ಕೊಳಚೆ ಪ್ರದೇಶಗಳ ಸಮಸ್ಯೆಗಳ ಬೇಡಿಕೆಗಳ ಈಡೇರಿಸುವಂತೆ ಸ್ಲಂ ಜನರ ಸಂಘಟನೆಯಿಂದ ಪ್ರತಿಭಟನೆ

ಕೊಳಚೆ ಪ್ರದೇಶಗಳ ಸಮಸ್ಯೆಗಳ ಬೇಡಿಕೆಗಳ ಈಡೇರಿಸುವಂತೆ ಸ್ಲಂ ಜನರ ಸಂಘಟನೆಯಿಂದ ಪ್ರತಿಭಟನೆ
ಕಲಬುರಗಿ: ಕಲಬುರಗಿ ನಗರದ ವಿವಿಧ ಕೊಳಚೆ ಪ್ರದೇಶಗಳ ಸಮಸ್ಯೆಗಳ ಬೇಡಿಕೆಗಳ ಈಡೇರಿಸುವಂತೆ ಸ್ಲಂ ಜನರ ಸಂಘಟನೆ- ಕರ್ನಾಟಕ ಕಲಬುರ್ಗಿ ಜಿಲ್ಲಾ ಸಮಿತಿ ವತಿಯಿಂದ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ವಿಭಾಗಿಯ ಕಚೇರಿ ಎದುರುಗಡೆ ಪ್ರತಿಭಟನೆ ನಡೆಸಿ ಮನವಿ ಪತ್ರ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಪದಾಧಿಕಾರಿಗಳಾದ ಬಾಬುರಾವ್ ದಂಡಿನಕರ್, ಅಲ್ಲಮಪ್ರಭು ನಿಂಬರ್ಗಾ, ಬ್ರಹ್ಮಾನಂದ ಮಿಂಚಾ, ಗಣೇಶ್ ಕಾಂಬಳೆ, ಯಮನಪ್ಪ ಪ್ರಸಾದ್, ಅನಿಲ್ ಚಕ್ರ, ಯೇಸು ರಾಜ್, ಶಿವಕುಮಾರ್ ಚಿಂಚೋಳಿ, ಕರಣಕುಮಾರ್ ಬಂದರವಾಡ, ವಿಕಾಸ್ ಸವಾರಿಕರ್, ಪ್ರಕಾಶ್ ಮಾಳ್ಗೆ, ಮಲ್ಲಿಕಾರ್ಜುನ್ ಕಾಂಬಳೆ, ಅಬ್ದುಲ್ ರಶೀದ್, ಶ್ರೀಮತಿ ಬಸ್ಸಮ್ಮ ಭೀಮಪುರೆ, ಶ್ರೀಮತಿ ಮಮ್ತಾಜ್ ಬೇಗಂ, ಶ್ರೀಮತಿ ನಾಗಮ್ಮ ರಾಜೀವ್ ಗಾಂಧಿ ನಗರ್, ಸಾಯಪ್ಪ ಸನ್ ಮಂಡಲು ಸೇರಿದಂತೆ ಪದಾಧಿಕಾರಿಗಳು ಹಾಗೂ ವಿವಿಧ ಕೊಳಚೆ ಪ್ರದೇಶದ ಜನರು ಭಾಗವಹಿಸಿದ್ದರು.