ಛಲವಾದಿ ನಾರಾಯಣ ಸ್ವಾಮಿ,ಎನ್ ರವಿಕುಮಾರ, ಎನ್.ಮಹೇಶ ಅವರೇ ಕಲ್ಯಾಣ ಕರ್ನಾಟಕ ಭಾಗಕ್ಕೆ ನಿಮ್ಮ ಕೊಡುಗೆ ಏನು ಮಲ್ಲಿಕಾರ್ಜುನ ನೀಲೂರ ಪ್ರಶ್ನೆ ?

ಛಲವಾದಿ ನಾರಾಯಣ ಸ್ವಾಮಿ,ಎನ್ ರವಿಕುಮಾರ, ಎನ್.ಮಹೇಶ ಅವರೇ ಕಲ್ಯಾಣ ಕರ್ನಾಟಕ ಭಾಗಕ್ಕೆ ನಿಮ್ಮ ಕೊಡುಗೆ ಏನು ಮಲ್ಲಿಕಾರ್ಜುನ ನೀಲೂರ ಪ್ರಶ್ನೆ ?

ಛಲವಾದಿ ನಾರಾಯಣ ಸ್ವಾಮಿ,ಎನ್ ರವಿಕುಮಾರ, ಎನ್.ಮಹೇಶ ಅವರೇ ಕಲ್ಯಾಣ ಕರ್ನಾಟಕ ಭಾಗಕ್ಕೆ ನಿಮ್ಮ ಕೊಡುಗೆ ಏನು ಮಲ್ಲಿಕಾರ್ಜುನ ನೀಲೂರ ಪ್ರಶ್ನೆ ? 

ಕಲಬುರಗಿ: ದಿನಾಂಕ 04 ರಂದು ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಪ್ರತಿಭಟನೆ ಮಾಡಿದ ಛಲವಾದಿ ನಾರಾಯಣ ಸ್ವಾಮಿ, ಮತ್ತು ಎನ್. ಮಹೇಶ, ಎನ್. ರವಿಕುಮಾರ್ ಇವರಿಗೆ ನನ್ನದು ಪ್ರಶ್ನೆ. ಸದರಿ ಕಲಬುರಗಿ ಜಿಲ್ಲೆಯಲ್ಲಿ ಮೀಸಲು ಕ್ಷೇತ್ರವಾಗಿರುವ ಲೋಕಸಭಾ ಮತ್ತು ಚಿತ್ತಾಪುರ, ಚಿಂಚೋಳಿ, ಕಲಬುರಗಿ ಗ್ರಾಮೀಣ ವಿಧಾನಸಭಾ ಕ್ಷೇತ್ರಗಳಾಗಿದ್ದು, ಆದರೆ ಈ ಮೂರು ಕ್ಷೇತ್ರಗಳಲ್ಲಿ ಛಲವಾದಿ ನಾರಾಯಣ ಸ್ವಾಮಿಯವರೇ ನೀವು ಯಾವ ಸಮಾಜದಲ್ಲಿ ಜನಿಸಿದ್ದಿರಿ ಆ ಸಮಾಜಕ್ಕೆ ಬಿಜೆಪಿಯಿಂದ ಒಂದು ಸಹ ಟಿಕೇಟ್ ನೀಡಿರುವುದಿಲ್ಲ. ಇದರಿಂದ ನಮ್ಮ ಸಮಾಜಕ್ಕೆ ಅನ್ಯಾಯ ಆಗಿದ್ದು, ಇದು ನಿನ್ನ ಸಮಾಜಕ್ಕೆ ಆಗಿರುವ ಅನ್ಯಾಯವನ್ನು ಇದರ ಬಗ್ಗೆ ತಾವುಗಳು ಬಿಜೆಪಿಯವರಿಗೆ ಪ್ರಶ್ನೆ ಮಾಡಲು ತಮ್ಮ ಬಳಿ ಸ್ವಾಭಿಮಾನವಿಲ್ಲವೇ? ಮತ್ತು ತಾವುಗಳು ಮೂಲತಃ ಎಲ್ಲಿಂದ ರಾಜಕೀಯಕ್ಕೆ ಬಂದಿದ್ದಿರಿ, ತಮಗೆ ಇದರ ಬಗ್ಗೆ ಅರಿವಿಲ್ಲವೆ? ಛಲವಾದಿ ನಾರಾಯಣ ಸ್ವಾಮೀಯವರೆಗೆ ತಮ್ಮಗೆ ರಾಜಕೀಯಲ್ಲಿ ಅತ್ಯಂತ ಎತ್ತರವಾಗಿ ಬೆಳದಿದ್ದೆ ಕಾಂಗ್ರೇಸ್ ಪಕ್ಷ ಅನ್ನೋದು ಮರೆತ್ತಿದ್ದಿರಿ ಎಂದು ಕಾಂಗ್ರೆಸ್ ಪಕ್ಷದ ಎಸ್ಸಿ ಜಿಲ್ಲಾ ಉಪಾಧ್ಯಕ್ಷರಾದ ಮಲ್ಲಿಕಾರ್ಜುನ ನೀಲೂರ ಅವರು ವ್ಯಂಗ್ಯವಾಡಿದರು.

      ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು,ಇತ್ತಿಚೀಗೆ ನಗರಕ್ಕೆ ಆಗಮಿಸಿದ ಭಲವಾದಿ ನಾರಾಯಣ ಸ್ವಾಮೀಯವರೆ ನಿಮ್ಮ ಕೊಡುಗೆ ಏನು ಎಂದು ಅವರು ಪ್ರಶ್ನಿಸಿದರು ? ಕಲಬುರಗಿಗೆ ಬಂದು ನೀವು ಏನು ಸದರಿ ಎನ್. ಮಹೇಶ ರವರೇ ನೀವು ಟಿ.ಎಸ್.ಪಿ ಪಕ್ಕದಲ್ಲಿದ್ದಾಗ ತಮಗೆ ನಮ್ಮ ಸಮಾಜದವರು ನಿಮ್ಮನ್ನು ನಂಬಿ ಕರ್ನಾಟಕದಲ್ಲಿರುವ ದಲಿತ ಹಾಗು ಹಿಂದುಳಿದ ವಿದ್ಯಾರ್ಥಿಗಳು ಮತ್ತು ಮುಗ್ಧ ಸಾವಿರಾರು ಜನರು ತಮಗೆ ಮತ ಹಾಕುವ ಮುಖಾಂತರ ತಮಗೆ ಗಳಿಸಿರುತ್ತಾರೆ. ಆದರೆ ತಾವು ಏನು ಮಾಡಿದ್ದಿರಿ ನಮ್ಮ ದಲಿತ ಸಮಾಜಕ್ಕೆ ವಿರೋಧಿಯಾಗಿರುವ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿ ತಮಗೆ ನಂಬಿರುವ ಕರ್ನಾಟಕದ ದಲಿತ ಮತ್ತು ಹಿಂದೂ ಜನರಿಗೆ ದ್ರೋಹ, ಮೋಸ, ವಂಚನೆ ಮಾಡಿದ್ದಿರಿ. ಈಗ ಕಲಬುರಗಿ ನಗರಕ್ಕೆ ಬಂದು ಏನು ಹೇಳುತ್ತಿರಿ. ಕಲಬುರಗಿ ನಗರಕ್ಕೆ ನಿಮ್ಮದು ಯಾವುದು ಕೊಡುಗೆ ಇರುತ್ತದೆ? 'ಎನ್. ರವಿಕುಮಾರ ರವರೆ ನೀವು ಹುಟ್ಟಿದ ಸಮಾಜದ ಜನರಿಗೆ ಕಲಬುರಗಿ ಜಿಲ್ಲೆಯಾದ್ಯಂತ ಕಲಬುರಗಿ ನಗರದಲ್ಲಿ 6 ಕ್ಷೇತ್ರಗಳಲ್ಲಿ ನೀವು ಹುಟ್ಟಿದ ಸಮಾಜದ ಜನರಿಗೆ ಒಬ್ಬರಿಗಾದರೂ ಬಿಜೆಪಿಯಿಂದ ಟಿಕೆಟ್ ಕೊಡಿಸಿದ್ದಿರಾ? ಇದು ನಿಮ್ಮ ಸಮಾಜಕ್ಕೆ ಮಾಡಿದ ಘೋರ ಅನ್ಯಾಯವಾಗಿರುತ್ತದೆ. 

        ಎನ್. ರವಿಕುಮಾರ ರವರೇ ನೀವು ನಿಮ್ಮ ಸಮಾಜಕ್ಕೆ ನ್ಯಾಯ ಕೊಡಿಸದು ಆಗಿಲ್ಲ. ಆದರೆ ಬೇರೆ ಸಮಾಜದ ಬಗ್ಗೆ ಮಾತನಾಡಿ ನ್ಯಾಯ ಏನು ಕೊಡಿಸ್ತಿಯಾ ಹೀಗಾಗಿ ಕಲಬುರಗಿ ಬಂದು ಬೊಗಳೆ ಭಾಷಣ ಮಾಡವುದು ಬಿಟ್ಟು, ನಿನ್ನ ಕ್ಷೇತ್ರದಲ್ಲಿ ನಿನ್ನ ಸಮಾಜದವರಿಗೆ ಉದ್ದಾರ ಮಾಡವುದು ಕಲಿತುಕೊಳ್ಳಿ ಎಂದು ಅವರು ಸಲಹೆ ನೀಡಿದರು.ಛಲವಾದಿ ನಾರಾಯಣ ಸ್ವಾಮಿ, ಮತ್ತು ಎಸ್. ಮಹೇಶ, ಎನ್. ರವಿಕುಮಾರ್ ನೀವು ಮೂರು ಜನರು ಸಚಿವ ಪ್ರಿಯಾಂಕ್ ಖರ್ಗೆ ಅವರ ಬಗ್ಗೆ ಮಾತನಾಡಲು ಯಾವುದೇ ನೈತಿಕ ಹಕ್ಕಿಲ್ಲ. ಆದರೆ ನಮ್ಮ ಡಾ. ಮಲ್ಲಿಕಾರ್ಜುನ ಖರ್ಗೆ ಹಾಗೂ ಸಚಿವ ಪ್ರಿಯಾಂಕ್ ಖರ್ಗೆಯವರು ಕಲ್ಯಾಣ ಕರ್ನಾಟಕ್ಕೆ ಅವರು ಮಾಡಿದ ಅಭಿವೃದ್ಧಿ ಕೆಲಸ ಮತ್ತು ಅವರ ಕೊಡುಗೆ ಕಲ್ಯಾಣ ಕರ್ನಾಟಕ ಜನತೆ ಯಾವತ್ತಿಗೂ ಮರೆಯವುದಿಲ್ಲ ಎಂದು ಅವರು ತಿಳಿಸಿದರು.