ಸಿನಿಮಾ ಸಂಗೀತ ನಿರ್ದೇಶಕ ವಿ. ಮನೋಹರ್ ಜೊತೆ ಆಕಾಶವಾಣಿ ನೇರ ಫೋನ್ ಕಾರ್ಯಕ್ರಮ ನಾಳೆ
ಸಿನಿಮಾ ಸಂಗೀತ ನಿರ್ದೇಶಕ ವಿ. ಮನೋಹರ್ ಜೊತೆ ಆಕಾಶವಾಣಿ ನೇರ ಫೋನ್ ಕಾರ್ಯಕ್ರಮ ನಾಳೆ
ಕಲಬುರಗಿ: ರಾಷ್ಟ್ರಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ, ಬಹುಭಾಷಾ ನಟ, ನಿರ್ದೇಶಕ, ಗೀತ ಸಾಹಿತ್ಯ ರಚನೆಕಾರ, ವಿ ಮನೋಹರ್ ಕಲಬುರಗಿ ಆಕಾಶವಾಣಿಯಲ್ಲಿ ಡಿಸೆಂಬರ್ 4ರಂದು ಮಧ್ಯಾಹ್ನ 11 ರಿಂದ 12 ರ ವರೆಗೆ ಕಲ್ಯಾಣವಾಣಿ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಸಿನಿಮಾರಂಗದ ಇತ್ತೀಚಿನ ಬೆಳವಣಿಗೆಗಳ ಕುರಿತಂತೆ
" ಬದಲಾಗುತ್ತಿರುವ ಸಿನಿಮಾ ರಂಗ " ಎಂಬ ವಿಷಯದ ಕುರಿತಾಗಿ ವಿ. ಮನೋಹರ್ ಕೇಳುಗರ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ. ಸಿನಿಮಾದಲ್ಲಿ ಕೃತಕ ಬುದ್ಧಿಮತ್ತೆ (ಎ ಐ) ಬಳಕೆ, ಅನಿಮೇಶನ್ ತಂತ್ರಜ್ಞಾನ ಅಳವಡಿಕೆ , ಕಥಾ ವಸ್ತುಗಳ ಬದಲಾವಣೆ, ಡಿಜಿಟಲ್ ಸ್ಪರ್ಶ ಮುಂತಾದವುಗಳ ಕುರಿತಾಗಿ ಬದಲಾಗುತ್ತಿರುವ ಸಿನಿಮಾ ರಂಗದ ಬಗ್ಗೆ ಸಂವಾದ ನಡೆಸಬಹುದು ಎಂದು ಆಕಾಶವಾಣಿಯ ಕಾರ್ಯಕ್ರಮ ಮುಖ್ಯಸ್ಥರಾದ ಸಿದ್ದಣ್ಣ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಸಕ್ತ ಕೇಳುಗರು ವಿ.ಮನೋಹರ್ ಅವರ ಜೊತೆ ಸಂವಾದ ನಡೆಸಲು ಆಕಾಶವಾಣಿ ಕೇಂದ್ರದ ದೂರವಾಣಿ ಸಂಖ್ಯೆ 295986,295987 ಮತ್ತು 310105 (ಎಸ್ ಟಿ ಡಿ 08472) ಇವುಗಳನ್ನು ಸಂಪರ್ಕಿಸಬಹುದು
