ಕನ್ನಡದ ಅಸ್ಮಿತೆ ಉಳಿಸಿ ಬೆಳೆಸಲು : ಡಾ ಸುರೇಶ್ ಎಲ್ ಶರ್ಮಾ ಕರೆ

ಕನ್ನಡದ ಅಸ್ಮಿತೆ ಉಳಿಸಿ ಬೆಳೆಸಲು : ಡಾ ಸುರೇಶ್ ಎಲ್ ಶರ್ಮಾ ಕರೆ

ಕನ್ನಡದ ಅಸ್ಮಿತೆ ಉಳಿಸಿ ಬೆಳೆಸಲು : ಡಾ ಸುರೇಶ್ ಎಲ್ ಶರ್ಮಾ ಕರೆ

ಶ್ರೀ ಸುಭಾಶ್ಚಂದ್ರ ಪಾಟೀಲ್ ಸ್ಮಾರಕ ಜನ ಕಲ್ಯಾಣ ಟ್ರಸ್ಟ್ ವತಿಯಿಂದ ನಗರದ ಅವರಕಲಾ ಸ್ಟುಡಿಯೋದಲ್ಲಿ ಕಾರ್ಯಕ್ರಮ ಆಯೋಜಿನೆ

ಕಲಬುರಗಿ : ಕನ್ನಡದ ಅನನ್ಯತೆ ಹಾಗೂ ಅಸ್ಮಿತೆಯನ್ನು ಉಳಿಸಿ ಬೆಳೆಸಲು ಎಲ್ಲರೂ ಕಂಕಣ ಬದ್ಧರಾಗಬೇಕೇಂದು ಅಧಿಕ್ಷಕ ಅಭಿಯಂತರ ಡಾ ಸುರೇಶ್ ಎಲ್ ಶರ್ಮಾ ಕರೆ ನೀಡಿದರು.

ನಗರದ ಅಮರಕಲಾ ಸ್ಟುಡಿಯೋದಲ್ಲಿ ಶ್ರೀ ಸುಭಾಶ್ಚಂದ್ರ ಪಾಟೀಲ್ ಸ್ಮಾರಕ ಜನ ಕಲ್ಯಾಣ ಟ್ರಸ್ಟ್ ಪಾಳಾ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ 69 ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಕವಿಗೋಷ್ಠಿ, ಜಾನಪದ ಉತ್ಸವ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಇಂತಹ ಸಮಾರಂಭಗಳನ್ನು ಏರ್ಪಡಿಸಿ ಕಲಾವಿದರಿಗೆ ಹಾಗೂ ಸಾಹಿತಿಗಳಿಗೆ ವೇದಿಕೆ ಒದಗಿಸುವ ಮೂಲಕ ಕನ್ನಡ ಕಟ್ಟುವ ಕಾರ್ಯ ಮಾಡುತ್ತಿರುವ ಸುಭಾಶ್ಚಂದ್ರ ಪಾಟೀಲ್ ಸ್ಮಾರಕ ಜನ ಕಲ್ಯಾಣ ಟ್ರಸ್ಟ್ ಕಾರ್ಯ ಶ್ಲಾಘನೀಯ ಎಂದು ಶರ್ಮಾ ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಜಿಲ್ಲಾಧ್ಯಕ್ಷ ವೀರಭದ್ರ ಸಿಂಪಿ ಮಾತನಾಡಿ, ಯಾವುದೇ ಸ್ವಾರ್ಥಕ್ಕೆ ಒಳಗಾಗದೆ ಕನ್ನಡ ಭಾಷೆ ಹಾಗೂ ಸಂಸ್ಕೃತಿಯ ರಕ್ಷಣೆಗಾಗಿ ಹೋರಾಟ ಮಾಡುವುದು ಅನಿವಾರ್ಯವಾಗಿದೆ. ಡಾ ಗೀತಾ ನಾಗಭೂಷಣ, ಡಾ.ಚೆನ್ನಣ್ಣ ವಾಲಿಕಾರ, ಡಾ ಮಲ್ಲಿಕಾರ್ಜುನ ಲಠ್ಠೆ , ಶಿವಶರಣಪ್ಪ ಜವಳಿ ನಂತರ ಕಲಬುರಗಿ ಸಾಹಿತ್ಯ ಹೊಸ ತಲೆಮಾರಿನ ಲೇಖಕರು ಹೊರಹೊಮ್ಮುವ ಅಗತ್ಯವಿದೆ ಎಂದರು.

ಪ್ರಾಸ್ತಾವಿಕ ಮಾತನಾಡಿದ, ಲೇಖಕ ಪ್ರೊ ಯಶವಂತರಾಯ ಅಷ್ಠಗಿ ಕರ್ನಾಟಕದ ಏಕೀಕರಣಕ್ಕಾಗಿ ದುಡಿದ ಮಹನೀಯರನ್ನು ಇಂತಹ ಸಾಮಾಜಿಕ ಮುಖಿ ಕನ್ನಡಪರ ಕಾರ್ಯಕ್ರಮಗಳ ಮೂಲಕ ಸ್ಮರಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ ಎಂದರು.

ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಶರಣಬಸವೇಶ್ವರ ಸಂಸ್ಥಾನದ ಡಾ ಅಲ್ಲಮಪ್ರಭು ದೇಶಮುಖ ಮಾತನಾಡಿ, ಶ್ರೀ ಶರಣಬಸವೇಶ್ವರ ಸಂಸ್ಥಾನವು ಮಹಿಳೆಯರಿಗೂ ಕನ್ನಡ ಶಿಕ್ಷಣ ಕೊಡುವ ಮೂಲಕ ಕನ್ನಡ ಕಟ್ಟುವ ಕೆಲಸ ಈ ಭಾಗದಲ್ಲಿ ಮಾಡಿದೆ. 

ಪತ್ರಕರ್ತ ಶರಣಗೌಡ ಪಾಟೀಲ್ ಪಾಳಾ ಹಾಗೂ ಚಿಂತಕ ಪ್ರೊ ಯಶವಂತರಾಯ ಅಷ್ಠಗಿ ಯವರು ಜೊತೆಯಾಗಿ ಕನ್ನಡ ಕಟ್ಟುವ ಕೆಲಸ ಮಾಡುತ್ತಿರುವುದು ಅಭಿನಂದನಾರ್ಹ ಎಂದು ಡಾ ಅಲ್ಲಮಪ್ರಭು ದೇಶಮುಖ ಹೇಳಿದರು.

ಕಾರ್ಯಕ್ರಮದ ಸಾನಿಧ್ಯವನ್ನು ಶ್ರೀನಿವಾಸ್ ಸರಡಗಿಯ ಪೂಜ್ಯ ಡಾ. ರೇವಣಸಿದ್ದ ಶಿವಾಚಾರ್ಯರು ವಹಿಸುವರು, ನೇತೃತ್ವವನ್ನು ಶ್ರೀ ಶರಣಬಸವೇಶ್ವರ ಸಂಸ್ಥಾನದ ಡಾ.ಅಲ್ಲಮಪ್ರಭು ದೇಶಮುಖ ವಹಿಸಿದ್ದರು. ಲೇಖಕ ಪ್ರೊ ಯಶವಂತರಾಯ ಅಷ್ಠಗಿ ದಿಕ್ಸೂಚಿ ನುಡಿಗಳನ್ನಾಡಿದರು.

ಅಮರಪ್ರಿಯ ಹಿರೇಮಠ ಡಾ.ಸಂಗಮೇಶ ಹಿರೇಮಠ

ಡಾ. ವೀರಶೆಟ್ಟಿ ಗಾರಂಪಳ್ಳಿ ಎಂ ಕೆ ರಾಮೇಶ್ವರ್ , ಗ್ರಂಥಾಲಯ ಇಲಾಖೆಯ ಸತೀಶ್ ಕುಮಾರ್, ಹೊಸಮನಿ, ಅಜಯಕುಮಾರ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. 

ಕಾರ್ಯಕ್ರಮದಲ್ಲಿ, ಡಾ ಶರಣಬಸಪ್ಪ ವಡ್ಡನಕೇರಿ, ಲವಕುಶ ಟೇಕೂರ, ಪರಮೇಶ್ವರ್ ದಂಡಿನ, ಮಾಮಣ್ಣ ತಳಕೇರಿ, ಲಾಲ್ ಬಹದ್ದೂರ್ ಇಂಡೆ, ಸಲೀಂ ಮಣುರಕರ್, ವಿನೋದ್ ಕುಮಾರ್ ಶಹಾಬಾದ್, ದೌಲತರಾಯಗೌಡ ಪಾಟೀಲ್, ಸಿದ್ದಣ್ಣಗೌಡ ಕಡಣಿ , ನಾಗರಾಜ್ ಗಾಂಧಿ ಗುಡಿ, ಶಿವಶರಣಪ್ಪ ನಾಟಿಕರ್, ಮಹಾಲಕ್ಷ್ಮಿ , ಪ್ರೇಮಾ, ಸೇರಿದಂತೆ ಅನೇಕರು ಭಾಗವಹಿಸಿಸಿದ್ದರು. 

ಅಮರ ಹಿರೇಮಠ ಸಂಗೀತ ಬಳಗದದವರು ವಚನ ಪ್ರಾರ್ಥನೆ ಹಾಡಿದರು.

ಅಂಬುಜಾ ಎಂ ಡಿ ನಿರೂಪಿಸಿದರು, ಅಂಬಾರಾಯ ಕೋಣೆ ಸ್ವಾಗತಿಸಿದರು, ಬಸವಂತರಾಯ ಕೋಳಕೂರ ವಂದನಾರ್ಪಣೆ ಮಾಡಿದರು.

 ಪ್ರಮುಖ ಕಲಾವಿದರಾದ ಜಗದೀಶ್ ನಗನೂರ್, ಶಿವಶಂಕರ್ ಬಿರಾದರ್,ಬಸವರಾಜ ಟೆಂಗಳಿ, ಶಿವಕುಮಾರ್ ಹಿರೇಮಠ,ಸೈದಪ್ಪ ಸಪ್ಪನಗೋಳ,ಆನಂದ್ ನಂದಿಕೋಲಮಠ, ಶ್ರೀ ಸನಾದಿ ಅಪ್ಪಣ್ಣ ಕಲಾ ತಂಡ ಪಾಳಾದ ಶಿವಯೋಗಿ ಭಜಂತ್ರಿ, ಭರತನಾಟ್ಯ ಸರಸ್ವತಿ ಭರತನಾಟ್ಯ ಕಲಾತಂಡ ಕಲಬುರಗಿ, ಮಾಳಿಂಗರಾಯ ಡೊಳ್ಳಿನ ಸಂಘ,ಸಂತೋಷ್ ಕೊಡಲಿ,ಮೌನೇಶ್ ಪಂಚಾಳ್ ಸಂಗೀತ ಸೇವೆ ಸಲ್ಲಿಸಿದರು.

 ಕವಿಗೋಷ್ಠಿಯಲ್ಲಿ ಕವಿಗಳಾದ ರಮೇಶ್ ನಾರಾಯಣಪುರ,

ವೀರಭದ್ರಪ್ಪ ಗುರುಮಠಕಲ್, ಶಿವಪುತ್ರ ಎಸ್ ಹಾಗರಗಿ,

ಸಂಗಮ್ಮ ಧಮ್ಮೂರಕರ ಕಾಳಗಿ, ಸರೋಜಾ ನಂದಿ ಕಲಬುರಗಿ, ರೇಣುಕಾಚಾರ್ಯ ಸ್ಥಾವರಮಠ, ಎಂ ಕೆ ಮಠ, ಮಲ್ಲಮ್ಮ ಚಿಂಚೋಳಿ ಜೇವರ್ಗಿ, ಸಿದ್ದರಾಮ ರಾಜಮಾನೆ, ಶರಣರೆಡ್ಡಿ ಸೇಡಂ, ರುದ್ರಗೌಡ ರಾಮಪುರ ಜೇವರ್ಗಿ, ಕಲಾವತಿ ಕೋಬಾಳ, ಕಲಬುರಗಿ, ಎಚ್ ಎಸ್ ಬರಗಾಲಿ ಕವನ ವಾಚನ ಮಾಡಿದರು.

2024ನೇ ಸಾಲಿನ ಜಿಲ್ಲಾಮಟ್ಟದ "ಕರ್ನಾಟಕ ರಾಜ್ಯೋತ್ಸವ" ಪ್ರಶಸ್ತಿಗೆ ಭಾಜನರಾದ 

 ನಿಜಲಿಂಗಪ್ಪ ಹಾಲವಿ. (ಕಲಾ ಕ್ಷೇತ್ರ) ಡಾ. ಕೆ. ಗಿರಿಮಲ್ಲ (ಸಾಹಿತ್ಯ ಕ್ಷೇತ್ರ) ಸಿ ಎಸ್ ಮಾಲಿಪಾಟೀಲ, (ಜಾನಪದ ಕ್ಷೇತ್ರ) ಎಸ್ ಡಿ ಪಾಟೀಲ್, (ಸಾಮಾಜಿಕ ಸೇವೆ) ನಾಗರತ್ನ ಎಲ್ ಇಂಡೆ. (ಶಿಕ್ಷಣ ಕ್ಷೇತ್ರ) ವಿಜಯಕುಮಾರ ಗಡವಂತಿ, (ಆಡಳಿತ ಕ್ಷೇತ್ರ) ಸುರೇಖಾ ಎಂ ಜೇವರ್ಗಿ, (ಸಾಹಿತ್ಯಕ್ಷೇತ್ರ) ಕುಪೇಂದ್ರ.ಕೆ.ಟೊಣ್ಣೆ ದಿಶೃಂಗಾ (ಸಾಮಾಜಕ ಸೇವೆ) ರಾಮರಾಜ ನಗರೆ. (ಕೃಷಿ ಕ್ಷೇತ್ರ) ರಾಜಶೇಖರ ಹರಿಹರ್. (ಜಾನಪದ ಕ್ಷೇತ್ರ) ರಮೇಶ ಮೇಳಕುಂದಾ (ಮಾಧ್ಯಮ ಕ್ಷೇತ್ರ) ಗುಂಡಪ್ಪ ಬಿ. ಅಲ್ಲೂರ, (ಕೈಗಾರಿಕಾ ಕ್ಷೇತ್ರ) ಅಣ್ಣಾರಾಯ ಶೆಳ್ಳಗಿ ಮತ್ತಿಮಡು, (ಸಂಗೀತ ಕ್ಷೇತ್ರ) ಜಗದೀಶ್ ಸುಗಂಧಿ, (ಕನ್ನಡ ಸೇವೆ) ವಿಶಾಲಾಕ್ಷಿ .ಎಸ್ (ಶಿಕ್ಷಣ ಕ್ಷೇತ್ರ) ಶಿವಕುಮಾರ್ ಪಾಟೀಲ್, (ಸಂಗೀತ ಕ್ಷೇತ್ರ) ಇವರು ಪ್ರಶಸ್ತಿ ಸ್ವೀಕರಿಸಿದರು.

[ ಕನ್ನಡ ಭಾಷೆ ಕೇವಲ ಅಭಿಮಾನಕ್ಕೆ ಸೀಮಿತವಾಗದೆ, ನಮ್ಮ ಬದುಕಿನಲ್ಲಿ ಬರಬೇಕು ಅಂದಾಗ ಮಾತ್ರ ಕನ್ನಡ ಜೀವಂತವಾಗಿರಲಿದೆ]

-ಎ ಕೆ ರಾಮೇಶ್ವರ್ ಖ್ಯಾತ ಮಕ್ಕಳ ಸಾಹಿತಿ

ಕನ್ನಡ ನಾಡಿನಲ್ಲಿ ಕನ್ನಡಿಗರಿಗೆ ಪ್ರಾಶಸ್ತ್ಯ ಸಿಗಬೇಕು ಎನ್ನುವ ಉದ್ದೇಶದಿಂದ ನಿರಂತರವಾಗಿ ಕನ್ನಡದ ಸೇವೆ ಕೈಗೊಂಡಿದ್ದೇವೆ.ಈ ಸೇವೆಗೆ ಎಲ್ಲರು ಮುಕ್ತ ಮನಸ್ಸಿನಿಂದ ಕೈಜೋಡಿಸಬೇಕು.

ಶರಣಗೌಡ ಪಾಟೀಲ್ ಪಾಳಾ

ಅಧ್ಯಕ್ಷರು, ಶ್ರೀ ಸುಭಾಶ್ಚಂದ್ರ ಪಾಟೀಲ್ ಸ್ಮಾರಕ ಜನ ಕಲ್ಯಾಣ ಟ್ರಸ್ಟ್, ಕಲಬುರಗಿ

ಸ್ವಾತಂತ್ರ್ಯಪೂರ್ವದಲ್ಲಿ ಮೊಳಕೆಯೊಡೆದ ಚೆಲುವ ಕನ್ನಡ ನಾಡಿನ ಕನಸು ಸ್ವಾತಂತ್ರ್ಯ ನಂತರದ ವರ್ಷಗಳಲ್ಲಿ ಸಾಕಾರಗೊಂಡಿದೆ]

ಡಾ ಸಂಗಮೇಶ ಹಿರೇಮಠ

ಪ್ರಾದೇಶಿಕ ನಿರ್ದೇಶಕರು, ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ಕಲಬುರಗಿ