ಮಹಾರಾಷ್ಟ್ರದ ಕನ್ನಡ ಶಾಲೆಯಲ್ಲಿ ವಿಶ್ವರತ್ನ ಅಂಬೇಡ್ಕರ್ ಜಯಂತಿ ಶ್ರದ್ಧಾಭಿವಂದನೆಯಲ್ಲಿ ಆಚರಣೆ"

ಮಹಾರಾಷ್ಟ್ರದ ಕನ್ನಡ ಶಾಲೆಯಲ್ಲಿ ವಿಶ್ವರತ್ನ ಅಂಬೇಡ್ಕರ್ ಜಯಂತಿ ಶ್ರದ್ಧಾಭಿವಂದನೆಯಲ್ಲಿ ಆಚರಣೆ"
ಜತ್ತ:ತಾಲೂಕಿನತಿಕ್ಕುಂಡಿಯ ಜಿಲ್ಲಾ ಪರಿಷದ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಮಹಾನ್ ಚಿಂತಕ, ವಿಶ್ವಚೇತನ, ಅರ್ಥಶಾಸ್ತ್ರಜ್ಞ, ಭಾರತದ ಸಂವಿಧಾನ ಶಿಲ್ಪಿ, ವಿಶ್ವರತ್ನ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ 134ನೆಯ ಜಯಂತಿಯನ್ನು ಅತ್ಯಂತ ಭಾವಪೂರ್ಣವಾಗಿ ಹಾಗೂ ಗೌರವಪೂರ್ವಕವಾಗಿ ಆಚರಿಸಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ನಿಭಾಯಿಸಲಾಯಿತು. ನಂತರ ಮಕ್ಕಳಿಂದ ಸಂಭ್ರಮಭರಿತವಾಗಿ ಡಾ. ಅಂಬೇಡ್ಕರ್ ಅವರ ಜೀವನದ ಕುರಿತಾದ ಹಾಡುಗಳು ಹಾಗೂ ಭಾಷಣಗಳು ನಡೆಯುವ ಮೂಲಕ ಎಲ್ಲರಲ್ಲೂ ಪ್ರೇರಣೆಯ ಮೂಡಿಸಲಾಯಿತು.
ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಉಪಾಧ್ಯಾಯರು ಡಾ. ಅಂಬೇಡ್ಕರ್ ಅವರ ಜೀವನದ ಮಹತ್ವವನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು. ಅವರು ಶೋಷಿತ ವರ್ಗಗಳ ಹಕ್ಕುಗಳಿಗಾಗಿ ಹೋರಾಡಿದರು, ಶಿಕ್ಷಣದ ಮಹತ್ವವನ್ನು ತಿಳಿಸಿದರು ಎಂಬುದರ ಬಗ್ಗೆ ಮಕ್ಕಳಿಗೆ ಬೆಳಕು ಚೆಲ್ಲಿದರು.
ಈ ಕಾರ್ಯಕ್ರಮವು ಮಕ್ಕಳಲ್ಲಿ ಸಮಾನತೆಯ ಬಗ್ಗೆ ಅರಿವು ಮೂಡಿಸಲು ಹಾಗೂ ಡಾ. ಅಂಬೇಡ್ಕರ್ ಅವರ ಆದರ್ಶಗಳನ್ನು ಅನುಸರಿಸುವ ಪ್ರೇರಣೆಯನ್ನು ನೀಡುವಲ್ಲಿ ಯಶಸ್ವಿಯಾಯಿತು. ಎಲ್ಲರ ಸಹಭಾಗಿತ್ವದಿಂದ ಕಾರ್ಯಕ್ರಮವು ಅರ್ಥಪೂರ್ಣವಾಗಿ ನೆರವೇರಿತು.