ನ. 1ರಂದು ಲಿಂಗ ದೀಕ್ಷೆ ಇಷ್ಟಲಿಂಗ ಪೂಜೆ
ನ. 1ರಂದು ಲಿಂಗ ದೀಕ್ಷೆ ಇಷ್ಟಲಿಂಗ ಪೂಜೆ
ಕಲಬುರಗಿ: ನವೆಂಬರ್ 1 ರಂದು ಶ್ರೀಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿಗಳಾದ ಚಿ ದೊಡ್ಡಪ್ಪಅಪ್ಪಾಜಿ ಅವರ ಜನ್ಮದಿನದ ಪ್ರಯುಕ್ತ ಶ್ರೀ ಶರಣಬಸವೇಶ್ವರ ಗದ್ದುಗೆಗೆ ಲಕ್ಷ ಪುಷ್ಪ ಬಿಲ್ವಾ ಅರ್ಚನೆ, ಲಿಂಗ ದೀಕ್ಷೆ, ಇಷ್ಟಲಿಂಗ ಪೂಜೆ ಹಾಗೂ ನಡೆಯಲಿದೆ ಎಂದು ವೀರಶೈವ ಲಿಂಗಾಯತ ಮಹಾ ವೇದಿಕೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ವೇದಿಕೆಯ ರಾಜ್ಯಾಧ್ಯಕ್ಷ ಪ್ರಶಾಂತ್ ಕಲ್ಲೂರ್ ನೇತೃತ್ವದ ವೀರಶೈವ ಲಿಂಗಾಯತ ಮಹಾ ವೇದಿಕೆ (ರಿ) ಜಿಲ್ಲಾ ಸಮಿತಿ ವತಿಯಿಂದ ಎಂಟನೇ ಪೀಠಾಧಿಪತಿಗಳಾದ ಪೂಜ್ಯ ಡಾ.ಶ್ರೀ ಶರಣಬಸಪ್ಪ ಅಪ್ಪ ಹಾಗೂ ಪೂಜ್ಯ ಒಂಬತ್ತನೇ ಪೀಠಾದೀಪತಿಗಳಾದ ಪೂಜ್ಯ ಶ್ರೀ ಚಿರಂಜೀವಿ ದೊಡ್ಡಪ್ಪ ಅಪ್ಪ ಅವರ ಜನ್ಮದಿನದ ಅಂಗವಾಗಿ ಪ್ರತಿ ವರ್ಷದಂತೆ ತೃತೀಯ ವರ್ಷದಂದು ಶ್ರೀ ಶರಣಬಸವೇಶ್ವರ ಗದ್ದುಗಗೆ ಒಂದು ಲಕ್ಷ ಪುಷ್ಪ ಬಿಲ್ವಾರ್ಚನೆ, ಲಿಂಗದೀಕ್ಷೆ ಮತ್ತು 1001 ಸಾಮೂಹಿಕ ಇಷ್ಟಲಿಂಗ ಪೂಜೆ ಹಾಗೂ ಜಂಗಮ ವಟುಗಳಿಗೆ ಅಯ್ಯಚಾರ ಕಾರ್ಯಕ್ರಮವನ್ನು ವೇದಿಕೆ ವತಿಯಿಂದ ಹಮ್ಮಿಕೊಳ್ಳಲಾ ಗಿದೆ.ಆದ್ದರಿಂದ ಕಾರ್ಯಕ್ರಮಕ್ಕೆ ಜಿಲ್ಲೆಯ ಹೆಚ್ಚಿನ ಜನರು ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಯುವ ಮುಖಂಡ ಶ್ರೀಧರ್ ನಾಗನಹಳ್ಳಿ ವೇದಿಕೆಯ ಜಿಲ್ಲಾಧ್ಯಕ್ಷ ದಯಾನಂದ ಪಾಟೀಲ್, ಉಪಾಧ್ಯಕ್ಷ ಕಲ್ಯಾಣರಾವ್ ಪಾಟೀಲ್ ಕಣ್ಣಿ ಹಾಗೂ ಪ್ರಕಟಣೆಯಲ್ಲಿ ಕೋರಿದ್ದಾರೆ.
