ಚೇತನ ಯುಥ್ ಫೋರಂ ಕನ್ನಡ ಮಾಧ್ಯಮ ವಿದ್ಯಾರ್ಥಿ ಕಿಶೋರ್ 97.4% ಅಂಕಗಳೊಂದಿಗೆ ರಾಜ್ಯ ಮಟ್ಟದಲ್ಲಿ ಕೀರ್ತಿ ತಂದುಕೊಟ್ಟ ಶ್ರೇಷ್ಠ ಸಾಧನೆ!

ಗಾಜಿಪೂರ, ಕಲಬುರಗಿ:ಚೇತನ ಯುಥ್ ಫೋರಂ ಕನ್ನಡ ಮಾಧ್ಯಮದ ಕಿಶೋರ್ ಅವರು ಈ ಸಾಲಿನ ಎಸ್ . ಎಸ್ ಎಲ್ ಸಿ ಪರೀಕ್ಷೆಯಲ್ಲಿ 97.4% ಅಂಕಗಳನ್ನು ಪಡೆದು, ಕನ್ನಡ ಮಾಧ್ಯಮದ ಗುಣಮಟ್ಟವನ್ನು ಮತ್ತೆ ಒಮ್ಮೆ ಪ್ರತಿಿಷ್ಠಿತವಾಗಿಸಿದ್ದಾರೆ. ಈ ಸಾಧನೆಯ ಮೂಲಕ ಅವರು ಕಲಬುರಗಿ ಜಿಲ್ಲೆಗೆ ಹಾಗೂ ಕನ್ನಡ ಅಭಿಮಾನಿಗಳಿಗೆ ಹೆಮ್ಮೆ ತರುವಂತಹ ಹೆಸರು ತಂದುಕೊಟ್ಟಿದ್ದಾರೆ.

ಸಾಮಾನ್ಯವಾಗಿ ಇಂಗ್ಲಿಷ್ ಮಾಧ್ಯಮವಿರುವ ವಿದ್ಯಾರ್ಥಿಗಳನ್ನೇ ಹೆಚ್ಚು ಗಮನಿಸುವ ಪರಿಸ್ಥಿತಿಯಲ್ಲಿ, ಕಿಶೋರ್ ತಮ್ಮ ಪರಿಶ್ರಮ, ನಿರಂತರ ಅಭ್ಯಾಸ ಹಾಗೂ ಗುರುಗಳ ಮಾರ್ಗದರ್ಶನದೊಂದಿಗೆ ಕನ್ನಡ ಮಾಧ್ಯಮದಲ್ಲಿಯೇ ಈ ಮಟ್ಟದ ಶ್ರೇಷ್ಠ ಫಲಿತಾಂಶ ಸಾಧಿಸಿದ್ದು ಗಮನಾರ್ಹವಾಗಿದೆ.

ಚೇತನ ಯುಥ್ ಫೋರಂ ಸಂಸ್ಥೆಯ ಹೆಮ್ಮೆ

ಸಂಸ್ಥೆಯ ಮುಖ್ಯೋಪಾಧ್ಯಾಯರು “ಇದು ನಮ್ಮ ಪ್ರತಿಷ್ಠೆಗೆ ಹೆಮ್ಮೆಯ ಕ್ಷಣ. ಕಿಶೋರ್ ಅವರಂತಹ ವಿದ್ಯಾರ್ಥಿಗಳು ಇತರರಿಗೂ ಪ್ರೇರಣೆ ನೀಡುತ್ತಾರೆ. ಕನ್ನಡದಲ್ಲಿ ಕಲಿತರೂ ಶ್ರೇಷ್ಠತೆ ಸಾಧಿಸಬಹುದೆಂಬುದಕ್ಕೆ ಇವರ ಸಾಧನೆ ಸಾಕ್ಷಿ” ಎಂದು ತಿಳಿಸಿದ್ದಾರೆ.

ಕಿಶೋರ್ ಭವಿಷ್ಯದಲ್ಲಿ ಉನ್ನತ ಪರೀಕ್ಷೆ ಬರೆಯುವ ಸಂಕಲ್ಪವಿರುವುದಾಗಿ ಹೇಳಿದ್ದಾರೆ. ಅವರು ಹೇಳಿದಂತೆ: “ನಾನು ಕನ್ನಡದಲ್ಲಿ ಕಲಿತುಕೊಂಡಿದ್ದೇನೆ. ಇದೇ ನನ್ನ ಶಕ್ತಿ. ನಾನು ದೇಶಸೇವೆ ಮಾಡುವ ಕನಸು ಹೊಂದಿದ್ದೇನೆ.” ಎಂದು ಹೇಳಿದರು