ಅಸಾಧ್ಯವನ್ನು ಸಾಧ್ಯವಾಗಿಸಿದ ಬೆಂಗಳೂರಿನ ಮಹಿಳೆ: 50ನೇ ವಯಸ್ಸಿನಲ್ಲಿ ತಾಯ್ತನದ ಸಾಧನೆ

ಅಸಾಧ್ಯವನ್ನು ಸಾಧ್ಯವಾಗಿಸಿದ ಬೆಂಗಳೂರಿನ ಮಹಿಳೆ: 50ನೇ ವಯಸ್ಸಿನಲ್ಲಿ ತಾಯ್ತನದ ಸಾಧನೆ

ಅಸಾಧ್ಯವನ್ನು ಸಾಧ್ಯವಾಗಿಸಿದ ಬೆಂಗಳೂರಿನ ಮಹಿಳೆ: 50ನೇ ವಯಸ್ಸಿನಲ್ಲಿ ತಾಯ್ತನದ ಸಾಧನೆ

ಬೆಂಗಳೂರು: ಎಲ್ಲಾ ವೈದ್ಯಕೀಯ ಸವಾಲುಗಳನ್ನು ಮೀರಿ ಬೆಂಗಳೂರಿನ 50 ವರ್ಷದ ಮಹಿಳೆ ಶ್ರೀಮತಿ ಕಿಶೋರಿ (ಹೆಸರು ಬದಲಾಯಿಸಲಾಗಿದೆ) ಆರೋಗ್ಯವಂತ ಹೆಣ್ಣುಮಗುವಿಗೆ ಜನ್ಮ ನೀಡುವ ಮೂಲಕ ತಾಯ್ತನದ ಅಪೂರ್ವ ಸಾಧನೆ ಮಾಡಿದ್ದಾರೆ. ಋತುಚಕ್ರದ ಅಂತ್ಯದ ಹಂತ ತಲುಪಿದಾಗಲೂ, ದೃಢ ಛಲ, ವೈದ್ಯಕೀಯ ಪರಿಣತಿ ಮತ್ತು ಅಚಲ ನಂಬಿಕೆಯಿAದ ಈ ಅಸಾಧ್ಯವನ್ನು ಸಾಧ್ಯವಾಗಿಸಿದ್ದಾರೆ.

ಕಿಶೋರಿ ಅವರಿಗೆ ಟೈಪ್ 2 ಮಧುಮೇಹ, ದೀರ್ಘಕಾಲದ ಅಧಿಕ ರಕ್ತದೊತ್ತಡ ಮತ್ತು ಬೊಜ್ಜು ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳಿದ್ದವು. ಇದು ಅವರ ಗರ್ಭಧಾರಣೆಯನ್ನು ಅತಿ ಹೆಚ್ಚು ಅಪಾಯಕಾರಿಯನ್ನಾಗಿಸಿತ್ತು. 0.03% ಕ್ಕಿಂತ ಕಡಿಮೆ ಸಂಭವನೀಯತೆಯ ಈ ಯಶಸ್ವಿ ಗರ್ಭಧಾರಣೆಯನ್ನು, ಮಿಲನ್ ಫರ್ಟಿಲಿಟಿ ಆಸ್ಪತ್ರೆಯ ಹಿರಿಯ ಸ್ತ್ರೀರೋಗ ತಜ್ಞೆ ಡಾ. ವಾರಿಣಿ ಎನ್ ಅವರ ನೇತೃತ್ವದಲ್ಲಿ, ಬಹು-ಶಿಸ್ತಿನ ವೈದ್ಯಕೀಯ ತಂಡವು ಯಶಸ್ವಿಯಾಗಿ ನಿರ್ವಹಿಸಿದೆ.

ಐವಿಎಫ್ ಮೂಲಕ ಗರ್ಭಧರಿಸಿದ ಕಿಶೋರಿ ಅವರ ಆರೋಗ್ಯವನ್ನು ಮೊದಲ ತ್ರೈಮಾಸಿಕದಿಂದಲೇ ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಯಿತು. ರಕ್ತದಲ್ಲಿನ ಸಕ್ಕರೆ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸಲಾಯಿತು. ಮಾನಸಿಕ ಆರೋಗ್ಯ ಬೆಂಬಲವನ್ನೂ ಒದಗಿಸಲಾಯಿತು. ಪ್ರಸವದ ಸಮಯದಲ್ಲಿ ಅಧಿಕ ರಕ್ತಸ್ರಾವದ ಅಪಾಯವಿದ್ದರೂ, ವೈದ್ಯಕೀಯ ತಂಡದ ನಿಖರ ಯೋಜನೆ ಮತ್ತು ಆರೈಕೆಯಿಂದ 2.8 ಕೆಜಿ ತೂಕದ ಆರೋಗ್ಯವಂತ ಹೆಣ್ಣುಮಗುವಿಗೆ ಯಶಸ್ವಿಯಾಗಿ ಸಿಸೇರಿಯನ್ ಮೂಲಕ ಜನ್ಮ ನೀಡಲಾಯಿತು.

"50ನೇ ವಯಸ್ಸಿನಲ್ಲಿ ತಾಯ್ತನ ಸಾಧ್ಯವೇ ಎಂದು ನನಗೆ ಖಚಿತವಿರಲಿಲ್ಲ, ಆದರೆ ಡಾ. ವಾರಿಣಿ ಅವರ ಆರೈಕೆಯಿಂದ ಇದು ಸಾಧ್ಯವಾಯಿತು" ಎಂದು ಕಿಶೋರಿ ಹರ್ಷ ವ್ಯಕ್ತಪಡಿಸಿದ್ದಾರೆ. ಈ ಕಥೆಯು ವೈದ್ಯಕೀಯ ಪ್ರಗತಿ, ವೈಯಕ್ತಿಕ ಛಲ ಮತ್ತು ಸಮರ್ಪಿತ ಆರೈಕೆಯ ಶಕ್ತಿಗೆ ಉತ್ತಮ ನಿದರ್ಶನವಾಗಿದೆ.