ಗ್ರಾಮೀಣ ಜನರಿಗೆ ಸಂದೇಶ ತಲುಪಿಸುವ ಹಂಪಿ ಕನ್ನಡ ವಿವಿ ಉದ್ದೇಶ; ಕುಲಪತಿ ಡಾ: ಡಿ.ವಿ. ಪರಶಿವಮೂರ್ತಿ ಅಭಿಮತ

ಗ್ರಾಮೀಣ ಜನರಿಗೆ ಸಂದೇಶ ತಲುಪಿಸುವ ಹಂಪಿ ಕನ್ನಡ ವಿವಿ ಉದ್ದೇಶ; ಕುಲಪತಿ ಡಾ: ಡಿ.ವಿ. ಪರಶಿವಮೂರ್ತಿ ಅಭಿಮತ

ಅಳ್ಳೋಳ್ಳಿಯಲ್ಲಿ ರಂಗಕಲೆ ಮತ್ತು ಸಂಗೀತ ಕ್ಷೇತ್ರಕ್ಕೆ ಚಿತ್ತಾಪುರ ತಾಲೂಕಿನ ಕೊಡುಗೆ ಕುರಿತು ಒಂದು ದಿನದ ರಾಜ್ಯ ಮಟ್ಟದ ವಿಚಾರ ಸಂಕೀರಣ

ಗ್ರಾಮೀಣ ಜನರಿಗೆ ಸಂದೇಶ ತಲುಪಿಸುವ ಹಂಪಿ ಕನ್ನಡ ವಿವಿ ಉದ್ದೇಶ; ಕುಲಪತಿ ಡಾ: ಡಿ.ವಿ. ಪರಶಿವಮೂರ್ತಿ ಅಭಿಮತ

ಚಿತ್ತಾಪುರ

ಹಂಪಿ ಕನ್ನಡ ವಿಶ್ವವಿದ್ಯಾಲಯದ ಧ್ಯೇಯ ಜನರ ಬಳಿಗೆ ಹೋಗಿ ಸಂಶೋಧನಾ ಜನಸಾಮಾನ್ಯರಿಗೆ ತಲುಪಿಸುವ ಉದ್ದೇಶವಾಗಿದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ: ಡಿ.ವಿ. ಪರಶಿವಮೂರ್ತಿ ಹೇಳಿದರು.

ತಾಲೂಕಿನ ಅಳ್ಳೊಳ್ಳಿ ಗದ್ದುಗೆ ಮಠದ ನಾಗೇಂದ್ರ ನಾಟ್ಯ ಸಂಘದ ರಂಗಮಂದಿರದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯ ಶ್ರೀರಂಗ ದತ್ತನಿಧಿ ಹಾಗೂ ನಾಟಕ ವಿಭಾಗ ಸಂಗೀತ ಮತ್ತು ನೃತ್ಯ ವಿಭಾಗ ಹಾಗೂ ಶ್ರೀ ಅಯ್ಯಪ್ಪಯ್ಯ ಮಹಾತ್ಮಪೀಠ ಗದ್ದಗಿ ಅಳ್ಳೊಳ್ಳಿ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ನಡೆದ ರಂಗಕಲೆ ಮತ್ತು ಸಂಗೀತ ಕ್ಷೇತ್ರಕ್ಕೆ ಚಿತ್ತಾಪುರ ತಾಲೂಕಿನ ಕೊಡುಗೆ ಬಗ್ಗೆ ನಡೆದ ಒಂದು ದಿನದ ರಾಜ್ಯ ಮಟ್ಟದ ವಿಚಾರ ಸಂಕೀರಣವನ್ನು ಡೋಲಕ ಬಾರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ವಿದ್ಯೆ ಕಲಿಸುವುದಕ್ಕಿಂತ ಸೃಷ್ಟಿಸುವುದು ಎಂದರು. ನಮ್ಮ ನೆಲದ, ಮಣ್ಣಿನ ಭಾಷೆಯ, ಸಂಸ್ಕೃತಿಯ, ೧೬೦೦ ಪುಸ್ತಕಗಳು ಕನ್ನಡ ವಿಶ್ವವಿದ್ಯಾಲಯದಿಂದ ಪ್ರಕಟಿಸಲಾಗಿದೆ. ಅವುಗಳನ್ನು ಆಲಿಸಲು ವಿವಿ ಆವರಣಕ್ಕೆ ಬನ್ನಿ ಎಂದರು.

ಕಲೆ, ಸಂಗೀತ, ಸಾಹಿತ್ಯ. ರಂಗಭೂಮಿ ಜನರಿಂದ ಉಳಿಯಬೇಕಾಗಿದೆ. ಆದ್ದರಿಂದ ಜನರಿಗೋಸ್ಕರ್ ಗ್ರಾಮೀಣ ಭಾಗಕ್ಕೆ ತಲುಪಿಸಲಾಗುವುದು ಎಂದು ಹೇಳಿದರು.

ಇಲ್ಲಿನ ಅಳ್ಳೋಳ್ಳಿಯ ಮಠದ ಭಾವೈಕ್ಯತೆಯ ಪಾಠ ಯಾರೂ ಹೇಳಿಕೊಡಬೇಕಾಗಿಲ್ಲ. ಭಾವೈಕ್ಯತೆ ಹಾಸು ಹೊಕ್ಕಾಗಿ ಬಂದಿರುವ ನೆಲದಲ್ಲಿ, ಸದ್ದು ಗದ್ದಲವಿಲ್ಲದೇ ಮೌನ ಕ್ರಾಂತಿ ಮಾಡುತ್ತಿರುವ ಅಳ್ಳೊಳ್ಳಿಯ ಗದ್ದುಗೆ ಮಠ. ಪ್ರಚಾರ ಬಯಸದೇ, ಸರ್ಕಾರಿ ಲಾಭ ಪಡೆಯದೇ ರಾಜಕಾರಣಿಗಳ ಹಸ್ತಕ್ಷೇಪವಿಲ್ಲದ ಅಳ್ಳೋಳ್ಳಿ ಮಠವಾಗಿದೆ ಎಂದು ಶ್ಲಾಘಿಸಿದರು.

ಅಳ್ಳೊಳ್ಳಿಯ ಮಠ ಕಲೆ, ಸಾಹಿತ್ಯ, ಸಂಗೀತ ಕ್ಷೇತ್ರಕ್ಕೆಕೊಟ್ಟಿರುವ ಮಹತ್ವ ಕಂಡು ಬೆರಗಾಗುತ್ತದೆ. ೧೦೦ಕ್ಕೂ ಹೆಚ್ಚಿನ ನಾಟಕ, ೯೦೦ಕ್ಕೂ ಹೆಚ್ಚಿನ ಪ್ರದರ್ಶನ ಕನ್ನಡ ನಾಡಿನ ನಾಟಕ ಕ್ಷೇತ್ರಕ್ಕೆ ಕೊಟ್ಟ ಅದ್ವಿತೀಯ ಕೊಡುಗೆ ಎಂದು ಬಣ್ಣಿಸಿದರು.

ಶಹಾಪುರದ ಆನೆಗುಂದಿ ಸರಸ್ವತಿ ಪೀಠದ ಏಕದಂಡಗಿ ಮಠದ ಶ್ರೀ ಅಜ್ಜೇಂದ್ರ ಮಹಾಸ್ವಾಮಿಗಳು ಮಾತನಾಡಿ, ರಂಗಕಲೆಗೆ ಅಳ್ಳೋಳ್ಳಿ ಮಹಾತ್ಮ ಪೀಠದ ಮಠದ ಕೊಡುಗೆ ಕುರಿತು ಸಂಶೋಧನಯಾಗಬೇಕು. ಈ ವಿಷಯ ಬಗ್ಗೆ ಪಿಎಚ್‌ಡಿ ಮಾಡಲು ವಿಶ್ವವಿದ್ಯಾಲಯ ಗಮನಹರಿಸಬೇಕು. ಅಯ್ಯಪ್ಪಯ್ಯ ಮಠಕ್ಕೆ ಯಾವುದೇ ಜಾತಿ ಭೇಧವಿಲ್ಲ ಎಂದು ಹೇಳಿದರು.

ಹಂಪಿ ವಿಶ್ವವಿದ್ಯಾಲಯದ ಸಂಗೀತ ಮತ್ತು ನೃತ್ಯ, ನಾಟಕ ವಿಭಾಗದ ಸಂಚಾಲಕ ಡಾ. ವೀರೇಶ ಬಡಿಗೇರ ಮಾತನಾಡಿ, ನಾಗೇಂದ್ರ ನಾಟ್ಯ ಸಂಘ (ನಾನಾಸಂ) ಸಂಗೀತ, ಸಾಹಿತ್ಯ ಒಂದೇ ನಾಣ್ಯದ ಎರಡು ಮುಖಗಳು. ರಂಗಕಲೆಯ ಕಲೆ ಉಳಿಸುವ ಕಲಾವಿದರ ಬೆಳೆಸುವ ಕಲ್ಪವೃಕ್ಷ, ಅಂತರಂಗ ಚೇತನಕ್ಕೆ ಚೇತೋಹಾರಿ ಅಳ್ಳೊಳ್ಳಿಯ ಅಯ್ಯಪ್ಪಯ್ಯ ಪೀಠ ಎಂದು ಹೇಳಿದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವೀರೇಂದ್ರಕುಮಾರ ಕೊಲ್ಲೂರ ಅವರು ಕವಿ ಅಕ್ಷಯಕುಮಾರ ಕೂಡ್ಲಿ ವಿರಚಿತ ಪದದಿ ಪ್ರೇಮ.. ರಾಧೇ ಶ್ಯಾಮ ಹಾಗೂ ವಿಶ್ವಾರಾಧ್ಯ ವಿಶ್ವಕರ್ಮ ವಿರಚಿತ ಕಲರವ ಕವನ ಸಂಕಲನ ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಅಳ್ಳೋಳ್ಳಿ ಗದ್ದುಗೆ ಮಠದ ಶ್ರೀ ನಾಗಪ್ಪಯ್ಯ ಮಹಾಸ್ವಾಮಿ, ಶ್ರೀ ಶಿರಸಪ್ಪಯ್ಯ ಮಹಾಸ್ವಾಮಿಗಳು ಸಾನ್ನಿಧ್ಯವಹಿಸಿದ್ದರು.

ವಿಚಾರ ಸಂಕೀರಣ ನಿರ್ದೇಶಕ ನರಸಿಂಗರಾವ ಹೇಮನೂರ ಸ್ವಾಗತಿಸಿದರು.

ಅಯ್ಯಣ್ಣ ಮಾಸ್ತರ, ಶ್ರೀಧರ ಆಚಾರ್ಯ ಪ್ರಾರ್ಥನಾ ಗೀತೆ ಹಾಡಿದರು. ಬಸವರಾಜ ಬಡಿಗೇರ ಬೋರಗಿ ನಿರೂಪಣೆ ಮಾಡಿದರು. ಭೀಮಸೇನ ಬಡಿಗೇರ ವಂದಿಸಿದರು.

ಖ್ಯಾತ ಶಿಲ್ಪ ಕಲಾವಿದ ಮಾನಯ್ಯ ಬಡಿಗೇರ, ಮೋಹನ ಸೀತನೂರ್, ವಿಶ್ವನಾಥ ಮಾಸ್ಟರ್ ಬೆಳಗುಂಪಾ, ಸಂಜೀವ ಕಡಬೂರ, ನಟರಾಜ ಶಿಲ್ಪಿ, ಶಂಭುಲಿಂಗ ಕರದಾಳ, ಶರಣಪ್ಪ ಕೋರವಾರ ಸೇರಿದಂತೆ ಅಳ್ಳೊಳ್ಳಿ ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು, ಕಲಾವಿದರು, ಕಲಾಭಿಮಾನಿಗಳು ಮತ್ತು ನೂರಾರು ಭಕ್ತರು ಭಾಗವಿಸಿದ್ದರು.