ಕಲಬುರಗಿ ವಿಮಾನ ನಿಲ್ದಾಣಕ್ಕೆ ಶರಣಬಸವೇಶ್ವರ ನಾಮಕರಣ ಮಾಡಲು ಟ್ವಿಟ್ಟರ್ ಅಭಿಯಾನ

ಕಲಬುರಗಿ ವಿಮಾನ ನಿಲ್ದಾಣಕ್ಕೆ ಶರಣಬಸವೇಶ್ವರ ನಾಮಕರಣ ಮಾಡಲು ಟ್ವಿಟ್ಟರ್ ಅಭಿಯಾನ

ಶ್ರೀಧರ್ ಎವ್ ನಾಗನಹಳ್ಳಿ

ಕಲಬುರಗಿ : ವೀರಶೈವ ಲಿಂಗಾಯತ ಮಹಾ ವೇದಿಕೆವತಿಯಿಂದ ಪ್ರಶಾಂತ್ ಕಲ್ಲೂರ್ ನೇತ್ರತ್ವದಲ್ಲಿ ಕಲ್ಯಾಣ ಕರ್ನಾಟಕದ ಹೆಬ್ಬಾಗಿಲಗಿರುವ ತೊಗರಿಕಣಿಜ ಕಲಬುರ್ಗಿಯ ಆರಾಧ್ಯ ದೈವ ಮಹಾ ದಾಸೋಹಿ ಶ್ರೀ ಶರಣಬಸವೇಶ್ವರ ಹೆಸರನ್ನು ಕಲಬುರಗಿ ವಿಮಾನ ನಿಲ್ದಾಣಕ್ಕೆ ನಾಮಕರಣ ಮಾಡಬೇಕೆಂದು ಟ್ವಿಟ್ಟರ್ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀಧರ್ , ನಾಗನಹಳ್ಳಿ ತೀಳಿಸಿದರು.

ಮಹಾ ದಾಸೋಹಿ ಶ್ರೀ ಶರಣಬಸವೇಶ್ವರ ಹೆಸರನ್ನು ಕಲಬುರಗಿ ವಿಮಾನ ನಿಲ್ದಾಣಕ್ಕೆ ನಾಮಕರಣ ಮಾಡಬೇಕೆಂದು ವೀರಶೈವ ಲಿಂಗಾಯತ ಮಹಾ ವೇದಿಕೆ ಹೋರಾಟ ಮಾಡುಡಿ ಮನವಿ ಪತ್ರಗಳನ್ನು ಸಲ್ಲಿಸಿದರು ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ .

ಇನ್ನು ಮುಂದಾದರು ವಿಮಾನ ನಿಲ್ದಾಣಕ್ಕೆ ಶರಣಬಸವೇಶ್ವರ ನಾಮಕರಣ ಮಾಡಬೇಕೆಂದು . 3-8-2024 ರಂದು ಟ್ವಿಟ್ಟರ್ ಅಭಿಯಾನ ಮಾಡುತ್ತಿದ್ದಾರೆ. 

ಶರಣಬಸವೇಶ್ವರ ಭಕ್ತರು ವೀರಶೈವ ಲಿಂಗಾಯತ್ ಮುಖಂಡರು ,ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವದು ಎಂದೂ ವೀರಶೈವ ಲಿಂಗಾಯತ ಮಹಾ ವೇದಿಕೆಯ ಜಿಲ್ಲಾ ಅಧ್ಯಕ್ಷರಾದ ಶ್ರೀ ದಯಾನಂದ ಎಮ್ ಪಾಟೀಲ್ ಪತ್ರಿಕಾ ಮೂಲಕ ತಿಳಿಸಿದ್ದಾರೆ. 

ಈ ಸಂಧರ್ಭದಲ್ಲಿ ಮಹಾ ವೇದಿಕೆ ಜಿಲ್ಲಾ ಉಪಾಧ್ಯಕ್ಷರಾದ ಕಲ್ಯಾಣರಾವ ಪಾಟೀಲ್ ಕಣ್ಣಿ, ಪ್ರಧಾನ್ ಕಾರ್ಯದರ್ಶಿ ಸುನೀಲ್ ಮಹಾಗವ್ಕಾರ, ಕಾರ್ಯದರ್ಶಿ ಮಹೇಶ್ಚಂದ್ರ ಪಾಟೀಲ್ ಕಣ್ಣಿ, ಜಿಲ್ಲಾ ಸಂಘಟನ ಕಾರ್ಯದರ್ಶಿ ಆನಂದ್ ಕಣಸೂರ್ ಮತ್ತು ಸಹ ಕಾರ್ಯದರ್ಶಿ ಪರಮೇಶ್ವರ್ ಯಲಮೇಲಿ, ಜಿಲ್ಲಾ ಸಂಚಾಲಕರಾದ ಸತೀಶ್ ಮಾಹುರ್, ಗುರುರಾಜ್ ಅಂಬಾಡಿ, ಸತೀಶ್ ಕೋಣಿನ್, ಕಿರಣ್ ಕಣ್ಣಿ, ಗುರುರಾಜ್ ಸುಂಟನೂರ್, ಮತ್ತು ಸದ್ಯಸರಾದ ಪ್ರಜ್ವಲ್, ಸಚಿನ್, ಶ್ರೀಕಾಂತ್ ಬಿರಾದರ, ಆಕಾಶ್ ಕುಲಕರ್ಣಿ ಉಪಸ್ಥಿತರಿದ್ದರು