ಕೊಂಡಜ್ಜಿ ಬೆಟ್ಟದಲ್ಲಿ ರಂಗಾಯಣದ ಜಮೀನಿಗೆ ಬೇಲಿ ಭೂಮಿಪೂಜೆ

ಕೊಂಡಜ್ಜಿ ಬೆಟ್ಟದಲ್ಲಿ ರಂಗಾಯಣದ ಜಮೀನಿಗೆ ಬೇಲಿ ಭೂಮಿಪೂಜೆ

ಕೊಂಡಜ್ಜಿ ಬೆಟ್ಟದಲ್ಲಿ ರಂಗಾಯಣದ ಜಮೀನಿಗೆ ಬೇಲಿ ಭೂಮಿಪೂಜೆ

ಹರಿಹರ: ಕೊಂಡಜ್ಜಿ ಬೆಟ್ಟದ ಪರಿಸರದಲ್ಲಿರುವ ದಾವಣಗೆರೆ ರಂಗಾಯಣದ ಹತ್ತೆಕರೆ ಜಮೀನಿಗೆ ಬೇಲಿ ಹಾಕುವ ಕಾರ್ಯದ ಭೂಮಿಪೂಜೆಯನ್ನು ಹರಿಹರ ಶಾಸಕರಾದ ಬಿ.ಪಿ. ಹರೀಶ್ ಅವರು ನೆರವೇರಿಸಿದರು.

ಈ ಸಂದರ್ಭದಲ್ಲಿ ದಾವಣಗೆರೆ ರಂಗಾಯಣದ ನಿರ್ದೇಶಕರಾದ ಮಲ್ಲಿಕಾರ್ಜುನ ಕಡಕೋಳ, ವಿಶೇಷಾಧಿಕಾರಿ ರವಿಚಂದ್ರ, ಕೊಂಡಜ್ಜಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮರಿಯಮ್ಮ, ಪಿಡಿಒ, ಕವಯತ್ರಿ ಸಂಧ್ಯಾ ಸುರೇಶ್ ಹಾಗೂ ಗ್ರಾಮ ಮುಖಂಡರು ಉಪಸ್ಥಿತರಿದ್ದರು.

ಭೂಮಿಪೂಜೆಯ ನಂತರ ಮಾತನಾಡಿದ ಶಾಸಕರಾದ ಬಿ.ಪಿ. ಹರೀಶ್ ಅವರು, “ರಂಗಾಯಣವು ಜಿಲ್ಲೆಯ ಸಾಂಸ್ಕೃತಿಕ ಕೇಂದ್ರವಾಗಿ ಅಭಿವೃದ್ಧಿಯಾಗಲು ಸರ್ಕಾರದಿಂದ ಎಲ್ಲ ರೀತಿಯ ಸಹಕಾರ ನೀಡಲಾಗುವುದು. ಕೊಂಡಜ್ಜಿ ಬೆಟ್ಟದ ಈ ಪ್ರದೇಶವನ್ನು ಸಾಂಸ್ಕೃತಿಕ ತಾಣವನ್ನಾಗಿ ರೂಪಿಸುವ ಉದ್ದೇಶದಿಂದ ಈ ಯೋಜನೆ ಆರಂಭವಾಗಿದೆ,” ಎಂದರು.

ಕಾರ್ಯಕ್ರಮದಲ್ಲಿ ಸ್ಥಳೀಯರು ಹಾಗೂ ಕಲಾ ಪ್ರೇಮಿಗಳು ಹಾಜರಿದ್ದರು.