ಕೆಂಭಾವಿಯಲ್ಲಿ ರಾಷ್ಟ್ರೀಯ ಸಂವಿಧಾನ ಸಮರ್ಪಣಾ ದಿನ ಭವ್ಯ ಆಚರಣೆ
ಕೆಂಭಾವಿಯಲ್ಲಿ ರಾಷ್ಟ್ರೀಯ ಸಂವಿಧಾನ ಸಮರ್ಪಣಾ ದಿನ ಭವ್ಯ ಆಚರಣೆ
ಕೆಂಭಾವಿ: ಪಟ್ಟಣದ ಮಹಾ ನಾಯಕ ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಇಂದು (26 ನವೆಂಬರ್) ರಾಷ್ಟ್ರೀಯ ಸಂವಿಧಾನ ಸಮರ್ಪಣಾ ದಿನವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ನೂತನವಾಗಿ ಆಯ್ಕೆಯಾದ ಪುರಸಭೆ ಅಧ್ಯಕ್ಷರ ಪತಿಯಾದ ಶ್ರೀಮತಿ ಪ್ರಿಯಾ ರಾಮನಗೌಡ ಪೊಲೀಸ್ ಪಾಟೀಲ್ ಅವರು ಅಧ್ಯಕ್ಷತೆ ವಹಿಸಿದರು.
ಮುಖ್ಯ ಅತಿಥಿಗಳಾಗಿ ಪಿಯು ಕಾಲೇಜಿನ ಪ್ರಾಂಶುಪಾಲರಾದ ಅಶೋಕ್ ಕೆಳಿಗೇರಿ ಭಾಗವಹಿಸಿ ಮಾತನಾಡಿ, “ನಮ್ಮ ದೇಶದ ಸಂವಿಧಾನವು ಸರ್ವ ಸಮಾಜ, ಸರ್ವ ಧರ್ಮ, ಸರ್ವ ಜಾತಿ–ಜನಾಂಗಗಳ ಸಮಾನತೆಗಾಗಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬರೆದ ಮಹಾನ್ ದಸ್ತಾವೇಜು. ಮಹಿಳೆಯರಿಗೂ ಸಮಾನ ಅವಕಾಶ ಕಲ್ಪಿಸಿದ ಮಹಾನ್ ಕ್ರಾಂತಿಕಾರರು ಅಂಬೇಡ್ಕರ್. ಅವರು ಯಾರೊಬ್ಬ ಜಾತಿಗೆ ಸೀಮಿತವಲ್ಲ; ರಾಷ್ಟ್ರದ ಏಳಿಗೆಯಾಗಿಯೇ ಬದುಕಿದರು. ಪ್ರತಿಯೊಬ್ಬ ನಾಗರಿಕನು ಸಂವಿಧಾನವನ್ನು ಓದಿ, ಅಂಬೇಡ್ಕರ್ ಅವರ ತತ್ವಗಳನ್ನು ತಿಳಿದು ಗೌರವಿಸಬೇಕು” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪರಶುರಾಮ ಬಳಬಟ್ಟಿ, ಶರಣಪ್ಪ ಗಾಯಕೋಡ ನಗನೂರು, ಮಲ್ಲಿಕಾರ್ಜುನ್ ಶಿಕ್ಷಕರು, ಮಡಿವಾಳಪ್ಪ ಕಟ್ಟಿಮನಿ, ಬಸವಣ್ಣಪ್ಪ ಆರ್, ಮಾಳಳ್ಳಿಕರ್, ದೇವೇಂದ್ರಪ್ಪ ವಠರ, ಸಂಗಣ್ಣ ಕರಡಕ್ಕಲ, ಡಾ. ಪರಶುರಾಮ SM, ದೇವೀಂದ್ರಪ್ಪ ಮ್ಯಾಗೇರಿ, ಗೋಪಾಲ ಬಡಿಗೇರ, ಸುರೇಶ್ ಮಾಳಳ್ಳಿಕರ್, H.R. ಬಡಿಗೇರ, ಸಾಯಿಬಣ ಎಂಟುಮಾನ, ಮಲು ವಠರ, ಕುಮಾರ್ ಮೋಪುಗಾರ, ಸಂಗಣ್ಣ ಚಿಂಚೋಳಿ, ಲಕ್ಷ್ಮಣ್ಣ ಬಾವಿಮನಿ, ಪರಶುರಾಮ ಮಾಳಳ್ಳಿಕರ್, ಮಲ್ಲಿಕಾರ್ಜುನ ಕಟ್ಟಿಮನಿ, ಮಾಂತೇಶ್ ನಗನೂರ, ಪ್ರಕಾಶ ಮಾಳಳ್ಳಿಕರ್, ಬಾಲರಾಜ ಬಸರೀಗಿಡ, ನಿಂಗಪ್ಪ ಕಟ್ಟಿಮನಿ ಸೇರಿದಂತೆ ಅನೇಕ ಮುಖಂಡರು, ಪುರಸಭೆ ನೌಕರವರ್ಗ ಹಾಗೂ ಸಮಾಜದ ಗಣ್ಯರು ಭಾಗವಹಿಸಿದರು.
ವರದಿ : ಜೇಟ್ಟೆಪ್ಪ ಎಸ್. ಪೂಜಾರಿ
