ಚಿನ್ನ ಪಡೆದ ಚೆನ್ನಮ್ಮ

ಚಿನ್ನ ಪಡೆದ ಚೆನ್ನಮ್ಮ

ಚಿನ್ನ ಪಡೆದ ಚೆನ್ನಮ್ಮ

ಆಳಂದ : ತಾಲೂಕಿನ ಜಮಗಾ ಆರ್ ಗ್ರಾಮದ ರೈತ ಸದಾಶಿವ -ಸಂಗಮ್ಮ ಬಿರಾದಾರ ರವರ ಮಗಳು ಚೆನ್ನಮ್ಮ ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆಯ ವಿದ್ಯಾರ್ಥಿನಿ ಚೆನ್ನಮ್ಮ ಗುಲಬರ್ಗಾ ವಿಶ್ವವಿದ್ಯಾಲಯದ 43 ನೇ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರಚಂದ ಗೆಹ್ಲೊಟರವರಿಂದ ಅತಿಹೆಚ್ಚು 11 ಚಿನ್ನದ ಪದಕಗಳನ್ನು ಪಡೆದಿದ್ದಾರೆ. ಈ ನನ್ನ ಸಾಧನೆಗೆ ತಂದೆ-ತಾಯಿ ಮತ್ತು ಕನ್ನಡ ಅಧ್ಯಯನ ಸಂಸ್ಥೆಯ ಮುಖ್ಯಸ್ಥರಾದ ಪ್ರೊ.ಎಚ್.ಟಿ ಪೋತೆ ಮತ್ತು ಉಪನ್ಯಾಸಕರ ಪ್ರೋತ್ಸಾಹ ಮತ್ತು ಪ್ರೇರಣೆ ಮುಖ್ಯಕಾರಣ

ನಾನು ಬಿ.ಇಡಿ ಪದವಿ ಮುಗಿಸಿದ್ದೇನೆ. ಕೆ-ಸೆಟ್ NET ನೆಟ್ ಪರಿಕ್ಷೆಯಲ್ಲಿ ಉತ್ತೀರ್ಣನಾಗಿದ್ದೇನೆ. ದಿನಾಲೂ 8-10 ಗಂಟೆಗಳ ಕಾಲ ಅಧ್ಯಯನ ಮಾಡುತ್ತೇನೆ ಮುಂದೆ ನಾನು ಉಪನ್ಯಾಸಕಿಯಾಗುವ ಕನಸಿದೆ 

ಶಿಕ್ಷಣ ಕ್ಷೇತ್ರವೆ ಗೊತ್ತಿಲ್ಲದ ನನ್ನ ತಂದೆ ತಾಯಿ ನನಗೆ ಓದಲು ಅವಕಾಶ ಮಾಡಿಕೊಟ್ಟಿದ್ದಾರೆ ಅವರಿಗೆ ಎಷ್ಟು ವರ್ಣಿಸಿದರು ಸಾಲದು ಎಂದರು.

ವರದಿ.ಡಾ .ಅವಿನಾಶ .S. ದೇವನೂರ.