ಇನ್ನರ್ ವ್ಹಿಲ್ ಗುಲಬರ್ಗಾ ಸನ್‌ಸಿಟಿ ವತಿಯಿಂದ ‘ರಾಸ ರಂಗಾರಂಗ’ ಗರಭಾ (ದಾಂಡಿಯಾ) ಕಾರ್ಯಕ್ರಮ ಲಕ್ಷ್ಮಿ ದತ್ತಾತ್ರೇಯ ಪಾಟೀಲ ಚಾಲನೆ ನೀಡಿದರು

ಕಲಬುರಗಿ: ನಗರದ ಯಶ ಕೋಠಾರಿ ಭವನದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಇನ್ನರ್ ವ್ಹಿಲ್ ಕ್ಲಬ್ ಆಫ್ ಗುಲಬರ್ಗಾ ಸನ್‌ಸಿಟಿ ವತಿಯಿಂದ ನವರಾತ್ರಿ ಉತ್ಸವದ ಅಂಗವಾಗಿ ‘ರಾಸ ರಂಗಾರಂಗ’ ಗರಭಾ (ದಾಂಡಿಯಾ) ಕಾರ್ಯಕ್ರಮ ಆಯೋಜಿಸಲಾಗಿತ್ತು. ಸುಮಾರು ೧೧ ವರ್ಷಗಳಿಂದ ಈ ಸಾಂಸ್ಕೃತಿಕ ಕಾರ್ಯಕ್ರಮ ನಡೆಸುತ್ತ ಬಂದಿರುತ್ತಾರೆ. ಈ ಕಾರ್ಯಕ್ರಮದ ಮುಖಾಂತರ ದಾನಿಗಳು ಮತ್ತು ದಾಂಡಿಯಾ ಟಿಕೇಟಿನ ಹಣವನ್ನು ಪಡೆದು ಕಡು-ಬಡವರಿಗೆ ವೃದ್ಧಾಶ್ರಮ, ಅಂಧ ಮಕ್ಕಳಿಗೆ ಕಲಿತ ಸಾಮಗ್ರೀಗಳು, ಬಡವರಿಗೆ ಕಣ್ಣಿನ ಶಸ್ತ್ರಿ ಚಿಕಿತ್ಸೆ ಮುಂತಾದ ಸಾಮಾಜಿಕ ಸೇವೆಯನ್ನು ಮಾಡುತ್ತಾರೆ. 

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ಸಮಾಜ ಸೇವಕಿ ಲಕ್ಷ್ಮಿ ದತ್ತಾತ್ರೇಯ ಪಾಟೀಲ (ರೇವೂರ), ಪ್ರೊಬೇಷನರಿ ಐಎಎಸ್ ಅಧಿಕಾರಿ ಹಾಗೂ ಪ್ರವಾಸೋಧ್ಯಮ ಇಲಾಖೆ ಸಹಾಯಕ ನಿರ್ದೇಶಕಿ ಮಿನಾಕ್ಷೀ ಆರ್ಯಾ, ಕಲಬುರಗಿ ಇನ್ನರ್ ವ್ಹಿಲ್ ಕ್ಲಬ್ ಆಫ್ ಗುಲಬರ್ಗಾ ಸನ್‌ಸಿಟಿ ಅಧ್ಯಕ್ಷೆ ಸುನಿತಾ ಬೋರಾ, ಕಾರ್ಯದರ್ಶಿ ಸಂತೋಷಿ ನೋಗ್ಜಾ, ಪಾಸ್ಟ್ ಪ್ರೆಸಿಡೆಂಟ ಚಂದನ ಸೇಠಿಯಾ, ಸಪ್ನಾ ದೇಶಪಾಂಡೆ, ಶ್ವೇತಾ ಎಂ.ಜಿ., ತೃಪ್ತಿ ಶಹಾ, ಪಲ್ಲವಿ ಮುಕ್ಕಾ, ಅಂಜನಾ ಶಿರವಾಳ, ವಿಜಯಶ್ರೀ ಮುಕ್ಕಾ ಹಾಗೂ ರೋಟರಿ ಕೋ-ಆರ್ಡಿನೇಟರ್ ಮಲ್ಲಿಕಾರ್ಜುನ ಬಿರಾದಾರ ಸೇರಿದಂತೆ ಗರಭಾ (ದಾಂಡಿಯಾ) ಪ್ರೇಮಿ ಸದರಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.