ಜೂನ್ 28 ರಂದು ಸಿಇಟಿ' ಸೀಟು ಹಂಚಿಕೆ ಕುರಿತ ಮಾಹಿತಿ ಮೇಳ

ಜೂನ್ 28 ರಂದು ಸಿಇಟಿ' ಸೀಟು ಹಂಚಿಕೆ ಕುರಿತ ಮಾಹಿತಿ ಮೇಳ

ಜೂನ್ 28 ರಂದು ಸಿಇಟಿ' ಸೀಟು ಹಂಚಿಕೆ ಕುರಿತ ಮಾಹಿತಿ ಮೇಳ 

(ನ್ಯೂ ಸಿಇಟ್ ಸೆಲೆಕ್ಷನ್ ಪ್ರೊಸೆಸ್) ಕಾರ್ಯಕ್ರಮ

ಕಲಬುರಗಿ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮತ್ತು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರ ಮತ್ತು ಪ್ರಾದೇಶಿಕ ಕಚೇರಿ ಕಲಬುರಗಿ ವತಿಯಿಂದ ಜೂನ್ 28 ರಂದು ಬೆಳಗ್ಗೆ 9.30 ರಿಂದ ಮಧ್ಯಾಹ್ನ 1.30 ಗಂಟೆಯವರೆಗೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಸ್ನಾತಕೋತ್ತರ ಕೇಂದ್ರ ಮತ್ತು ಪ್ರಾದೇಶಿಕ ಕಚೇರಿ ಕಲಬುರಗಿ ಆವರಣದಲ್ಲಿ 'ಸಿಇಟಿ' ಸೀಟು ಹಂಚಿಕೆ ಕುರಿತ ಮಾಹಿತಿ ಮೇಳ (ನ್ಯೂ ಸಿಇಟ್ ಸೆಲೆಕ್ಷನ್ ಪ್ರೊಸೆಸ್) ಕಾರ್ಯಕ್ರಮ ನಡೆಯಲಿದೆ. ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಕಲಬುರಗಿಯ ಪ್ರಾದೇಶಿಕ ನಿರ್ದೇಶಕರಾದ ಡಾ. ಶುಭಾಂಗಿ ಡಿ.ಸಿ ಅವರು ಹೇಳಿದರು.

ಆದರಿಂದ ಎಲ್ಲಾ ಯುಜಿ ಸಿಇಟಿ ವಿದ್ಯಾರ್ಥಿಗಳು ಮತ್ತು ಪೋಷಕರು ತಪ್ಪದೆ ಹಾಜರಾಗಿ ಸೀಟು ಹಂಚಿಕೆ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. 

ಜಿಲ್ಲೆಯ ಮತ್ತು ನೆರೆ ಜಿಲ್ಲೆಯ ಕಳೆದ ಸಾಲಿನಲ್ಲಿ ವಿವಿಧ ಕಾಲೇಜುಗಳಲ್ಲಿ ಪಿಯುಸಿ, ವಿಜ್ಞಾನ ವಿಭಾಗದಲ್ಲಿ ಅಭ್ಯಾಸ ಮಾಡಿದ್ದು, ಸಿಇಟಿ ಪರೀಕ್ಷೆ ಬರೆದಿರುವ ತಮ್ಮ ಕಾಲೇಜಿನ ವಿದ್ಯಾರ್ಥಿಗಳ ಗಮನಕ್ಕೆ ತರಲು ಪಿಯು ಕಾಲೇಜಿನ ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಸಹಕರಿಸುವಂತೆ ಡಾ. ಶುಭಾಂಗಿ ಡಿ. ಸಿ. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ನೋಡಲ್ ಅಧಿಕಾರಿ ಡಾ. ಭಾರತಿ ಪಿ, ಮೊಬೈಲ್ ಸಂಖ್ಯೆ-9743029938 ಇವರನ್ನು ಸಂಪರ್ಕಿಸಬಹುದು.