ದೇಹದ ಆರೋಗ್ಯಕ್ಕೆ ಪೊಷಕಾಂಶ ಹೊಂದಿರುವ ಸಮತೋಲಿತ ಆಹಾರ ಮುಖ್ಯ ಶೋಭಾದೇವಿ
ದೇಹದ ಆರೋಗ್ಯಕ್ಕೆ ಪೊಷಕಾಂಶ ಹೊಂದಿರುವ ಸಮತೋಲಿತ ಆಹಾರ ಮುಖ್ಯ ಶೋಭಾದೇವಿ
ಕಲಬುರ್ಗಿ ನ 26:ಆರೋಗ್ಯ ಮತ್ತು ಪೋಷಣೆ ಎಂದರೆ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಲು ಅಗತ್ಯವಾದ ಪೋಷಕಾಂಶಗಳನ್ನು ಹೊಂದಿರುವ ಸಮತೋಲಿತ ಆಹಾರವನ್ನು ಸೇವಿಸುವುದರಿಂದ ದೇಹದ ಬೆಳವಣಿಗೆ ಮತ್ತು ಅಭಿವೃದ್ಧಿ ಸಾಧ್ಯವಾಗುತ್ತದೆ, ಹಾಗೂ ದೀರ್ಘಕಾಲದ ಕಾಯಿಲೆಗಳ ಅಪಾಯ ಕಡಿಮೆಯಾಗುತ್ತದೆ ಎಂದು ಕೆ ಬಿ ಎನ್ ಆಸ್ಪತ್ರೆಯ ಆಪ್ತ ಸಮಾಲೋಚಕಿ ಶೋಭಾದೇವಿ ಹೇಳಿದರು
ಅವರು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಎಂ ಎಸ್ ಇರಾಣಿ ಪದವಿ ಮಹಾವಿದ್ಯಾಲಯದಲ್ಲಿ ಸಮಾಜಶಾಸ್ತ್ರ ವಿಭಾಗದ ವತಿಯಿಂದ ನಡೆದ ಆಹಾರ ಮತ್ತು ಪೌಷ್ಟಿಕಾಂಶ ಕುರಿತ ಮೌಲ್ಯವರ್ಧಿತ ತರಗತಿಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.
ಕಾರ್ಬೋಹೈಡ್ರೇಟ್‌ಗಳು, ಪ್ರೋಟೀನ್‌ಗಳು ಮತ್ತು ಕೊಬ್ಬುಗಳು: ಇವು ದೇಹದ ಕಾರ್ಯಚಟುವಟಿಕೆಗೆ ಪ್ರಮುಖವಾಗಿವೆ. ಹಣ್ಣುಗಳು, ತರಕಾರಿಗಳು, ಧಾನ್ಯಗಳು, ಬೀನ್ಸ್ ಮತ್ತು ದ್ವಿದಳ ಧಾನ್ಯಗಳಿಂದ ಉತ್ತಮ ಕಾರ್ಬೋಹೈಡ್ರೇಟ್‌ಗಳು ಮತ್ತು ಪ್ರೋಟೀನ್‌ಗಳನ್ನು ಪಡೆಯಬಹುದು.
ಜೀವಸತ್ವಗಳು ಮತ್ತು ಖನಿಜಗಳು: ಇವು ದೇಹದಿಂದ ಉತ್ಪತ್ತಿಯಾಗುವುದಿಲ್ಲ, ಆದ್ದರಿಂದ ಆಹಾರದ ಮೂಲಕ ಪಡೆಯಬೇಕು. ಹಣ್ಣುಗಳು, ತರಕಾರಿಗಳು, ಹಾಲು ಮತ್ತು ಧಾನ್ಯಗಳಂತಹ ವಿವಿಧ ಆಹಾರಗಳಲ್ಲಿ ಇವು ಲಭ್ಯವಿವೆ ಎಂದು ತಿಳಿಸಿದರು.
ಕಾರ್ಬೋಹೈಡ್ರೇಟ್‌ಗಳು, ಪ್ರೋಟೀನ್‌ಗಳು ಮತ್ತು ಕೊಬ್ಬುಗಳು: ಇವು ದೇಹದ ಕಾರ್ಯಚಟುವಟಿಕೆಗೆ ಪ್ರಮುಖವಾಗಿವೆ. ಹಣ್ಣುಗಳು, ತರಕಾರಿಗಳು, ಧಾನ್ಯಗಳು, ಬೀನ್ಸ್ ಮತ್ತು ದ್ವಿದಳ ಧಾನ್ಯಗಳಿಂದ ಉತ್ತಮ ಕಾರ್ಬೋಹೈಡ್ರೇಟ್‌ಗಳು ಮತ್ತು ಪ್ರೋಟೀನ್‌ಗಳನ್ನು ಪಡೆಯಬಹುದು.
ಜೀವಸತ್ವಗಳು ಮತ್ತು ಖನಿಜಗಳು: ಇವು ದೇಹದಿಂದ ಉತ್ಪತ್ತಿಯಾಗುವುದಿಲ್ಲ, ಆದ್ದರಿಂದ ಆಹಾರದ ಮೂಲಕ ಪಡೆಯಬೇಕು. ಹಣ್ಣುಗಳು, ತರಕಾರಿಗಳು, ಹಾಲು ಮತ್ತು ಧಾನ್ಯಗಳಂತಹ ವಿವಿಧ ಆಹಾರಗಳಲ್ಲಿ ಇವು ಲಭ್ಯವಿವೆ ಎಂದು ಆರೋಗ್ಯಕರ ಆಹಾರ ಪದ್ಧತಿಯ ಸಲಹೆಗಳನ್ನು ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರೋ ರಾಜಶೇಖರ ಬೀರನಳ್ಳಿ ಮಾತನಾಡಿ ಆರೋಗ್ಯವೆ ಸರ್ವಶ್ರೇಷ್ಠ ಭಾಗ್ಯ ವಾಗಿದ್ದು ಮನುಷ್ಯನಿಗೆ ಆರೋಗ್ಯ ಸರಿಯಾಗಿದ್ದರೆ ಎಲ್ಲವನ್ನೂ ಸಾಧಿಸಬಹುದು ಎಂದು ಹೇಳಿದರು.
ಸಮಾಜ ಶಾಸ್ತ್ರದ ಮುಖ್ಯಸ್ಥರು ಕಾರ್ಯಕ್ರಮದ ಸಂಘಟಕರಾದ ಡಾ ಮೈತ್ರಾದೇವಿ ಹಳಮನಿ ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು.ವಿಜಯಲಕ್ಷ್ಮೀ ನಂದ್ಯಾಳ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.