ಅಂಗನವಾಡಿ ಕೇಂದ್ರ ಉಧ್ಘಾಟನೆ : ಸೇವಾಲಾಲ ಜಯಂತಿ ಆಚರಣೆ

ಅಂಗನವಾಡಿ ಕೇಂದ್ರ ಉಧ್ಘಾಟನೆ :  ಸೇವಾಲಾಲ ಜಯಂತಿ ಆಚರಣೆ

ಅಂಗನವಾಡಿ ಕೇಂದ್ರ ಉಧ್ಘಾಟನೆ : ಸೇವಾಲಾಲ ಜಯಂತಿ ಆಚರಣೆ 

ನಾಗರಾಜ್ ದಂಡಾವತಿ ವರದಿ ಶಹಾಬಾದ : - ನಗರದ ಅಶೋಕ ನಗರ ಅಂಗನವಾಡಿ ಕೇಂದ್ರ 2 ನ್ನು ತಾಲ್ಲೂಕ ತಹಶೀಲ್ದಾರ ನೀಲಪ್ರಭಾ ಬಬಲಾದ ಹಾಗೂ ತಾಲ್ಲೂಕ ಶಿಶು ಅಭಿವೃದ್ಧಿ ಅಧಿಕಾರಿ ಶಿವಶರಣಪ್ಪ ಭೂ ಶೆಟ್ಟಿ ಯವರು ರುಬ್ಬಿನ್ ಕತ್ತರಿಸುವುದರ ಮೂಲಕ ಉಧ್ಘಾಟಿಸಿದರು.

ಹೊಸ ಅಂಗನವಾಡಿ ಕೇಂದ್ರದಲ್ಲಿ ಸಂತ್ ಸೇವಾಲಾಲ ಮಹಾರಾಜರ 287ನೇ ಜಯಂತಿ ಅಂಗವಾಗಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಪುಷ್ಪನಮನ ಸಲ್ಲಿಸಲಾಯಿತು.

ಗ್ರೇಡ್ 2 ತಹಶೀಲ್ದಾರ ಗುರುರಾಜ್ ಸಂಗಾವಿ, ನಗರಸಭೆ ಮಾಜಿ ಸದಸ್ಯ ಡಾ.ಅಹ್ಮದ ಪಟೇಲ, ಮೇಲ್ವಿಚಾರಕಿ ಸಂಗಮ್ಮ ಪಾಟೀಲ, ದಲಿತ ವಿದ್ಯಾರ್ಥಿ ಒಕ್ಕೂಟ ಸಂಚಾಲಕ ಪಿ.ಎಸ.ಮೇತ್ರಿ, ದಸಂಸ ಜಿಲ್ಲಾ ಸಂ. ಸಂಚಾಲಕ ಸತೀಶ ಕೋಬಾಳಕರ, ಅರುಣ ಜಾಯಿ, ಗುಜ್ಜಮ್ಮ ಈರಣ್ಣ ಕುರಿ, ತಂಗೆಮ್ಮ, ರಾಜೇಶ್ವರಿ ಉಪಸ್ಥಿತರಿದ್ದರು.