ಸಾಧಕರಿಗೆ ಪ್ರಶಸ್ತಿ ಪ್ರದಾನ

ಸಾಧಕರಿಗೆ ಪ್ರಶಸ್ತಿ ಪ್ರದಾನ
ಕಲಬುರಗಿ: ನಗರದ ಕನ್ನಡ ಭವನದಲ್ಲಿ ಕರ್ನಾಟಕ ರಾಜ್ಯ ಸರಕಾರಿ ನಿವೃತ್ತ ಅಲ್ಪ ಸಂಖ್ಯಾತರ ನೌಕರರ ಸಂಘದ ವತಿಯಿಂದ ವಿವಿಧ ಕ್ಷೇತ್ರದಲ್ಲಿ ಪ್ರಶಸ್ತಿ ಪಡೆದಿರುವ ಸಾಧಕರಿಗೆ ಸನ್ಮಾನ ಹಾಗೂ 2025ನೇ ಸಾಲಿನ ದಿನಚರಿ ಬಿಡುಗಡೆಯನ್ನು ಶಾಸಕ ಅಲ್ಲಮಪ್ರಭು ಪಾಟೀಲ ಮಾಡಿದರು. ಈ ಸಂದರ್ಭದಲ್ಲಿ ಡಾ.ಸಾರಂಗ ದೇಶಿಕೆಂದ್ರ ಮಹಾಸಾಮಿಜಿ, ಶ್ರೀ ಗುರುಮಿತ್ ಸಿಂಗ್ ಸಲೂಜಾ, ಅಬಕಾರಿ ಉಪ ಆಯುಕ್ತ ಡಾ.ಸಂಗನಗೌಡ, ಕಸಪ ಜಿಲ್ಲಾಧ್ಯಕ್ಷ ವಿಜಯಕುಮಾರ ತೆಗಲತಿಪ್ಪಿ, ನ್ಯಾಯವಾದಿ ಅಲಾವುದ್ದಿನ್ ಸಾಗರ, ಪಾಲಿಕೆ ಸದಸ್ಯ ಎಂ.ಡಿ.ಅಜಿಮೋದ್ದಿನ್ ಸಿರನಿ ಫರೋಷ್, ಪರ್ತಕರ್ತ ಭವಾನಿಸಿಂಗ್ ಠಾಕೂರ, ಕರ್ನಾಟಕ ರಾಜ್ಯ ಸರಕಾರಿ ಅಲ್ಪ ಸಂಖ್ಯಾತರ ನೌಕರರ ಸಂಘದ ಜಿಲ್ಲಾಧ್ಯಕ್ಷ ಅಬ್ದುಲ್ ವಾಹಬ್, ಡಾ.ಅಸ್ಲಂ ಸಯಿದ್, ಅಸದಲಿ ಅನಸಾರಿ, ನವಾಬ್ ಖಾನ್, ಕರ್ನಾಟಕ ರಾಜ್ಯ ಸರಕಾರಿ ನಿವೃತ್ತ ಅಲ್ಪ ಸಂಖ್ಯಾತರ ನೌಕರರ ಸಂಘದ ಅಧ್ಯಕ್ಷ ಸೈಯದ್ ನಜಿರೋದ್ದಿನ್ ಮುತ್ತವಲ್ಲಿ ಸೇರಿದಂತೆ ಇತರರು ಇದ್ದರು.