ಕನ್ನಡ ಕಾವ್ಯ ಪರಂಪರೆ ಶ್ರೀಮಂತವಾದದ್ದು - ಡಾ: ಎಮ್.ಎಸ್. ಶಿರವಾಳ

ಕನ್ನಡ ಕಾವ್ಯ ಪರಂಪರೆ ಶ್ರೀಮಂತವಾದದ್ದು - ಡಾ: ಎಮ್.ಎಸ್. ಶಿರವಾಳ

ಕನ್ನಡ ಕಾವ್ಯ ಪರಂಪರೆ ಶ್ರೀಮಂತವಾದದ್ದು - ಡಾ: ಎಮ್.ಎಸ್. ಶಿರವಾಳ

ಶಹಾಪುರ : ಕನ್ನಡ ಕಾವ್ಯ ಪರಂಪರೆಗೆ ಸುಮಾರು ಸಾವಿರ ವರ್ಷಗಳ ಇತಿಹಾಸವಿದ್ದು, ಪಂಪನಿಂದ ಆರಂಭಗೊಂಡ ನವ್ಯ, ನವೋದಯ,ಬಂಡಾಯ ಹೀಗೆ ವಿವಿಧ ಪ್ರಕಾರಗಳಲ್ಲಿ ವ್ಯಾಪಿಸಿ ತನ್ನದೇ ಆದ ವೈಶಿಷ್ಟತೆ ಹಾಗೂ ಶ್ರೀಮಂತಿಕೆಯಿಂದ ಕೂಡಿದೆ ಎಂದು ಸಂಶೋಧಕ ಹಾಗೂ ತಾಲೂಕ ಖಜಾನೆ ಅಧಿಕಾರಿಗಳಾದ ಡಾ: ಮೋನಪ್ಪ ಶಿರವಾಳ ಹೇಳಿದರು.

ನಗರದ ಜ್ಞಾನ ಗಂಗೋತ್ರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಗರದ ಕಲಾನಿಕೇತನ ಟ್ರಸ್ಟ್ ವತಿಯಿಂದ ಆಯೋಜಿಸಿದ ನಾಡಗೀತೆಗೆ ನೂರರ ಸಂಭ್ರಮದ ಪ್ರಯುಕ್ತ ಕರ್ನಾಟಕ ರಾಜ್ಯೋತ್ಸವ ಹಾಗೂ "ಕನ್ನಡ ಕಾವ್ಯ ದೀವಿಗೆ"ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿ ಉಪನ್ಯಾಸ ನೀಡಿ ಮಾತನಾಡಿದರು.

ಕನ್ನಡ ಕಾವ್ಯ ಪರಂಪರೆಯು ಅರಿವು ಮೂಡಿಸುವ ಮತ್ತು ಭಾಷೆಯ ಸರಳತೆಯನ್ನು ಹೊಂದಿದೆ,ಅಲ್ಲದೆ ಕಾವ್ಯದ ಸಾಮಾಜಿಕ ಕಳಕಳಿ ಮತ್ತು ಸಾಮಾನ್ಯ ಜನರ ಭಾಷೆಗೆ ಬಳಸಿ ವಚನ ಸಾಹಿತ್ಯದ ಮೂಲಕ ಸಾಮಾಜಿಕ ಕ್ರಾಂತಿಗೆ ಕಾರಣವಾಯಿತು ಎಂದು ಬಣ್ಣಿಸಿದರು.

ಮತ್ತಷ್ಟು ಕನ್ನಡ ಕಾವ್ಯ ಅರಳಬೇಕಾದರೆ,ಹಳೆಗನ್ನಡ ನಡುಗನ್ನಡ ಹೊಸಗನ್ನಡದ ಜೊತೆಗೆ ಸಂಸ್ಕೃತವೂ ಓದಿನ ಅಗತ್ಯವಿದೆ ಎಂದು ಹೇಳಿದರು.ದಾಸ ಸಾಹಿತ್ಯ, ಶರಣ ಸಾಹಿತ್ಯ,ಬಂಡಾಯ ಸಾಹಿತ್ಯ, ವಚನ ಸಾಹಿತ್ಯ ಓದುವ ಹವ್ಯಾಸ ರೂಢಿಸಿಕೊಂಡು,ಮಾನವೀಯ ಮೌಲ್ಯಗಳು ಅಳವಡಿಸಿಕೊಂಡಾಗ ಮಾತ್ರ ಬದುಕು ಸಾರ್ಥಕತೆ ಕಾಣಲು ಸಾಧ್ಯ ಎಂದು ನುಡಿದರು.

ನಿವೃತ್ತ ಬ್ಯಾಂಕ್ ವ್ಯವಸ್ಥಾಪಕರಾದ ಶ್ರೀ ವಾಸುದೇವಾಚಾರ್ಯ ಸಗರ ರವರು, ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಭಾವಗೀತೆಯನ್ನು ಹಾಡುವುದರ ಮೂಲಕ ಎಲ್ಲರನ್ನು ಮೂಕಾಸ್ಮಿತರನ್ನಾಗಿ ಮಾಡಿದರು, ಈ ಸಮಾರಂಭದ ವೇದಿಕೆಯ ಮೇಲೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಕಾರ್ಯದರ್ಶಿಗಳಾದ ಮಹೇಶ್ ಅನೆಗುಂದಿ, ಸಂಸ್ಥೆಯ ಅಧ್ಯಕ್ಷರಾದ ಮುರಳಿದರು ಕುಲಕರ್ಣಿ ಕಾರ್ಯಕ್ರಮವನ್ನು ಉದ್ಘಾಟಿಸಿದರು,ಹಿರಿಯ ಪತ್ರಕರ್ತರಾದ ನಾರಾಯಣಚಾರ್ಯ ಸಗರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು,ಕೊನೆರಾಚಾರ್ಯಾ ಸಗರ,ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಟ್ರಸ್ಟ್ ಅಧ್ಯಕ್ಷ ಬಸವರಾಜ ಶಿಣ್ಣೂರ ಎಲ್ಲರನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು,ಶಾಲಾ ವಿದ್ಯಾರ್ಥಿಗಳಾದ ಸೋಮು ಮತ್ತು ಸಂಗಡಿಗರಿಂದ ಸವಿಧಾನ ಪೀಠಿಕೆ ಓದಿಸಲಾಯಿತು.ಕಾರುಣ್ಯ ಹಾಗೂ ಸಂಗಡಿಗರಿಂದ ಕನ್ನಡ ಸಂಕಲ್ಪ ಬೋಧಿಸಲಾಯಿತು,ಧರಣಿ ಮತ್ತು ಸಂಗಡಿಗರು ನಾಡಗೀತೆ ಹಾಡಿದರು. ಹರಿಪ್ರಿಯಾ ಮತ್ತು ಅಂಜಲಿ ಪ್ರಾರ್ಥಿಸಿದರು.ನಂತರ ಕರ್ನಾಟಕದ ಇತಿಹಾಸ ಸಾರುವ ಸಮಗ್ರ ಸ್ಮಾರಕಗಳು,ದೇವಾಲಯಗಳು, ಕೋಟೆಗಳು ಪ್ರದರ್ಶನ ಎರ್ಪಡಿಸಲಾಗಿತ್ತು.