ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಅವರು ದಿ.ಗುಂಡಪ್ಪ ಸಾಳಂಕಿ ನಿವಾಸಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ

ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಅವರು ದಿ.ಗುಂಡಪ್ಪ ಸಾಳಂಕಿ ನಿವಾಸಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ

ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಅವರು ದಿ.ಗುಂಡಪ್ಪ ಸಾಳಂಕಿ ನಿವಾಸಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ

ಕಲಬುರಗಿ: ಇತ್ತೀಚೆಗೆ ನಿಧನರಾದ ಕಲಬುರಗಿಯ ಜಿಲ್ಲಾ ಭೋವಿ ಸಮಾಜದ ಜಿಲ್ಲಾಧ್ಯಕ್ಷ ಗುಂಡಪ್ಪ ಸಾಳಂಕಿ ಅವರ ನಿವಾಸಕ್ಕೆ ಬಾಗಲಕೋಟೆ ಭೋವಿ ಗುರುಪೀಠದ ಪೀಠಾಧಿಪತಿ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಇದೇ ವೇಳೆ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಮಾತನಾಡಿ ದಿಕ್ಕೆಟ್ಟವರ ದಿಕ್ಕು, ನೊಂದವರ ಬಂಧು, ಶ್ರಮಿಕ ವರ್ಗದ ಆಸ್ತಿ, ದನಿಯಿಲ್ಲದವರ ದನಿ, ಕೊಡುಗೈ ದಾನಿಯಾದವರು, ಭೋವಿ ವಡ್ಡರ ಸಮಾಜದ ಗರ್ವ, ಹೆಮ್ಮೆ, ಬಡವರ ಬಾಳಿನ ಜ್ಯೋತಿ, ಶೋಷಿತ ಹಾಗೂ ಶ್ರಮಿಕ ಸಮಾಜವಾದ ಭೋವಿ ಸಮಾಜದ ಏಳಿಗೆಗಾಗಿ ಶ್ರಮಿಸುತ್ತಿದ್ದ ಗುಂಡಪ್ಪ ಸಾಳಂಕಿ ಅವರ ಅಕಾಲಿಕ ನಿಧಾನರಾಗಿದರಿಂದ ಸಮಾಜಕ್ಕೆ ತುಂಬಲಾರದ ನಷ್ಟ ಎಂದು ಹೇಳಿದರು. 

ಈ ವೇಳೆ ಶಾಸಕರಾದ ಅಲ್ಲಮಪ್ರಭು ಪಾಟೀಲ, ಬಸವರಾಜ ಮತ್ತಿಮೂಡ್, ಸಮಾಜದ ಮುಖಂಡರಾದ ಮಲ್ಲಿಕಾರ್ಜುನ ಕುಸ್ತಿ, ತಿಪ್ಪಣ್ಣ ಒಡೆಯರಾಜ , ಡಾ.ಮಲ್ಲಿಕಾರ್ಜುನ ಚೌದರಿ, ಶ್ರೀಕೃಷ್ಣ ಕುಶಲ್ಕರ್, ಪರಶುರಾಮ ಮಾಡ್ಯಾಳ, ರಾಜು ಎಂಪುರೆ, ದೇವೇಂದ್ರ ನಡುವಿನಮನಿ, ಗಂಗಾರಾಮ್ ಹಾಗರಾಗಿ ನಡುವಿನಮನಿ, ಮನೋಜ್ ಜಾದವ್, ಪರಶುರಾಮ ಮಾಡೆಳ, ಗುರಪ್ಪ ಸಾಳಂಕಿ, ಅರ್ಜುನ್ ಇಟ್ಗರ್, ಅನಿಲ್ ಸಾಳಂಕಿ, ದಸರಥ ಸಾಳಂಕಿ, ಶಿವಶಂಕರ, ನಾಗೇಶ ಸೇರಿದಂತೆ ಇತರರು ಹಾಜರಿದ್ದರು.