ಕಲಬುರಗಿ ಮಣ್ಣಿನ ಮಕ್ಕಳಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲಿ
ಕಲ್ಬುರ್ಗಿಮಣ್ಣಿನ ಮಕ್ಕಳಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿರಿ
ಕಲಬುರಗಿ:ಕನ್ನಡ ನಾಡು, ನುಡಿ,ನೆಲ, ಜಲ, ಭಾಷೆ ಗಳ ಸೇವೆ ಸಲ್ಲಿಸಿದವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡುವಾಗ ಕಲ್ಬುರ್ಗಿ ನೆಲದಲ್ಲಿ ಹುಟ್ಟಿ ಬೆಳೆದ ಮಣ್ಣಿನ ಮಕ್ಕಳಿಗೆ ಪ್ರಶಸ್ತಿ ನೀಡಬೇಕು. ಕಲಬುರಗಿ ಕೋಟಾದಲ್ಲಿ ನೀಡುವ ಪ್ರಶಸ್ತಿ ನೀಡುತ್ತಿರುವುದು ಸರಿಯಾದ ಕ್ರಮವಲ್ಲ. ಈ ಮುಂಚೆ ಬೆಳಗಾವಿಯ ರಾಮಕೃಷ್ಣ ಮರಾಠೆ ಎಂಬುವವರಿಗೆ ಸಾಹಿತ್ಯ ಕ್ಷೇತ್ರದಲ್ಲಿ ಕಲ್ಬುರ್ಗಿ ಜಿಲ್ಲೆಯ ಕೋಟದಲ್ಲಿ ನೀಡಲಾಯಿತು. ಈ ಬಾರಿ ಬೆಳಗಾವಿ ಜಿಲ್ಲೆಯ ಕೌಜಲಗಿ ಗ್ರಾಮ ನಿವಾಸಿ ಹೊಸಮನೆಯವರಿಗೆ ಕಲ್ಬುರ್ಗಿ ಕೋಟಾದಲ್ಲಿ ಪ್ರಶಸ್ತಿ ನೀಡಲಾಗಿದೆ. ಇದು ಸರಿಯಾದ ಕ್ರಮವಲ್ಲ.! ಇಲ್ಲಿನ ಸಾಹಿತಿ,ಕವಿ,ಕಲಾವಿದರು,ಪ್ರಕಾಶಕರಿಗೆ ಈ ಬಾರಿ ಕಲ್ಯಾಣ ಕರ್ನಾಟಕದ ಸಾಹಿತಿಗಳನ್ನು ಹಾಗೂ ಸಾಹಿತ್ಯ ಕ್ಷೇತ್ರವನ್ನು ಕಡೆಗಣಿಸಿರುವುದು ಸಾಹಿತಿಗಳಿಗೆ ಮಾಡಿದ ಅವಮಾನವಾಗಿದೆ. ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಯಾವೊಬ್ಬ ಸಾಹಿತಿಯನ್ನು ಗುರುತಿಸದಿರುವುದು ವಿಷಾದನೀಯ!. ಕವಿಗಳಿಗೆ ರಾಜಮಾರ್ಗ ತೋರಿಸಿದ ಹಳಗನ್ನಡ, ನಡುಗನ್ನಡ, ವಚನ ಸಾಹಿತ್ಯ, ದಾಸ ಸಾಹಿತ್ಯ, ತತ್ವಪದ,ಸೂಫಿ ಅನುಭಾವಿ ಸಾಹಿತ್ಯ ಸೃಷ್ಟಿಸಿದ ಮತ್ತು ಆಧುನಿಕ ಅನೇಕ ಹೊಸ ಕಾವ್ಯ ರೂಪಗಳನ್ನು ಕನ್ನಡ ನಾಡಿಗೆ ನೀಡಿದ ಈ ನೆಲದ ಮಕ್ಕಳಿಗೆ ಪ್ರಶಸ್ತಿ ದೊರೆಯದಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ.ರಾಜ್ಯ ಸರ್ಕಾರ ಕಲ್ಯಾಣ ಕರ್ನಾಟಕಕ್ಕೆ ಆದ್ಯತೆ ಆದ್ಯತೆ ನೀಡುವದಾಗಿ ಹೇಳುತ್ತದೆ.೩೭೧(ಜೆ) ಕಲಂ
ಪ್ರಕಾರ ಕೊಡಬೇಕಾದ ಸಾಮಾಜಿಕ, ಪ್ರತಿಭಾನ್ವೇಷಣೆ,ನ್ಯಾಯದ ಪ್ರಕಾರ ಅವಕಾಶಗಳನ್ನು ನೀಡುವಾಗ ಅದನ್ನು ಮರೆತು ಬಿಡುತ್ತದೆ.ಈ ನೆಲದ ಪ್ರತಿಭೆಗಳಿಗೆ ಕಡೆಗಣಿಸುವುದು ಪ್ರಶಸ್ತಿ ನೀಡದಿರುವುದು ಹೊಸದೇನಲ್ಲ ಇದೇ ರೀತಿ ಮುಂದುವರಿಸಿದಲ್ಲಿ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟವನ್ನು ಮಾಡಬೇಕಾಗುತ್ತದೆ ಎಂದು ಈ ಮೂಲಕ ಎಚ್ಚರಿಸುತ್ತೇವೆ.
ಕಲ್ಯಾಣ ಕರ್ನಾಟಕ ಪ್ರದೇಶದ ಜನಪ್ರತಿನಿಧಿಗಳು, ಸಚಿವರು,ಶಾಸಕರು,ಏನು ಮಾಡುತ್ತಾರೆ? ಸಾಹಿತ್ಯ ಸಂಸ್ಕೃತಿ ಬಗ್ಗೆ ಒಲವು ಹೊಂದಿಲ್ಲ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ತಮ್ಮ ಕ್ಷೇತ್ರಕ್ಕೆ ಮೂರು ಪ್ರಶಸ್ತಿಗಳನ್ನು ನೀಡಿದ್ದಾರೆ ಇದು ಸ್ವಜನ ಪಕ್ಷಪಾತಕ್ಕೆ ಸಾಕ್ಷಿಯಾಗಿದೆ. ಕಲ್ಬುರ್ಗಿ ಜಿಲ್ಲೆಗೆ ಒಂದು ಪ್ರಶಸ್ತಿ ನೀಡಿ ಅದೇ ಸಣ್ಣ ಸಣ್ಣ ಜಿಲ್ಲೆಗೆ ಎರಡು, ಮೂರು ನೀಡಿ ಮಲತಾಯಿ ಧೋರಣೆ ತೋರಿದ್ದಾರೆ.ಸಾಹಿತಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಒಂದು ಬಾರಿ ಆತ್ಮವಲೋಕನ ಮಾಡಿಕೊಳ್ಳಬೇಕೆಂದು ಈ ಮೂಲಕ ವಿನಮ್ರವಾಗಿ ಎಚ್ಚರಿಸುತ್ತೇವೆ. ಸಿರಿಗನ್ನಡ ವೇದಿಕೆ ಜಿಲ್ಲಾಧ್ಯಕ್ಷ ಡಾ.ಗವಿಸಿದ್ಧಪ್ಪ ಪಾಟೀಲ, ಪ್ರೊ.ಶಿವರಾಜ ಪಾಟೀಲ, ಡಾ.ಚು.ಸಿ.ನಿಂಗಣ್ಣ,ಡಾ.ರಾಜಕುಮಾರ ಮಾಳಗೆ, ಡಾ.ಶೀಲಾದೇವಿ ಬಿರಾದಾರ
