ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ಗೌತಮ ಕರಿಕಲ್ ನೇತೃತ್ವದಲ್ಲಿ ಕುಲಪತಿಗಳಾದ ಹೂವಿನಬಾವಿ ಬಾಬಣ್ಣ ಎಲ್ ಅವರಿಗೆ ಮನವಿ

ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ಗೌತಮ ಕರಿಕಲ್ ನೇತೃತ್ವದಲ್ಲಿ ಕುಲಪತಿಗಳಾದ ಹೂವಿನಬಾವಿ ಬಾಬಣ್ಣ ಎಲ್ ಅವರಿಗೆ ಮನವಿ

ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ಗೌತಮ ಕರಿಕಲ್ ನೇತೃತ್ವದಲ್ಲಿ ಕುಲಪತಿಗಳಾದ ಹೂವಿನಬಾವಿ ಬಾಬಣ್ಣ ಎಲ್ ಅವರಿಗೆ ಮನವಿ

ಗುಲಬರ್ಗಾ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಸಿದ್ದಪ್ಪ ಮೂಲಗೆ ಇವರ ವಿರುದ್ಧ ಮಾಡಲಾದ ದೂರನ್ನು ಹಿಂಪಡೆಯಲಾಗಿದೆಯೆಂದು ಸರ್ಕಾರಕ್ಕೆ ವರದಿ ಸಲ್ಲಿಸಲಾಗಿರುವ ಬಗ್ಗೆ ಆಕ್ಷೇಪಣೆ ಕುರಿತು. ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ ಜಿಲ್ಲಾಧ್ಯಕ್ಷ ಗೌತಮ ಕರಿಕಲ್ ನೇತೃತ್ವದಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯ ಕುಲಪತಿಗಳಾದ ಹೂವಿನಬಾವಿ ಬಾಬಣ್ಣ ಎಲ್ ಅವರಿಗೆ ಮನವಿ ಸಲ್ಲಿಸಲಾಯಿತು.

ಗುಲಬರ್ಗಾ ವಿಶ್ವವಿದ್ಯಾಲಯ ಕಲಬುರಗಿ ಇದರ ಸಿಂಡಿಕೇಟ್ ಸದಸ್ಯರಾದ ಸಿದ್ದಪ್ಪ ಮೂಲಗೆ ಇವರು ವಿಶ್ವವಿದ್ಯಾಲಯದಲ್ಲಿರುವ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಸಿಬ್ಬಂಧಿ/ಅಧಿಕಾರಿ ವರ್ಗದವರಿಗೆ ವಿನಃಕಾರಣ ಕಿರುಕುಳ ನೀಡುತ್ತಿರುವುದನ್ನು ಹಾಗೂ ಕುಲಪತಿಗಳು ಮತ್ತು ಕುಲಸಚಿವರುಗಳಿಗೆ ನಿರಾತಂಕವಾಗಿ ಕೆಲಸ ಮಾಡಲು ಬಿಡದೇ ಆಡಳಿತದಲ್ಲಿಯೂ ಸಹ ಮೂಗು ತೋರಿಸುತ್ತಿರುವುದನ್ನು ಕಂಡು ಅವರ ಸಿಂಡಿಕೇಟ್ ಸಭೆಯ ಸದಸ್ಯತ್ವವನ್ನು ರದ್ದು ಪಡಿಸಬೇಕೆಂದು ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ, ಕರ್ನಾಟಕ ದಲಿತ ಸಂಘರ್ಷ ಸಮಿತಿ, ಕರ್ನಾಟಕ ದಲಿತ ರಕ್ಷಣಾ ವೇದಿಕೆ ಹಾಗೂ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಲಬುರಗಿ ಮೂಲಕ ಸರ್ಕಾರಕ್ಕೆ ದೂರುಗಳನ್ನು ಸಲ್ಲಿಸಲಾಗಿತ್ತು. ಅದರ ಬಗ್ಗೆ ಮಾನ್ಯ ಸರ್ಕಾರದ ಕಾರ್ಯದರ್ಶಿ ಉನ್ನತ ಶಿಕ್ಷಣ ಇಲಾಖೆ, ಬೆಂಗಳೂರು ಇವರು ದಿನಾಂಕ: ೨೬.೬.೨೦೨೫ ರಲ್ಲಿ ಸದರಿ ದೂರುಗಳ ಸಂಬಂಧವಾಗಿ ಸದರಿ ಮನವಿ/ದೂರುಗಳಲ್ಲಿನ ಅಂಶಗಳನ್ನು ನಿಯಮನುಸಾರ ಪರಿಶೀಲಿಸಿ ವರದಿ ನೀಡಲು ಕೋರಲಾಗಿದೆ.

ಆದರೆ ಕುಲಸಚಿವರು ಗುಲಬರ್ಗಾ ವಿಶ್ವವಿದ್ಯಾಲಯ ಕಲಬುರ್ಗಿ ಇವರು ದಿನಾಂಕ: ೧೪.೭.೨೦೨೫ ರಂದು ಸರ್ಕಾರಕ್ಕೆ ಬರೆದ ಪತ್ರದಲ್ಲಿ ಸದರಿ ದೂರುಗಳ ಸತ್ಯಾಸತ್ಯತೆ ಬಗ್ಗೆ ಪರಿಶೀಲಿಸಲು ಸಮಿತಿಯೊಂದನ್ನು ದಿನಾಂಕ: ೨೩.೬.೨೦೨೫ರ ಸಿಂಡಿಕೇಟ್ ಸಭೆಯಲ್ಲಿ ರಚಿಸಿರುವುದಾಗಿ ಮತ್ತು ಸದರಿ ಸತ್ಯ ಶೋಧನಾ ಸಮಿತಿ ವರದಿಯನ್ನು ಬಂದ ನಂತರ ಸಲ್ಲಿಸಲಾಗುವುದೆಂದು ತಿಳಿಸಿರುತ್ತಾರೆ. ಆದರೆ ಅದೇ ಪತ್ರದಲ್ಲಿ ನಮ್ಮ ಸಂಘಟನೆಯ ಹೆಸರಿನಲ್ಲಿ ಯಾರೋ ಸಲ್ಲಿಸಿದ ಅಥವಾ ಪಡೆದುಕೊಂಡ ಪತ್ರದಲ್ಲಿ ನಾವು ಸಲ್ಲಿಸಿದ ದಿನಾಂಕ: ೦೨.೬.೨೦೨೫ರ ದೂರನ್ನು ಹಿಂಪಡೆಯಲಾಗಿದೆಯೆಂದು ತಿಳಿಸಿರುತ್ತಾರೆಂಬ ನೆಪವೊಡ್ಡಿ ಪ್ರಸ್ತುತ ಅಧಿಕಾರ ನಡೆಸುತ್ತಿರುವ ಪ್ರೊ.ಚಂದ್ರಕಾಂತ ಯಾತನೂರ ಇವರು ಮೇಲೆ ನಮೂದಿಸಿದ ಎಲ್ಲಾ ದೂರುಗಳನ್ನು ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಪರಿಶೀಲಿಸಿದಾಗ ಮೇಲ್ನೋಟಕ್ಕೆ ಇವುಗಳಲ್ಲಿ ಯಾವುದೇ ಹುರುಳಿಲ್ಲ, ಸತ್ಯವಿಲ್ಲ ಹಾಗೂ ದುರುದ್ದೇಶದಿಂದ ಕೂಡಿವೆ ಎಂದು ಕಂಡು ಬಂದಿರುವುದಾಗಿ ಸುಳ್ಳು ವರದಿಯನ್ನು ಮಾನ್ಯ ಸರ್ಕಾರಕ್ಕೆ ಆರೋಪಿತ ಸಿಂಡಿಕೇಟ್ ಸದಸ್ಯರ ಪರವಾಗಿ ಮತ್ತು ಸತ್ಯ ಶೋಧನಾ ಸಮಿತಿ ವರದಿ ಬರುವ ಮುಂಚೆಯೇ ತಮ್ಮ ವ್ಯಕ್ತಿಗತ ಅಭಿಪ್ರಾಯ ಸರ್ಕಾರಕ್ಕೆ ನೀಡಿರುವುದು ಖಂಡನೀಯವಾಗಿರುತ್ತದೆ.

ಸದರಿ ಕುಲಸಚಿವರ ಕ್ರಮವನ್ನು ಅಲ್ಲಗಳೆದು ನಮ್ಮ ಸಂಘಟನೆಯಿಂದ ದಿನಾಂಕ: ೧೮.೭.೨೦೨೫ರಂದು ಖುದ್ದಾಗಿ ಹೋಗಿ ನಾವುಗಳು ಮಾನ್ಯ ಕುಲಪತಿಗಳಿಗೆ ಮನವಿಯನ್ನು ಸಲ್ಲಿಸಿರುತ್ತೇವೆ. ಅದರ ಫೋಟೋವನ್ನು ಕೂಡ ಗಮನಿಸಬಹುದು. ಆದರೆ ಅವರು ನಮ್ಮ ಮನವಿಯ ಬಗ್ಗೆ ಇಂದಿನವರೆಗಾದರೂ ಕ್ರಮ ವಹಿಸದೇ ಇರುವುದು ಮತ್ತು ಸರ್ಕಾರಕ್ಕೆ ನೀಡಿದ ತಪ್ಪು ಮಾಹಿತಿಯನ್ನು ಹಿಂಪಡೆದು ವಾಸ್ತವಿಕ ವರದಿ ಸಲ್ಲಿಸಲು ವಿಫಲರಾಗಿರುತ್ತಾರೆ.

ಅದಲ್ಲದೇ, ಸದರಿ ಸಿಂಡಿಕೇಟ್ ಸಿಂಡಿಕೇಟ್ ಸದಸ್ಯರಾದ ಸಿದ್ದಪ್ಪ ಮೂಲಗೆ ಇವರ ವಿರುದ್ಧ ಬಸವರಾಜ ತೋಟದ್ ಪ್ರಥಮ ದರ್ಜೆ ಸಹಾಯಕರು, ಗುಲಬರ್ಗಾ ವಿಶ್ವವಿದ್ಯಾಲಯ ಕಲಬುರಗಿ ಇವರು ತಮಗೆ ಮಾನಸಿಕ ಕಿರುಕುಳ ಹಾಗೂ ತೊಂದರೆ ನೀಡುತ್ತಿದ್ದು ಅವರ ಕರ್ತವ್ಯ ನಿರ್ವಹಣೆ ಅಡಚಣೆ ಮಾಡುತ್ತಿದ್ದಾರೆಂದು ಅವರ ಜೀವಕ್ಕೆ ಅಪಾಯವಾದಲ್ಲಿ ಸದರಿ ಸಿಂಡಿಕೇಟ್ ಸದಸ್ಯರೇ ಕಾರಣಿಭೂತರಾಗುತ್ತಾರೆಂದು ದಿನಾಂಕ: ೧೬.೪.೨೦೨೫ ರಂದು ಕುಲಸಚಿವರಿಗೆ ಬರೆದಿರುತ್ತಾರೆ.

ಹೀಗಿರುವಾಗ ಸದರಿ ಸದಸ್ಯರನ್ನು ರಕ್ಷಿಸಲು ಸರ್ಕಾರಕ್ಕೆ ಸುಳ್ಳು ವರದಿ ಮಾಡಿದ ಪ್ರಸ್ತುತ ಕುಲಸಚಿವರ ವಿರುದ್ಧ ಮಾನ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಉನ್ನತ ಶಿಕ್ಷಣ ಇಲಾಖೆ (ವಿಶ್ವವಿದ್ಯಾಲಯಗಳು-೦೧) ಬೆಂಗಳೂರು ಇವರೇ ಅವರ ವಿರುದ್ಧ ಶಿಸ್ತಿನ ಕ್ರಮಕ್ಕೆ ಒಳಪಡಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಯಿತು. ಈ ಸಂದರ್ಭದಲ್ಲಿ ಗು.ವಿ.ಕ ಪಿಜಿ ಯೂನಿಯನ್ ಅಧ್ಯಕ್ಷ ಚಂದ್ರಕಾಂತ್ ಸಂಗೊಳ್ಳಿಗಿ, ಸಂತೋಷ್ ಕುಮಾರ್ ಎಸ್‌.ಪಿ, ಸಚಿನ್, ಅಭಿಷೇಕ್, ರಾಚಾಯ್ಯ್ ಸ್ವಾಮಿ, ಮಾಳು ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.