್ಣೂರ್ ಸೈಯದ್ ಮಕಬುಲ್ ಆಲಿ ಸಾಹೇಬ್, ದರ್ಗಾ ಸಣ್ಣೂರ್ ಮೂತವಲಿ ಸಜ್ಜದಾ ನಶೀನ್ ಅಬ್ದುಲ್ ಸತ್ತಾರ್ ಸಾಹೇಬ್, ದಂಡೋತಿಯ ನಜಿರ್ ದರ್ಗಾ ಸಾಹೇಬ್, ಯಾದಗಿರಿಯ ಸಿರಾಜೋದ್ದಿನ್ ತಿರಅದಾಂಜ್ ಸಾಹೇಬ್ ಬಡಿ ಮಜಿದ್, ಕಲಬುರಗಿಯ ಸೈಯದ್ ಅಬ್ದುಲ್ ರಶಿದ್ ರ್ದಬಾನ್, ಮಹಮ್ಮದ್ ಶಫಿಸಾಹೇಬ್ ಅವರಿಗೆ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಗ್ರಾ.ಪಂ.ಅಧಿಕಾರಿ, ಕೆಇಬಿ ಅಧಿಕಾರಿ, ಪೋಲಿಸ್ ಸಿಬ್ಬಂದಿಗಳಿಗೆ ದರ್ಗಾದ ವಶಪರಂಪರೆ ಮೂತವಲ್ಲಿ ಸಜ್ಜದಾ ನಶೀನ್ ಆಶ್ವಾಕ್ ಅಹ್ಮದ್ ಅವರು ಸನ್ಮಾನಿಸಿದರು. ಗ್ರಾಮಸ್ಥರು ಮತ್ತು ಸಮಸ್ತ ಭಕ್ತರು ದರ್ಗಾ ಹಜರತ್ ಸಾತೋ ಶಹೀದ್ ಅವರ ಮೂರು ದಿನಗಳ ಉರುಸ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪ್ರೋತ್ಸಾಹಿಸಿದರು.