ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋದರೆ ನಾನೇ ಅನುದಾನ ಕೊಡಿಸುತ್ತೇನೆ: ಎಚ್.ಡಿ.ಕುಮಾರಸ್ವಾಮ
ಮೈಸೂರು: ' ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋದರೆ ಕರ್ನಾಟಕಕ್ಕೆ ಬರಬೇಕಾದ ಅನುದಾನವನ್ನು ನಾನೇ ಮುಂದೆ ನಿಂತು ಕೋಡಿಸುತ್ತೆನೆ' ಎಂದು ಕೇಂದ್ರ ಬೃಹತ್ ಕೈಗಾರಿಕೆ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
' ಕೇಂದ್ರ ಸರ್ಕಾರ ರಾಜ್ಯಕ್ಕೆ ಅನ್ಯಾಯ ಮಾಡಿಲ್ಲ. ಸಂಸತ್ ಕಲಾಪಕ್ಕೂ ಮುನ್ನ ಕಾಟಾಚಾರಕ್ಕೆ ರಾಜ್ಯದ ಸಂಸದರ ಸಭೆ ಕರೆದು ಮನವಿ ಸಲ್ಲಿಸುತ್ತಾರೆ. ನೇರವಾಗಿ ಮಂತ್ರಿಗಳನ್ನು ಭೇಟಿ ಮಾಡಿದರೆ ಕೆಲಸ ಆಗುತ್ತದೆ.
ನಾನು ಕರ್ನಾಟಕದ ಪರ ಕೇಂದ್ರದ ಇಲಾಖೆಗಳಲ್ಲಿ ಧ್ವನಿ ಎತ್ತಿ ಕೆಲಸ ಮಾಡಲು ಸಿದ್ಧನಿದ್ದೇನೆ. ಆದರೆ ನಾನು ಕರ್ನಾಟಕಕ್ಕೆ ಬರುವುದನ್ನೇ ಸಹಿಸುವುದಿಲ್ಲ' ಎಂದು ಅವರು ರವಿವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದ್ದಾರೆ.
ನಮ್ಮ ತೆರಿಗೆ ನಮ್ಮ ಹಕ್ಕು ಎಂದು ಕೇಂದ್ರವನ್ನು ದೂರಿದರೆ ನಿಮ್ಮ ಕೆಲಸ ಆಗುವುದಿಲ್ಲ ಎಂದರು.
'ಈ ಬಾರಿಯ ಕೇಂದ್ರ ಬಜೆಟ್ ಕೇವಲ ಎರಡೇ ರಾಜ್ಯಕ್ಕೆ ಎಂಬ ಆರೋಪ ಮಾಡೋದು ಸರಿಯಲ್ಲ. ಕೇಂದ್ರ ಬಜೆಟ್ ದೇಶದ ಸಮಗ್ರ ಅಭಿವೃದ್ಧಿ ಸಲುವಾಗಿಯೇ ಹೊರತು ರಾಜ್ಯಗಳ ಅಭಿವೃದ್ಧಿಗಲ್ಲ. ಆಂಧ್ರ ವಿಭಜನೆ ಆದಾಗಲೇ ಯುಪಿಎ ಸರ್ಕಾರ ಕೇಂದ್ರದಲ್ಲಿ ವಿಶೇಷ ಪ್ಯಾಕೇಜ್ ಗೆ ಕಾಯ್ದೆ ತಂದಿತ್ತು. ಈಗ ಆಂಧ್ರದಲ್ಲಿ ಅಣೆಕಟ್ಟೆ ನಿರ್ಮಾಣಕ್ಕೆ ₹ 15 ಸಾವಿರ ಕೋಟಿ ನೀಡಿದೆ. ಕೋಸಿ ನದಿ ಪ್ರವಾಹ ನಿಯಂತ್ರಣಕ್ಕೆ 20ಕ್ಕೂ ಹೆಚ್ಚು ಬ್ಯಾರೇಜ್‌ಗಳ ನಿರ್ಮಾಣಕ್ಕೆ ಬಿಹಾರಕ್ಕೆ ವಿಶೇಷ ಪ್ಯಾಕೇಜ್ ನೀಡಿದೆ' ಎಂದರು.
'ಪ್ರಸ್ತುತ ಕರ್ನಾಟಕಕ್ಕೆ ತೆರಿಗೆ ಪಾಲಿನ ₹45,485 ಕೋಟಿ ಹಾಗೂ ಅನುದಾನದ ರೂಪದಲ್ಲಿ ₹15 ಸಾವಿರ ಕೋಟಿ ಸೇರಿ ಒಟ್ಟು ₹60 ಸಾವಿರ ಕೋಟಿ ಬರಲಿದೆ' ಎಂದರು.
'ಬೆಂಗಳೂರು ನಗರದ ಪೆರಿಪೆರಿಯಲ್ ರಸ್ತೆ ನಿರ್ಮಾಣಕ್ಕೆ ₹3 ಸಾವಿರ ಕೋಟಿ ಅನುದಾನ ನೀಡಲು ಕೇಂದ್ರ ಸರ್ಕಾರ ಸಿದ್ದವಿದೆ. ಆದರೆ, ಯೋಜನೆಗೆ ಬೇಕಾದ ಉಳಿದ ₹26 ಸಾವಿರ ಕೋಟಿ ಭರಿಸಲು ಕರ್ನಾಟಕ ಸರ್ಕಾರದ ಬಳಿ ಹಣವಿದೆಯೇ' ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಜೂನ್‌ನಲ್ಲಿ ಸರ್ಕಾರವೇ ಅಮಾನತು ಮಾಡಿದ್ದ ಕಲ್ಲೇಶ ಎಂಬ ಅಧಿಕಾರಿಯನ್ನು ಮುಂದಿಟ್ಟುಕೊಂಡು ಇ.ಡಿ. ವಿರುದ್ಧ ಎಫ್‌ಐಆರ್ ದಾಖಲಿಸಿದ್ದೀರಿ. ₹40 ಕೋಟಿ ಅನುದಾನ ಬಳಕೆಯ ಲೆಕ್ಕ ನೀಡದ್ದಕ್ಕೆ ಆ ಅಧಿಕಾರಿ ಬಗ್ಗೆ ಕೇಂದ್ರ ಎಂಟು ಪತ್ರ ಬರೆದಿತ್ತು. ಇಂತಹವರನ್ನು ಸಮರ್ಥಿಸಿಕೊಂಡಿದ್ದೀರಿ. ಸರ್ಕಾರದ ಕಾನೂನು ಸಲಹೆಗಾರ ಪೊನ್ನಣ್ಣ ಸರಿಯಾಗಿ ಸಲಹೆ ನೀಡಲಿಲ್ಲವೇ?' ಎಂದು ಪ್ರಶ್ನಿಸಿದರು.