ಕಾಸರಬೋಸಗಾ ಸರ್ಕಾರಿ ಪ್ರೌಢಶಾಲೆಯಲ್ಲಿ ಕರಾಟೆ ಸ್ವಯಂ ರಕ್ಷಣಾ ಮುಷ್ಟಿ ಪ್ರಯೋಗ ಕಾರ್ಯಕ್ರಮ

ಕಾಸರಬೋಸಗಾ ಸರ್ಕಾರಿ ಪ್ರೌಢಶಾಲೆಯಲ್ಲಿ ಕರಾಟೆ ಸ್ವಯಂ ರಕ್ಷಣಾ ಮುಷ್ಟಿ ಪ್ರಯೋಗ ಕಾರ್ಯಕ್ರಮ

ಕಾಸರಬೋಸಗಾ ಸರ್ಕಾರಿ ಪ್ರೌಢಶಾಲೆಯಲ್ಲಿ ಕರಾಟೆ ಸ್ವಯಂ ರಕ್ಷಣಾ ಮುಷ್ಟಿ ಪ್ರಯೋಗ ಕಾರ್ಯಕ್ರಮ

 ಜೇವರ್ಗಿ ತಾಲೂಕಿನ ಕಾಸರ ಬೋಸಗಾ ಸರ್ಕಾರಿ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ಯೋಜನಾ ನಿರ್ದೇಶಕರ ಆದೇಶದ ಮೇರೆಗೆ ಕರ್ನಾಟಕ ರಾಜ್ಯದಲ್ಲಿ ಆಯಾ ತಾಲೂಕಿನ ಪ್ರೌಢ ಶಾಲೆಗಳಲ್ಲಿ ವಿದ್ಯಾರ್ಥಿನಿಯರ ಸ್ವಯಂ ರಕ್ಷಣಾ ಹಿತದೃಷ್ಟಿಯಿಂದ ಹಾಗು ಕರಾಟೆ ಸ್ವಯಂ ರಕ್ಷಣಾ ತರಬೇತಿಗೆ ಚಾಲನೆ ನೀಡಲಾಗಿದ್ದು ಅದೇ ರೀತಿಯಾಗಿ ಜೇವರ್ಗಿ ತಾಲೂಕಾ ಕ್ಷೇತ್ರ ಶಿಕ್ಷಣಾಧಿಕಾರಿ ವೀರಣ್ಣ ಬೊಮ್ಮನಹಳ್ಳಿ ಹಾಗೂ ತಾಲೂಕ ದೈಹಿಕ ಶಿಕ್ಷಣ ಪರಿವಿಕ್ಷಕರಾದ ಶಿವಪುತ್ರ ಬೀರಗೊಂಡ ಅವರ ನೇತೃತ್ವದಲ್ಲಿ ಕಾಸರಬೋಸಗಾ ಪ್ರೌಢ ಶಾಲೆಯ ವಿದ್ಯಾರ್ಥಿನಿಯರ ಕರಾಟೆ ಸ್ವಯಂ ರಕ್ಷಣಾ ತರಬೇತಿಗೆ ಚಾಲನೆ ನೀಡಲಾಯಿತು. ಶಾಲೆಯ ಮುಖ್ಯ ಗುರುಗಳಾದ ಎಚ್ ಎಮ್ ಅಲಿಸಾಬ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಹಾಗೂ ದೈಹಿಕ ಶಿಕ್ಷಣದ ತಾಲೂಕ ಪರಿವೀಕ್ಷಣಾಧಿಕಾರಿಯಾದ ಶಿವಪುತ್ರ ಬಿರುಗೊಂಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು ಈ ಸಂದರ್ಭದಲ್ಲಿ ಶಾಲೆಯ ದೈಹಿಕ ಶಿಕ್ಷಕರಾದ ಶರಣಪ್ಪ ಎಸ ಆರ್ ಶಿಕ್ಷಕರು ವಿದ್ಯಾರ್ಥಿನಿಯರಿಗೆ ಕಿವಿ ಮಾತು ಹೇಳಿದರು ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರಾದ ಶಬಾನ ಮೇಡಂ ಹಾಗೂ ಪಾರ್ವತಿ ಮೇಡಂ ಮತ್ತು ಶಿವಪುತ್ರ ಸರ್ ಮತ್ತು ರಾಮನಗೌಡ ಶಿಕ್ಷಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು

ವರದಿ ಜೆಟ್ಟೆಪ್ಪ ಎಸ್ ಪೂಜಾರಿ