ಕನ್ನಡ ಸಿನಿಮಾಗಳಿಗೆ ರಾಷ್ಟ್ರ ಮಟ್ಟದ ಪ್ರಶಸ್ತಿ ಡಾ ಅಂಬಾರಾಯ ಅಷ್ಠಗಿ ಸಂತಸ
ಕಲಬುರಗಿ :೧೭ನೇ ಆಗಸ್ಟ್,
70ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಪ್ರಕಟವಾಗಿದ್ದು ಕನ್ನಡದ ಕಾಂತಾರ ಎಲ್ಲ ಭಾಷೆಗಳ ಚಿತ್ರಗಳನ್ನೂ ಮೀರಿ, ಅತ್ಯುತ್ತಮ ಚಿತ್ರವಾಗಿ ಹೊರಹೊಮ್ಮಿದೆ. ಅದೇ ರೀತಿ ಇದೇ ಚಿತ್ರದ ನಟನೆಗೆ ನಟ ರಿಷಭ್ ಶೆಟ್ಟಿ ಅವರು ಅತ್ಯುತ್ತಮ ನಟ ಪ್ರಶಸ್ತಿಯನ್ನೂ ಪಡೆದಿದ್ದಕ್ಕೆ ಹಾಗೂ
ಅತ್ಯುತ್ತಮ ಕನ್ನಡ ಸಿನಿಮಾ ರಾಷ್ಟ್ರ ಪ್ರಶಸ್ತಿ ವಿಭಾಗದಲ್ಲಿ ನಟ ಯಶ್ ಅವರ ನಟನೆಯ ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಕೆಜಿಎಫ್ ಚಾಪ್ಟರ್ 2 ಚಿತ್ರ ಪ್ರಶಸ್ತಿ ಪಡೆದುಕೊಂಡಿದ್ದು ಈ ಇಬ್ಬರೂ ಭರವಸೆಯ ನಟರಿಗೆ ಹಾಗೂ ನಿರ್ದೇಶಕರಿಗೆ ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷರಾದ ಡಾ ಅಂಬಾರಾಯ ಅಷ್ಠಗಿ ಯವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
'ನಾಡಿನ ಪ್ರಕೃತಿ, ಸ್ಥಳೀಯ ಸೊಗಡು ದೈವಾರಾಧನೆಯ ಶ್ರೀಮಂತ ಪರಂಪರೆಯನ್ನು ಅದ್ಭುತವಾಗಿ ಚಿತ್ರೀಕರಿಸಿ, ವಿಶ್ವದೆಲ್ಲೆಡೆ ತನ್ನ ಕೀರ್ತಿ ಪಸರಿಸಿರುವ ಕಾಂತಾರ ಚಿತ್ರತಂಡಕ್ಕೆ ಹಾಗೂ ಕನ್ನಡಿಗರ ಕೀರ್ತಿ ಹೆಚ್ಚಿಸಿದ ಕೆಜಿಎಫ್ -2 ಚಿತ್ರತಂಡಗಳ ಯಶಸ್ಸು ನಾಡಿನ ಹೆಮ್ಮೆಯ ಸಂಗತಿ ಎಂದು ಡಾ ಅಂಬಾರಾಯ ಅಷ್ಠಗಿ ಹೇಳಿದ್ದಾರೆ.