ಸಿನಿಪ್ರಿಯರಿಗೆ ತೆರೆದ ಕಲ್ಬುರ್ಗಿ ಶೆಟ್ಟಿ ಸಿನಿಮಾಸ್

ಸಿನಿಪ್ರಿಯರಿಗೆ ತೆರೆದ ಕಲ್ಬುರ್ಗಿ ಶೆಟ್ಟಿ ಸಿನಿಮಾಸ್

ಸಿನಿಪ್ರಿಯರಿಗೆ ತೆರೆದ ಕಲ್ಬುರ್ಗಿ ಶೆಟ್ಟಿ ಸಿನಿಮಾಸ್

ಕಲ್ಬುರ್ಗಿ: ಅಂತರಾಷ್ಟ್ರೀಯ ದರ್ಜೆಯ ಧ್ವನಿ ಬೆಳಕು ವಿನ್ಯಾಸದೊಂದಿಗಿನ ನವೀಕರಣಗೊಂಡ ನಾಲ್ಕು ಪರದೆಗಳ ಶೆಟ್ಟಿ ಸಿನಿಮಾಸ್ ಚಿತ್ರಮಂದಿರ ಕಲಬುರ್ಗಿಯಲ್ಲಿ ಸಿನಿಪ್ರಿಯರಿಗೆ ಮತ್ತೆ ಶುಭಾರಂಭಗೊಂಡಿದೆ. 

    ಕರ್ನಾಟಕ ಲೋಕಾಯುಕ್ತ ಎಡಿಜಿ ಮನೀಶ್ ಖರ್ಬೀಕರ್ ನೂತನವಾಗಿ ವಿನ್ಯಾಸಗೊಂಡ ಶೆಟ್ಟಿ ಸಿನಿಮಾಸ್ ಚಿತ್ರಮಂದಿರಕ್ಕೆ ವನ್ನು ಸೆಪ್ಟೆಂಬರ್ 18ರಂದು ಉದ್ಘಾಟನೆ ಮಾಡಿ ಶುಭ ಕೋರಿದರು. 

    ಕಲ್ಬುರ್ಗಿ ಆಳಂದರ ರಸ್ತೆಯ ಶೆಟ್ಟಿ ಸಿನಿಮಾ ನಾಲ್ಕು ಪರದೆಗಳನ್ನು ಹೊಂದಿದೆ 1400 ಹಾಸನ ವ್ಯವಸ್ಥೆ, 360 ಡಿಗ್ರಿಯಲ್ಲಿ ಆಲಿಸಬಹುದಾದ ಡಾಲ್ಬಿ ಸೌಂಡ್ ಸಿಸ್ಟಮ್, ನಾಲ್ಕು ಚಿತ್ರಮಂದಿರ ಒಂದೇ ಆವರಣದಲ್ಲಿ ಮತ್ತು ಒಂದೇ ಕಟ್ಟಡದಲ್ಲಿ ವಿನೂತನವಾಗಿ ಅತ್ಯಾಧುನಿಕ ಶೈಲಿಯಲ್ಲಿ ನವೀಕರಿಸಲಾಗಿದೆ. ಎಕ್ಸಲೇಟರ್ ಪಾನೀಯ ವ್ಯವಸ್ಥೆ ಮಳಿಗೆ, ಟಿಕೆಟ್ ಕೌಂಟರ್, ಸೆನ್ಸಾರ್ ಅಳವಡಿಕೆ ಮಾಡಿದ ಶೌಚಗೃಹ ಮುಂತಾದ ಅತ್ಯಾಧುನಿಕ ವ್ಯವಸ್ಥೆಗಳನ್ನು ಹೊಂದಿದ ರಮಣೀಯವಾದ ಬೆಳಕು ವಿನ್ಯಾಸಗಳಿಂದ ನ ನವೀಕೃತಗೊಂಡ ಸಿನಿಮಾ ಮಂದಿರವನ್ನು ಸೆಪ್ಟಂಬರ್ 20 ರಿಂದ ಸಾರ್ವಜನಿಕ ಪ್ರದರ್ಶನಕ್ಕೆ ಮುಕ್ತಗೊಳಿಸಲಾಗಿದೆ. 

     ಉದ್ಘಾಟನಾ ಸಮಾರಂಭದಲ್ಲಿ ಕಲ್ಬುರ್ಗಿ ಪೊಲೀಸ್ ತರಬೇತಿ ಕೇಂದ್ರದ ಪ್ರಾಂಶುಪಾಲರಾದ ಡೆಕ್ಕಾ ಕಿಶೋರ್ ಬಾಬು, ಕಲಬುರ್ಗಿ ಸಹಾಯಕ ಆಯುಕ್ತರಾದ ಐಎಎಸ್ ಅಧಿಕಾರಿ ಸಾಹಿತ್ಯ, ಕೆಕೆಆರ್‌ಡಿಬಿ ಉಪ ಕಾರ್ಯದರ್ಶಿ ಪ್ರಮೀಳಾ ಎಂ.ಕೆ, ಹಿರಿಯ ಉದ್ಯಮಿಗಳಾದ ರಾಘವೇಂದ್ರ ಮೈಲಾಪುರ್ ಚಂದ್ರಕಾಂತ್ ಗುತ್ತೇದಾರ್ ವೆಂಕಟೇಶ ಕಡೇಚೂರ್, ಸತೀಶ್ ವಿ .ಗುತ್ತೇದಾರ್ ಆಕಾಶವಾಣಿ ನಿವೃತ್ತ ಹಿರಿಯ ಕಾರ್ಯಕ್ರಮ ಅಧಿಕಾರಿ ಡಾ. ಸದಾನಂದ ಪೆರ್ಲ, ಹಿರಿಯ ಉದ್ಯಮಿ ಅಶೋಕ್ ಗುತ್ತೇದಾರ್ ಬಡದಾಳ, ಬಿಜೆಪಿಯ ಹಿರಿಯ ಮುಖಂಡ ನಿತಿನ್ ವಿ.ಗುತ್ತೇದಾರ್, ಸಂತೋಷ್ ವಿ. ಗುತ್ತೇದಾರ್, ಭೀಮರಾಯ ಸಿಂಧಗಿ, ಶೆಟ್ಟಿ ಸಿನಿಮಾಸ್ ಮಾಲಕರಾದ

ಗಿರಿಜಾ ಶಂಕರ ಶೆಟ್ಟಿ, ಪಾಲುದಾರ ಸಂಗಪ್ಪ ಗಿರಿಜಾ ಶಂಕರ ಶೆಟ್ಟಿ, ಅಮೂಲ್ಯ ಸಂಗಪ್ಪ ಗುತ್ತೇದಾರ್, ಸುಜಾತ ಗಿರಿಜಾ ಶಂಕರ್ ಶೆಟ್ಟಿ, ಶೋಭಾ ಅಶೋಕ್ ಗುತ್ತೇದಾರ್ ಮತ್ತಿತರ ಅನೇಕರು ಉಪಸ್ಥಿತರಿದ್ದರು.