ಚಕೋರ-೭: ಕನ್ನಡ ಉಸಿರಾಗಲಿ- ಕವಯತ್ರಿ ಅರುಣಾ ನರೇಂದ್ರ

ಚಕೋರ-೭: ಕನ್ನಡ ಉಸಿರಾಗಲಿ- ಕವಯತ್ರಿ ಅರುಣಾ ನರೇಂದ್ರ

ಚಕೋರ-೭:ಕನ್ನಡ ಉಸಿರಾಗಲಿ- ಕವಯತ್ರಿ ಅರುಣಾ ನರೇಂದ್ರ

ಕಲಬುರಗಿ: ಕನ್ನಡ ಸಂಸ್ಕೃತಿ ಉದಾತ್ತವಾದದ್ದು,ಕನ್ನಡ ಭಾಷೆ,ಸಾಹಿತ್ಯ ಸಂಸ್ಕೃತಿಯ,ನಾಡು,ನುಡಿಗಾಗಿ ಇಲ್ಲಿನ ರಾಜಮನೆತನಗಳು,ಕವಿಗಳು ಶ್ರಮಸಿದವರು,ಭಾಷೆ ಬಹು ಪ್ರಾಚೀನವಾದ್ದು ಕನ್ನಡ ಭಾಷೆ ಉಳುವಿಗಾಗಿ ಹೋರಾಟ ಮಾಡಿ ಅಖಂಡ ಕರ್ನಾಟಕವಾಗಲು ಪ್ರಯತ್ನ ಮಾಡಿ ಪ್ರಾಧಿಕಾರ,ಕಾವಲು ಸಮಿತಿ,ಗಡಿ ಪ್ರಾಧಿಕಾರ ಅಕಾಡೆಮಿ ಕನ್ನಡಕ್ಕಾಗಿ ಕನ್ನಡ ನಡೆ,ನುಡಿ, ಉಸಿರಾಗಬೇಕು ಎಂದು ಕೊಪ್ಪಳದ ಹಿರಿಯ ಸಾಹಿತಿ ಅರುಣಾ ನರೇಂದ್ರ ಕರೆ ನೀಡಿದರು

ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಚಕೋರ ವೇದಿಕೆ ಕಲಬುರಗಿ ಆಶ್ರಯದಲ್ಲಿ ಉಪಳಾಂವದ ಶ್ರೀ ರಾಮ ಕನ್ನಡ ಕಾನ್ವೆಂಟ್ ಶಾಲೆಯಲ್ಲಿ ಕನ್ನಡ ನಾಡು- ನುಡಿ ಕುರಿತು ಉಪನ್ಯಾಸ ವನ್ನು ನೀಡುತ್ತಾ ಮಾತನಾಡಿ ಮಕ್ಕಳಲ್ಲಿ ಕನ್ನಡಾಭಿಮಾನಿಗಳಾಗಿ ಬೆಳೆಯಬೇಕಾದರೆ ಶಿಕ್ಷಕರು,ವಿದ್ಯಾರ್ಥಿಗಳು,ಜನಸಾಮಾನ್ಯರು ಬೆಳೆಸಬೇಕಾದರೆ ಅನ್ನ ಕೊಡುವ ಭಾಷೆ ಕನ್ನಡವಾಗ ಬೇಕೆಂದರು‌

   ಸಾಹಿತ್ಯ ಅಕಾಡೆಮಿ ಸದಸ್ಯರಾದ ಡಾ.ಸಿದ್ಧರಾಮ ಹೊನ್ಕಲ್ ಅವರು ಮಕ್ಕಳು ಪಠ್ಯದ ಜೊತೆಗೆ ನೀತಿ ಕಥೆಗಳನ್ನು ಓದಿ ನೈತಿಕತೆ ಬೆಳೆಸಿಕೊಳ್ಳಬೇಕೆಂದರು.

ಗೌಡೇಶ ಬಿರಾದಾರ ಅಧ್ಯಕ್ಷತೆ ವಹಿಸಿದ್ದರು. ಕು.ಜ್ಯೋತಿ ಪಾಟೀಲ, ಮುಖ್ಯ ಗುರುಗಳು, ಪರಶುರಾಮ ವಾಲಿ ಉಪನ್ಯಾಸಕರು ಅತಿಥಿಗಳಾಗಿ ಮಾತನಾಡಿದರು.ಚಕೋರ ವೇದಿಕೆ ಸಂಚಾಲಕ ಡಾ.ಗವಿಸಿದ್ಧಪ್ಪ ಪಾಟೀಲ ಸ್ವಾಗತಿಸಿದರು,

ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರಾದ ಡಾ.ಚಂದ್ರಕಲಾ ಬಿದರಿ ಅವರು ಪ್ರಾಸ್ತಾವಿಕ ನುಡಿ ಆಡಿ ಅಕಾಡೆಮಿ ಯೋಜನೆಗಳನ್ನು ತಿಳಿಸಿದರು.ಆಕಾಶ ತೆಗನೂರು,ನರೇಂದ್ರ ಪಾಟೀಲ, ಶಿವಕುಮಾರ ಡೋಲೆ, ಶಿಕ್ಷಕರು,ವಿದ್ಯಾರ್ಥಿಗಳು ಭಾಗವಹಿಸಿದ್ದರು