ಭಂಕೂರ : ಪ್ರೌಢ ಶಾಲಾ ವಿಧ್ಯಾರ್ಥಿಗಳ ಚಿತ್ರಕಲಾ ಸ್ಪರ್ಧೆ

ಭಂಕೂರ : ಪ್ರೌಢ ಶಾಲಾ ವಿಧ್ಯಾರ್ಥಿಗಳ ಚಿತ್ರಕಲಾ ಸ್ಪರ್ಧೆ

ಭಂಕೂರ : ಪ್ರೌಢ ಶಾಲಾ ವಿಧ್ಯಾರ್ಥಿಗಳ ಚಿತ್ರಕಲಾ ಸ್ಪರ್ಧೆ 

ವರದಿ ನಾಗರಾಜ್ ದಂಡಾವತಿ ಕಲ್ಯಾಣ ಕಹಳೆ ವಾರ್ತೆ

ಶಹಾಬಾದ : - ಬಸವ ಸಮಿತಿ ಪ್ರೌಢಶಾಲೆ ಭಂಕೂರ ಹಾಗೂ ಚಿತ್ರ ಕಲಾವಿದ ಮೊಮ್ಮದ್ ಕಧೀರ್ ನಿವೃತ್ತ ಶಿಕ್ಷಕ ಇವರ ಸಂಯುಕ್ತ ಆಶ್ರಯದಲ್ಲಿ ದಿವಂಗತ ಸಿಸ್ಟರ್ ಅಂಜಲಿಟಾ ಅವರ ಸ್ಮರಣಾರ್ಥವಾಗಿ ಬಸವ ಸಮಿತಿ ಶಾಲೆಯ ಆವರಣದಲ್ಲಿ ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬಸವ ಸಮಿತಿ ಶಾಲೆಯ ಅಧ್ಯಕ್ಷರಾದ ರೇವಣಸಿದ್ದಪ್ಪ ಮುಸ್ತಾರಿ, ರಾಷ್ಟ್ರಪ್ರಶಸ್ತಿ ಪುರಸ್ಕೃತ ಚಿತ್ರ ಕಲಾವಿದ ಮಮ್ಮದ್ ಕಧೀರ್, ಅಮೃತ್ ಮಾನ್ಕರ, ಸಿದ್ದಣ್ಣ ರಸ್ತಾಪುರ, ಶಿವಶರಣಪ್ಪ ಜಟ್ಟೂರ, ಮುಖ್ಯ ಶಿಕ್ಷಕಿ ಗೀತಾ ಗೋಟೂರ, ದತ್ತಾತ್ರೇಯ ಕುಲಕರ್ಣಿ ಉಪಸ್ಥಿರಿದರು. 

ಚಿತ್ರಕಲಾ ಸ್ಪರ್ಧೆಯಲ್ಲಿ 10ನೇ ತರಗತಿಯ ಭವಾನಿ ಅರವಿಂದ : ಪ್ರಥಮ ಸ್ಥಾನ, ಮಹೇಬೂಬ ರುಕ್ಮೊದ್ದೀನ : ದ್ವೀತಿಯ ಸ್ಥಾನ, ಮತ್ತು ಮಲ್ಲಿಕಾರ್ಜುನ್ ಬಸವರಾಜ್ ಇವರಿಗೆ ಸಮಾಧಾನಕರ ಬಹುಮಾನ ನೀಡಲಾಯಿತು.

ವಿಶೇಷವಾಗಿ ಹತ್ತನೇಯ ತರಗತಿಯ ವಿದ್ಯಾರ್ಥಿ ರಿತೀಕಾ ರಘುವೀರ್ ಅವರಿಗೆ ಅತ್ಯುತ್ತಮ ವಿದ್ಯಾರ್ಥಿ ಎಂದು ಗುರುತಿಸಿ ಸನ್ಮಾನಿಸಲಾಯಿತು.

ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಹಾಗೂ ಸ್ಮರಣ ಕಾಣಿಕೆ ನೀಡಿ ಗೌರವಿಸಲಾಯಿತು.