ಶಿವಲಿಂಗಪ್ಪ ದೊಡ್ಮನಿಗೆ ಮೊಹೊರೆ ಹನುಮಂತರಾಯ್ ಪತ್ರಿಕೋದ್ಯಮ ಪ್ರಶಸ್ತಿ
ಶಿವಲಿಂಗಪ್ಪ ದೊಡ್ಮನಿ ಮಣೂರಗೆ ಮೊಹೊರೆ ಹನುಮಂತರಾಯ್ ಪತ್ರಿಕೋದ್ಯಮ ಪ್ರಶಸ್ತಿ
ಬೆಂಗಳೂರು : ಮೊಹರೆ ಹಣಮಂತರಾಯ ಪತ್ರಿಕೋದ್ಯಮ ಪ್ರಶಸ್ತಿ ಘೋಷಿಸಲಾಗಿದೆ. ಈ ಪ್ರಶಸ್ತಿಯು 2 ಲಕ್ಷ ರೂಪಾಯಿ ನಗದು ಬಹುಮಾನವನ್ನು ಒಳಗೊಂಡಿವೆ. ಹಿರಿಯ ಪತ್ರಕರ್ತ ಶಿವಲಿಂಗಪ್ಪ ದೊಡ್ಮನಿ , ಕಲಬುರಗಿ ಅವರು ಪ್ರಶಸ್ತಿ ಪಡೆಯಲಿದ್ದಾರೆ.
ಕನ್ನಡ ಪತ್ರಿಕೋದ್ಯಮದಲ್ಲಿ ಅನನ್ಯ ಸೇವೆ ಸಲ್ಲಿಸಿದ ಪತ್ರಕರ್ತರಿಗೆ ನೀಡುವ ಟಿಎಸ್ ರಾಮಚಂದ್ರರಾವ್ (ಟಿಎಸ್‍ಆರ್) ಪತ್ರಿಕೋದ್ಯಮ ಪ್ರಶಸ್ತಿ ಹಾಗೂ ಕನ್ನಡ ಪತ್ರಿಕೆ ಅಥವಾ ಪತ್ರಿಕಾ ಸಮೂಹವನ್ನು ಕಟ್ಟಿ ಬೆಳೆಸಿದ ಪತ್ರಕರ್ತರ ಸಾಧನೆ ಗುರುತಿಸಿ ನೀಡುವ ಮೊಹರೆ ಹಣಮಂತರಾಯ ಪತ್ರಿಕೋದ್ಯಮ ಪ್ರಶಸ್ತಿಗಳನ್ನು ಇಂದು ಪ್ರಕಟಿಸಲಾಗಿದೆ.
ಕೋವಿಡ್ ನಿಂದ ಮತ್ತು ವಿವಿಧ ಕಾರಣಗಳಿಂದಾಗಿ ಪ್ರಶಸ್ತಿ ನಿಂತಿತ್ತು ಈಗ 2019ರಿಂದ 2023ನೇ ಸಾಲಿನ ಒಟ್ಟು 5 ವರ್ಷಗಳ ಅವಧಿಯ ಪ್ರಶಸ್ತಿಗಳನ್ನು ಒಂದೇ ಬಾರಿ ನೀಡುವುದಾಗಿ ಘೋಷಿಸಲಾಗಿದೆ.
ವಿಶ್ರಾಂತ ನ್ಯಾಯಾಧೀಶರಾದ ನ್ಯಾ.ಪಿಎನ್ ದೇಸಾಯಿ ಅವರ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿ ರಚಿಸಲಾಗಿತ್ತು. ಅದರಂತೆ, ಅರ್ಜಿಗಳು ಮತ್ತು ನಾಮನಿರ್ದೇಶನಗಳ ಸಮಗ್ರ ಪರಿಶೀಲನೆ ನಡೆಸಿ, ಈ ಎರಡೂ ಪ್ರಶಸ್ತಿಗಳಿಗೆ ಆಯ್ಕೆ ಮಾಡಿ ಸರ್ಕಾರಕ್ಕೆ ವರದಿ ನೀಡಲಾಗಿತ್ತು. ಸರ್ಕಾರವು ಪತ್ರಕರ್ತರ ಹೆಸರುಗಳನ್ನು ಅನುಮೋದಿಸಿದೆ.
ಸಂಧ್ಯಾ ಕಾಲ್ ಪತ್ರಿಕೆಯ ಸಂಪಾದಕರಾದ ಶಿವಲಿಂಗಪ್ಪ ದೊಡ್ಮನಿ ಅವರಿಗೆ ಕರ್ನಾಟಕ ಸರ್ಕಾರ ಈ ಪ್ರಶಸ್ತಿ ನೀಡಿಲಿದೆ.ಕಲ್ಯಾಣ ಕರ್ನಾಟಕ ಭಾಗದ ಎಲ್ಲಾ ಪತ್ರಕರ್ತರು, ಅಭಿಮಾನಿಗಳು ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ .