ಕನ್ನಡ ಭಾಷಾ ಕಡೆಗಣನೆ ಖಂಡಿಸಿ, ಕೆ.ಎ.ಎಸ್ ಪೂರ್ವಭಾವಿ ಪರೀಕ್ಷೆಗೆ ಮರು ಪರೀಕ್ಷೆ ನಡೆಸಲು ನಡಗೇರಿ ಆಗ್ರಹ.
ಕನ್ನಡ ಭಾಷಾ ಕಡೆಗಣನೆ ಖಂಡಿಸಿ, ಕೆ.ಎ.ಎಸ್ ಪೂರ್ವಭಾವಿ ಪರೀಕ್ಷೆಗೆ ಮರು ಪರೀಕ್ಷೆ ನಡೆಸಲು ನಡಗೇರಿ ಆಗ್ರಹ.
ಅಗಷ್ಟ ೨೭ ರಂದು ಕರ್ನಾಟಕ ಲೋಕಸೇವಾ ಆಯೋಗದ ಕೆ.ಎಸ್. ಪೂರ್ವಭಾವಿ ಪರೀಕ್ಷೆಯ ಪತ್ರಿಕೆಗಳಲ್ಲಿ ಕನ್ನಡ ಭಾಷೆಗೆ ಸಂಬಂಧಿಸಿದಂತೆ, ಪ್ರಶ್ನೆ ಪತ್ರಿಕೆಗಳಲ್ಲಿ ಹಲವು ಗೊಂದಲಗಳು, ಅಸಂಬದ್ದತೆ ಮತ್ತು ಕನ್ನಡ ಕಡೆಗಣಿಸುತ್ತಿರುವ ಕೆ.ಪಿ.ಎಸ್.ಸಿ ಆಯೋಗದವರ ವಿರುದ್ದ ಸೂಕ್ತಕ್ರಮ ಕೈಗೊಳ್ಳುವಂತೆ, ಕಲ್ಯಾಣ ನಾಡು ವಿಕಾಸ ವೇದಿಕೆ ವತಿಯಿಂದ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಯವರಿಗೆ ಮನವಿ ಮೂಲಕ ಆಗ್ರಹ ಮಾಡಲಾಯಿತು.
ಕೆ.ಪಿ.ಎಸ್.ಸಿಯು ಕನ್ನಡ ಮತ್ತು ಕನ್ನಡರಿಗೆ ದ್ರೋಹ ಬಗೆಯುತ್ತಿದ್ದು, ಕನ್ನಡ ಮನಸ್ಸುಗಳಿಗೆ ನೋವುಂಟು ಮಾಡುತ್ತಿದೆ, ಕರ್ನಾಟಕದಲ್ಲಿ ಕನ್ನಡ ಮತ್ತು ಕನ್ನಡಿಗನೆ ಸಾರ್ವಭೌಮನಾಗಿರುತ್ತಾನೆ. ಕರ್ನಾಟಕ ರಾಜ್ಯದಲ್ಲಿ ನಡೆಯುವ ಪರೀಕ್ಷೆಯಲ್ಲಿ ಕನ್ನಡ ಭಾಷಯನ್ನು ಉದ್ದೇಶಪೂರ್ವಕವಾಗಿ ಕಡೆಗಣಿಸುವ ಕೃತ್ಯ ನಡೆಯುತ್ತಿದೆ. ರಾಜ್ಯದಲ್ಲಿ ನಡೆಯುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕನ್ನಡ ಭಾಷೆಯಲ್ಲಿ ಒಂದಿಲ್ಲ ಒಂದು ರೀತಿಯ ಗೊಂದಲಗಳು ಮೊದಲಿನಿಂದಲು ವ್ಯವಸ್ಥಿತವಾಗಿ ನಡೆಯುತ್ತಾ ಬಂದಿರುತ್ತವೆ.
ಕನ್ನಡ ಗೊತ್ತಿಲ್ಲದ ವ್ಯಕ್ತಿಗಳ ಕೈಯಿಂದ ಪರೀಕ್ಷೆ ನಡೆಸಿದರೆ, ಮುಂದೆಯು ಇದೇ ರೀತಿಯಾಗುತ್ತದೆ. ಅದಕ್ಕಾಗಿ ಸರಕಾರದ ವತಿಯಿಂದ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಯನ್ನು ತಯಾರಿಸುವಲ್ಲಿ ನುರಿತ ಕನ್ನಡ ಭಾಷಾ ತಜ್ಞರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಸಾಹಿತ್ಯ ಪರಿಷತ್ತು ಮತ್ತು ವಿಶ್ವವಿದ್ಯಾಲಯಗಳಲ್ಲಿನ ಕನ್ನಡ ಪ್ರಾಧ್ಯಾಪಕರನ್ನು ಗಣನೆಗೆ ತೆಗೆದುಕೊಳ್ಳಬೇಕು. ಕನ್ನಡ ಬಲ್ಲವರನ್ನು ಮಾತ್ರ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಾಧಿಕಾರ ಮತ್ತು ಆಯೋಗಗಳಿಗೆ ಅಧ್ಯಕ್ಷರು ಮತ್ತು ಅಧಿಕಾರಿಗಳನ್ನಾಗಿ ನೇಮಿಸಬೇಕು.
ಕೆ.ಪಿ.ಎಸ್.ಸಿ ಯು ಪ್ರತಿಯೊಂದು ಪರೀಕ್ಷೆಗಳಲ್ಲಿ ವ್ಯಾಪಕ ಬ್ರಷ್ಟಾಚಾರ ಮತ್ತು ಹಲವಾರು ಅಕ್ರಮಗಳಲ್ಲಿ ನಿರತರಾಗಿದ್ದು, ಇದರಿಂದ ಕನ್ನಡ ಮತ್ತು ಕನ್ನಡಿಗ ಸ್ಪರ್ಧಾರ್ಥಿಗಳಿಗೆ ಮೋಸ್‌ವಾಗುತ್ತಿದೆ. ಪರೀಕ್ಷೆಗಳನ್ನು ಸರಿಯಾಗಿ ನಡೆಸಲು ಆಗದಿದ್ದರೆ, ಕೇಂದ್ರ ಲೋಕಸೇವಾ ಆಯೋಗಕ್ಕೆ ಸ್ಪರ್ಧಾತ್ಮಕ ಪರೀಕ್ಷಾ ನೇಮಕಾತಿ ಮಾಡಿಕೊಡುವ ಬಗ್ಗೆ, ರಾಜ್ಯ ಸರಕಾರವು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಬೇಕು. ಕೆ.ಪಿ.ಎಸ್.ಸಿ ಯು ಬ್ರಷ್ಟಾಚಾರ ಮತ್ತು ಕನ್ನಡ ಭಾಷಾ ವಿರೋಧಿ ಕೃತ್ಯವನ್ನು ಮುಂದುವರೆಸಿದರೆ ಕೆ.ಪಿ.ಎಸ್.ಸಿ ತೆಗೆಯಿರಿ-ಕನ್ನಡವನ್ನು ಉಳಿಸಿರಿ ಎಂಬ ಆಂದೋಲನವನ್ನು ಕನ್ನಡಿಗರು ಮಾಡಬೇಕಾಗುತ್ತದೆ ಎಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಕನ್ನಡ ಸ್ಪರ್ಧಾರ್ಥಿಗಳಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಲು ರಾಜ್ಯ ಸರಕಾರುವ ಈ ಕೂಡಲೇ ಕೆ.ಎ.ಎಸ್ ಪೂರ್ವಭಾವಿ ಪರೀಕ್ಷೆಗೆ ಮರು ಪರೀಕ್ಷೆಯನ್ನು ಮಾಡಬೇಕೆಂದು ಈ ಮೂಲಕ ಸಮಸ್ತ ಕನ್ನಡಿಗರ ಪರವಾಗಿ ಮುಖ್ಯ ಮಂತ್ರಿಯವರಲ್ಲಿ. ಜಿಲ್ಲಾಧಿಕಾರಿಗಳ ಮುಖಾಂತರ ಮನವಿ ಸಲ್ಲಿಸಿದರು .
ಈ ಸಂದರ್ಭದಲ್ಲಿ ಸಂಸ್ಥಾಪಕ ಅಧ್ಯಕ್ಷರಾದ ಮುತ್ತಣ ಎಸ್. ನಡಗೇರಿ, ಜಿಲ್ಲಾಧ್ಯಕ್ಷರಾದ ಬಾಬು ಮದನಕರ, ಜೈಭೀಮ ಮಾಳಗೆ, ಮೋಹನ ಸಾಗರ, ಪ್ರವೀಣ ಖೇಮನ, ಮಲ್ಲು ದೊರೆ, ಅಶೋಕ ಕಾಳಮಂದರಗಿ, ರಾಣೇಶ ಸಾವಳಗಿ, ಜೀವನ ಖಿರಸಾಗರ, ಮಹೇಶ ಮಾನೆ, ಹಾಗೂ ಇತರರು ಇದ್ದರು.
ಮುತ್ತಣ ಎಸ್. ನಡಗೇರಿ,ಸಂಸ್ಥಾಪಕ ಅಧ್ಯಕ್ಷರು