ಶಾಸಕ ಅಲ್ಲಮಪ್ರಭು ಪಾಟೀಲನಿಂದ ನಿಯಮ ಉಲ್ಲಂಘನೆ, ಕ್ರಮಕ್ಕೆ ಒತ್ತಾಯ

ಶಾಸಕ ಅಲ್ಲಮಪ್ರಭು ಪಾಟೀಲನಿಂದ ನಿಯಮ ಉಲ್ಲಂಘನೆ, ಕ್ರಮಕ್ಕೆ ಒತ್ತಾಯ

ಗೊಲ್ಲಾಳೇಶ್ವರ ಸಂಘಕ್ಕೆ ಸಿಎ ನಿವೇಶನ: ರದ್ದು ಮಾಡಲು ಆಗ್ರಹ

ಶಾಸಕ ಅಲ್ಲಮಪ್ರಭು ಪಾಟೀಲನಿಂದ ನಿಯಮ ಉಲ್ಲಂಘನೆ, ಕ್ರಮಕ್ಕೆ ಒತ್ತಾಯ

ಕಲಬುರಗಿ: ಇಲ್ಲಿನ ದರಿಯಾಪುರ–ಕೋಟನೂರು ಯೋಜನೆಯಲ್ಲಿ ಕನ್ನಡ ಶಾಲೆಯನ್ನು ನಿರ್ಮಿಸುವ ಉದ್ದೇಶದಿಂದ ಗೊಲ್ಲಾಳೇಶ್ವರ ವಿದ್ಯಾವರ್ಧಕ ಸಂಘಕ್ಕೆ ಸಿಎ ನಿವೇಶನ ಪಡೆದ ಶಾಸಕ ಅಲ್ಲಮಪ್ರಭು ಪಾಟೀಲ್ ಅವರು ನಿಯಮ ಉಲ್ಲಂಘಿಸಿ ಬೇರೆ ಕಾಲೇಜಿಗೆ ಆ ಜಾಗವನ್ನು ಬಾಡಿಗೆಯಾಗಿ ನೀಡಿದ್ದಾರೆ. ಅಧಿಕಾರಿಗಳು ಮಧ್ಯ ಪ್ರವೇಶ ಮಾಡಿ ಸಿಎ ನಿವೇಶನ ರದ್ದು ಮಾಡಬೇಕು ಎಂದು ಜೆಡಿಎಸ್‌ ಮುಖಂಡ ಕೃಷ್ಣಾರೆಡ್ಡಿ ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರಾಭಿವೃದ್ಧಿ ಪ್ರಾಧಿಕಾರವು 2005ರಲ್ಲಿ ಸಿಎ ನಿವೇಶನ ಸಂಖ್ಯೆ 28ಅನ್ನು ಗೊಲ್ಲಾಳೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಹಾಗೂ ಈಗಿನ ಶಾಸಕ ಅಲ್ಲಮಪ್ರಭು ಪಾಟೀಲ್ ಅವರಿಗೆ ಕನ್ನಡ ಶಾಲೆ ನಡೆಸುವ ಉದ್ದೇಶದಿಂದ ಹಂಚಿಕೆ ಮಾಡಿದೆ. ಆದರೆ 2011ರಲ್ಲಿ ಗೊಲ್ಲಾಳೇಶ್ವರ ಶಿಕ್ಷಣ ಸಂಸ್ಥೆ ವತಿಯಿಂದ ಪದವಿಪೂರ್ವ ಕಾಲೇಜು ಹಾಗೂ ಇತರೆ ಶೈಕ್ಷಣಿಕ ಚಟುವಟಿಕೆ ನಡೆಸಲು ಅನು ಮತಿ ನೀಡಬೇಕು ಎಂದು ನಗರಾ ಭಿವೃದ್ಧಿ ಪ್ರಾಧಿಕಾರದ ಆಯುಕ್ತರಿಗೆ ಶಾಸಕರು ಪತ್ರ ಬರೆಯುತ್ತಾರೆ. ಉದ್ದೇಶ ಬದಲು ಮಾಡಲು ಅವಕಾಶವಿರುವುದಿಲ್ಲ ಎಂದು ಆಯುಕ್ತರು ಹಿಂಬರಹ ನೀಡಿದ್ದಾರೆ ಎಂದು ಹೇಳಿದರು.

ಆದರೂ ಸಹ ಕಾನೂನು ಉಲ್ಲಂಘನೆ ಮಾಡಿ ನಳಂದ ವಿದ್ಯಾಸಂಸ್ಥೆಗೆ 10 ವರ್ಷಗಳಿಂದ ಬಾಡಿಗೆ ನೀಡಿದ್ದಾರೆ. ಗೊಲ್ಲಾಳೇಶ್ವರ ಶಿಕ್ಷಣ ಸಂಸ್ಥೆಗೆ ನೀಡಿದ ನಿವೇಶನವನ್ನು ನಗರಾಭಿವೃದ್ಧಿ ಇಲಾಖೆ ತನ್ನ ಸುಪರ್ದಿಗೆ ತೆಗೆದುಕೊಳ್ಳಬೇಕು. ಇಲ್ಲವಾದರೆ ನಗರಾಭಿವೃದ್ಧಿ ಕಚೇರಿ ಮುಂದೆ ಧರಣಿ ಸತ್ಯಾಗ್ರಹ ಮಾಡಲಾಗುವುದು ಎಂದು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದ್ದಾರೆ.