ಸಗರ ಪಟ್ಟಣ ಪಂಚಾಯಿತಿ-ಮಲ್ಲಿಕಾರ್ಜುನ ಕೊಬ್ರಿ ಅಭಿನಂದನೆ.

ಸಗರ ಪಟ್ಟಣ ಪಂಚಾಯಿತಿ-ಮಲ್ಲಿಕಾರ್ಜುನ ಕೊಬ್ರಿ ಅಭಿನಂದನೆ.

ಸಗರ ಪಟ್ಟಣ ಪಂಚಾಯಿತಿ-ಮಲ್ಲಿಕಾರ್ಜುನ ಕೊಬ್ರಿ ಅಭಿನಂದನೆ.

ಶಹಪುರ : ತಾಲೂಕಿನ ಸಗರ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮಾಡುವಲ್ಲಿ ಶ್ರಮಿಸಿದ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕೈಗಾರಿಕಾ ಸಚಿವರಾದ ಶರಣಬಸಪ್ಪಗೌಡ ದರ್ಶನಾಪುರ ಅವರಿಗೆ,ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಮಲ್ಲಿಕಾರ್ಜುನ ಕೊಬ್ರಿ ನೇತೃತ್ವದಲ್ಲಿ ಅಭಿನಂದಿಸಿ,ಗೌರವಿಸಲಾಯಿತು

ಗ್ರಾಮದ ಬಹು ದಿನಗಳ ಬೇಡಿಕೆಯಾಗಿದ್ದ,ಪಟ್ಟಣ ಪಂಚಾಯತಿ ಆಗಿರೋದು ನಮ್ಮೆಲ್ಲರಿಗೂ ಸಂತೋಷ ತಂದಿದೆ, ಸದ್ಯಕ್ಕೆ ಹೆಚ್ಚಿನ ಅನುದಾನ ತಂದು ಅಭಿವೃದ್ಧಿಪರ ಕೆಲಸಗಳು ಮಾಡಬೇಕಾಗಿದೆ,ಸಾಕಷ್ಟು ಅಭಿವೃದ್ಧಿಪರ ಕೆಲಸಗಳು ಆಗಬೇಕಾದರೆ ಪ್ರತಿಯೊಬ್ಬರ ಸಹಕಾರ ಅತ್ಯಗತ್ಯ ಇದೆ ಎಂದು ಸಚಿವರು ನುಡಿದರು.

ಈ ಸಂದರ್ಭದಲ್ಲಿ ಚಂದ್ರಶೇಖರ ಕನಗೊಂಡ,ಅಡಿವೆಪ್ಪ ಬಸ್ಸಾ, ಚನ್ನಬಸಪ್ಪ ಶಿಣ್ಣೂರ, ಮಂಜುನಾಥ್ ಮುದ್ದಾ,ರಾಜು ಕನಗೊಂಡ,ಬಸವರಾಜ ಮುದ್ದಾ, ಬಾಗೇಶ್ ಮುಂಡರಗಿ,ಸಂಗಣ್ಣ ಕೊಬ್ರಿ,ನಾಗರಾಜ ಹರವಾಳ ಸೇರಿದಂತೆ ಹಲವಾರು ಜನ ಗ್ರಾಮಸ್ಥರು ಉಪಸ್ಥಿತರಿದ್ದರು