ಕಲ್ಯಾಣ ಕರ್ನಾಟಕ ಸಾರಥಿ ಚಾಲಕರ ಅಭಿವೃದ್ಧಿ ಸಂಘದ ವತಿಯಿಂದ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ

ಕಲ್ಯಾಣ ಕರ್ನಾಟಕ ಸಾರಥಿ ಚಾಲಕರ ಅಭಿವೃದ್ಧಿ ಸಂಘದ ವತಿಯಿಂದ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ
ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದಲ್ಲಿ ಸುಮಾರು 20 ರಿಂದ 25 ಸಾವಿರ ಟ್ಯಾಕ್ಸಿ ಚಾಲಕರಿದ್ದು, ಕರ್ನಾಟಕ ಸರ್ಕಾರದ ಶಕ್ತಿ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ಬಸ್ ಪ್ರಯಣ ಮಾಡಲು ಉಚಿತ ಮಾಡಿದ್ದರಿಂದ ಟ್ಯಾಕ್ಸಿ ಚಾಲಕರಿಗೆ ತೊಂದರೆಯಾಗುತ್ತಿದೆ ಎಂದು ಕಲ್ಯಾಣ ಕರ್ನಾಟಕ ಸಾರಥಿ ಚಾಲಕರ ಅಭಿವೃದ್ಧಿ ಸಂಘದ ವತಿಯಿಂದ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.
ಸುಮಾರು 25 ಸಾವಿರ ಕುಟುಂಬಗಳು ಬಿದಿಗೆ ಬರುವ ಸಾಧ್ಯತೆ ಇರುತ್ತದೆ. ಹಾಗೂ ಡಿಜಲ್ ಮೊತ್ತ ಹೆಚ್ಚಿಗೆ ಆಗಿದ್ದರಿಂದ ಬಾಡಿಗೆ ಸಹ ಬಂದಿರುವುದಿಲ್ಲ. ಕರ್ನಾಟಕ ಸರ್ಕಾರ ಟ್ಯಾಕ್ಸಿ ಚಾಲಕರಿಗೆ ನಿಗಮ ಮಂಡಳಿ ಮಾಡಿದರು ಇಲ್ಲಿಯವರೆಗು ಯಾವುದೇ ಫಲಾನುಭವಿಗಳಿಗೆ ಅನಕೂಲವಾಗಿರುವುದಿಲ್ಲ. ಮಾನ್ಯರವರು ಟ್ಯಾಕ್ಸ್ ಚಾಲಕರ ಸಮಸ್ಯೆಯನ್ನು ಅರಿತುಕೊಂಡು ನಿಗಮ ಮಂಡಳಿಯಿAದ ಪ್ರಹಸಂಘಟಿತ ಕಾರ್ಮಿಕರ ಟ್ಯಾಕ್ಸಿ ಚಾಲಕರ ಕಾರ್ಡ ಶೀಘ್ರದಲ್ಲಿ ವಿತರಣೆ ಮಾಡಿ ಟ್ಯಾಕ್ಸಿ ಚಾಲಕರ ಸಮಸ್ಯೆಯನ್ನು ಸ್ಪಂದಿಸಿ ಮಾನ್ಯರವರು ಟ್ಯಾಕ್ಸಿ ಚಾಲಕರ ಅಭಿವೃದ್ಧಿಗೊಸ್ಕರ ಸರ್ಕಾರ ಎತ್ತಿಚ್ಚಿಕೊಂಡು ಟ್ಯಾಕ್ಸಿ ಚಾಲಕರ ಮಕ್ಕಳ ಶಿಕ್ಷಣ, ಆರೋಗ್ಯ, ಇನ್ಸುರೆನ್ಸ, ಮತ್ತು ದೊಡ್ಡ ಮಟ್ಟದ ಶಿಕ್ಷಣ, ಶಿಕ್ಷಣ ಸ್ಕಾಲರಶಿಫ, ಪೋಲಿಸ್ ಸಮಸ್ಯೆ, ಆಶ್ರಯ ಮನೆ, ಮತ್ತು ವಿದ್ಯಾಭ್ಯಸಕ್ಕೆ ತಕ್ಕಹಾಗೆ ಉದ್ಯೋಗ ಹಾಗು ವ್ಯಾಪಾರಕ್ಕಾಗಿ ಇತರೆ ಚಟುವಟಿಕೆಗಳಿಗೆ ಎತ್ತಿಚ್ಚಿಕೊಂಡು ಸೌಲಭ್ಯ ಒದಗಿಸಿಕೊಟ್ಟು ಹಾಗು ಬದುಕಲು ಅನಕುಲ ಮಾಡಿಕೊಡಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಸಾರಥಿ ಚಾಲಕರ ಅಭಿವೃದ್ಧಿ ಸಂಘದ ಸಂಸ್ಥಾಪಕ ಅರವಿಂದ ಕಮಲಾಪುರ, ಅಧ್ಯಕ್ಷ ಜಗದೀಶ್ ದೇಸಾಯಿ, ಉಪಾಧ್ಯಕ್ಷ ಸುಶೀಲಕುಮರ್ ಸರಜೋಳಗಿ, ಕಲ್ಯಾಣ ಕರ್ನಾಟಕ ಪ್ರಧಾನ ಕಾರ್ಯದರ್ಶಿ ಮಂಜುನಾಥ ಬಬಲಾದ, ರವಿಕುಮಾರ್ ರೆಡ್ಡಿ, ಮಹದೇವ್ ಪಾಟೀಲ್, ಸುನಿಲ್ ಸರಾಜೋಳಗಿ, ಶರಣು ಗೊಬ್ಬೂರು, ಶ್ರೀಮಂತ ಸಿರಸಾಗಿ ಸೇರಿದಂತೆ ಪದಾಧಿಕಾರಿಗಳು ಇದ್ದರು.