ಗ್ರಾಮೀಣ ಪತ್ರಕರ್ತರ ಬಸ್ ಪಾಸ್ ;̊ ಸರಕಾರದ ತಾರತಮ್ಯ ನೀತಿ ಬಾರಿ ಮಾನದಂಡಗಳಿಗೆ ಮಹೇಶ್ ಪಾಟೀಲ್ ಕಡಕೋಳ ಆಕ್ರೋಶ.

ಗ್ರಾಮೀಣ ಪತ್ರಕರ್ತರ ಬಸ್ ಪಾಸ್ ;̊ ಸರಕಾರದ ತಾರತಮ್ಯ ನೀತಿ ಬಾರಿ ಮಾನದಂಡಗಳಿಗೆ ಮಹೇಶ್ ಪಾಟೀಲ್ ಕಡಕೋಳ ಆಕ್ರೋಶ.

ಗ್ರಾಮೀಣ ಪತ್ರಕರ್ತರ ಬಸ್ ಪಾಸ್ ;̊ ಸರಕಾರದ ತಾರತಮ್ಯ ನೀತಿ ಬಾರಿ ಮಾನದಂಡಗಳಿಗೆ ಮಹೇಶ್ ಪಾಟೀಲ್ ಕಡಕೋಳ ಆಕ್ರೋಶ.

̊ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರಕಾರ ಹೊರಡಿಸಿರುವ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಎನ್ನುವ ಸರಕಾರದ ಆದೇಶವು ಅವಜ್ಞಾನಿಕತೆಯಿಂದ ಕೂಡಿದ್ದಾಗಿದೆ ಎಂದು ನಮ್ಮ ಕರ್ನಾಟಕ ಸೇನೆ ಯಡ್ರಾಮಿ ತಾಲೂಕ ಅಧ್ಯಕ್ಷರಾದ ಮಹೇಶ್ ಪಾಟೀಲ್ ಕಡಕೋಳ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ

ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶದಿಂದ ಸ್ಥಳೀಯ ಪತ್ರಕರ್ತರಿಗೆ ಮಲತಾಯಿ ಧೋರಣೆ ತೋರಲಾಗಿದೆ ಇದರಿಂದ ಸ್ಥಳೀಯ ಪತ್ರಕರ್ತರಿಗೆ ತುಂಬಾ ಅನ್ಯಾಯವಾಗಿದೆ ಆದ್ದರಿಂದ ರಾಜ್ಯ ಸರ್ಕಾರವು ಈ ಆದೇಶವನ್ನು ಮತ್ತೊಮ್ಮೆ ಪರಿಶೀಲಿಸಿ ಗ್ರಾಮೀಣ ಭಾಗದ ಪತ್ರಕರ್ತರಿಗಾಗಿ ಸೂಕ್ತವಾದ ನಿಯಮ ಮಾನದಂಡಗಳನ್ನು ನೀಡಿ ಮತ್ತೊಮ್ಮೆ ಆದೇಶ ನೀಡಬೇಕು ಒಂದು ವೇಳೆ ನಿರ್ಲಕ್ಷ್ಯ ವಹಿಸಿದರೆ ಯಡ್ರಾಮಿ ತಾಲೂಕಿನ ವಿವಿಧ ಸಂಘಟನೆಗಳ ಒಕ್ಕೂಟದೊಂದಿಗೆ ಹಾಗೂ ಪತ್ರಕರ್ತರ ಸಮೂಹದೊಂದಿಗೆ ಹಾಗೂ ನಮ್ಮ ಕರ್ನಾಟಕ ಸೇನಾ ಕಾರ್ಯಕರ್ತರೊಂದಿಗೆ ಯಡ್ರಾಮಿ ತಾಲೂಕಿನ ರಸ್ತಾರೋಕೊ ಚಳುವಳಿ ಹಮ್ಮಿಕೊಂಡು ಸರಕಾರಕ್ಕೆ ಬಿಸಿ ಮುಟ್ಟಿಸಬೇಕಾಗುತ್ತದೆ ಎಂದು ಹೇಳಿದರು

ಅದೇ ರೀತಿಯಾಗಿ ಕರ್ನಾಟಕ ರಾಜ್ಯದಲ್ಲಿ ಕೇವಲ ಆಧಾರ್ ಕಾರ್ಡ್ ತೋರಿಸಿ ರಾಜ್ಯದ್ಯಂತ ಸಂಚರಿಸಲು ಹೆಣ್ಣು ಮಕ್ಕಳಿಗೆ ಅನುಮತಿ ನೀಡಲಾಗಿದೆ ಈ ವಿಷಯದ ಕುರಿತು ನಮಗೆ ತುಂಬಾ ಹೆಮ್ಮೆ ಇದೆ ಆದರೆ ಗ್ರಾಮೀಣ ಭಾಗದಲ್ಲಿ ಹಲವಾರು ಪತ್ರಕರ್ತರು ತಮ್ಮ ಜೀವದ ಹಂಗು ತೊರೆದು ಜೀವದ ಭಯವಿಲ್ಲದೆ ಭ್ರಷ್ಟ ರಾಜಕಾರಣಿಗಳ ವಿರುದ್ಧ ಭ್ರಷ್ಟ ಅಧಿಕಾರಿಗಳ ವಿರುದ್ಧ ಸತ್ಯ ಸತ್ಯತೆಯನ್ನು ಪತ್ರಿಕಾ ಮಾಧ್ಯಮದಲ್ಲಿ ಬಿತ್ತರಿಸುವ ನಿಷ್ಠಾವಂತ ಪತ್ರಕರ್ತರಿಗೆ ಹಾಗೂ ಗ್ರಾಮೀಣ ಭಾಗದ ಪತ್ರಕರ್ತರಿಗೆ ಸರಕಾರದ ಈ ಅವಜ್ಞಾನಿಕ ಆದೇಶ ಹಾಗೂ ಈ ಸರಕಾರದ ಮಾನದಂಡಗಳು ಹಾಕಿದ್ದು ನಮ್ಮ ಕರ್ನಾಟಕ ಸೇನಾ ಸಂಘಟನೆ ವತಿಯಿಂದ ಖಂಡಿಸುತ್ತೇವೆಂದು ಮಹೇಶ್ ಪಾಟೀಲ್ ಕಡಕೋಳ ಅವರು ಆಕ್ಷೇಪ ವ್ಯಕ್ತಪಡಿಸಿದರು ಅಷ್ಟೇ ಅಲ್ಲದೆ ರಾಜ್ಯದಲ್ಲಿ 16,000 ಗ್ರಾಮೀಣ ಭಾಗದ ಪತ್ರಕರ್ತರು ಹಲವಾರು ಸುದ್ದಿ ಮಾಧ್ಯಮಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಸರ್ಕಾರದ ಹಾಗೂ ಸಾರ್ವಜನಿಕರ ಸಂಪರ್ಕದ ಕೊಂಡಿಯಾಗಿ ಸಮಾಜದ ಓರೆ ಕೋರೆಗಳನ್ನು ತಿದ್ದುವ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಇಂದಿನ ಪತ್ರಕರ್ತರು ಮಾಡುತ್ತಿದ್ದಾರೆ ಆದರೆ ಈ ಸರ್ಕಾರವು ಗ್ರಾಮೀಣ ಭಾಗದ ಪತ್ರಕರ್ತರ ಕುಟುಂಬದ ಸಮಸ್ಯೆಯನ್ನು ಅರಿಯುವಲ್ಲಿ ವಿಫಲವಾಗಿದೆ ಎನ್ನಬಹುದು. ಜೀವದ ಹಂಗು ತೊರೆದು ಸುದ್ದಿ ಮಾಡುವ ಪತ್ರಕರ್ತರ ಬಸ್ ಪಾಸ್ ಮಾನದಂಡಗಳನ್ನು ಹಾಕಿದ್ದು ಅವಜ್ಞಾನಿಕವಾಗಿದೆ ಕೂಡಲೆ ಸರಕಾರವು ತಮ್ಮ ತಪ್ಪನ್ನು ಸರಿಪಡಿಸಿಕೊಂಡು ಗ್ರಾಮೀಣ ಭಾಗದ ಪತ್ರಕರ್ತರಿಗೆ ನ್ಯಾಯ ಒದಗಿಸಿ ಕೊಡಬೇಕೆಂದು ಯಡ್ರಾಮಿ ತಾಲೂಕ ನಮ್ಮ ಕರ್ನಾಟಕ ಸೇನಾ ತಾಲೂಕ ಅಧ್ಯಕ್ಷರಾದ ಮಹೇಶ್ ಪಾಟೀಲ್ ಕಡಕೋಳ ಅವರು ಈ ಸಂದರ್ಭದಲ್ಲಿ ತಿಳಿಸಿದ್ದಾರೆ

ವರದಿ ಜಟ್ಟಪ್ಪ ಎಸ್ ಪೂಜಾರಿ