ನಾಡೋಜ ಬರಗೂರರು ಶ್ರಮ ಸಂಸ್ಕೃತಿಯ ಪ್ರತಿಪಾದಕರು.ಆ ಕಾರಣ ಬೆವರೇ ನಮ್ಮ ದೇವರು ಎಂದವರು- ಡಾ.ಹೊನ್ಕಲ್

ನಾಡೋಜ ಬರಗೂರರು ಶ್ರಮ ಸಂಸ್ಕೃತಿಯ ಪ್ರತಿಪಾದಕರು.ಆ ಕಾರಣ ಬೆವರೇ ನಮ್ಮ ದೇವರು ಎಂದವರು- ಡಾ.ಹೊನ್ಕಲ್

ನಾಡೋಜ ಬರಗೂರರು ಶ್ರಮ ಸಂಸ್ಕೃತಿಯ ಪ್ರತಿಪಾದಕರು.ಆ ಕಾರಣ ಬೆವರೇ ನಮ್ಮ ದೇವರು ಎಂದವರು- ಡಾ.ಹೊನ್ಕಲ್

(ಗುರುಮಠಕಲ್:- 24-11-25) ನಾಡೋಜ ಬರಗೂರರು ಶ್ರಮ ಸಂಸ್ಕೃತಿಯ ಪ್ರತಿಪಾದಕರು.ಆ ಕಾರಣ ಬೆವರೇ ನಮ್ಮ ದೇವರು ಎಂದವರು. ಅವರು ಕೋಗಿಲೆ ಗಿಂತ ಹಂಚಿಕೊಂಡು ತಿನ್ನುವ ಕಾಗೆ ನಮಗೆ ಮುಖ್ಯ. ಶ್ರೀಗಂಧದ ಮರ ನಾವು ಕಂಡಿಲ್ಲ. ನಮ್ಮ ಸುತ್ತಲೂ ಇರುವ ಜಾಲಿಯೇ ನಮ್ಮ ಸಾಹಿತ್ಯ ರಚನೆಗೆ ಪ್ರತಿಮೆಯಾಗಬೇಕು ಎಂದು ಪ್ರತಿಪಾದಿಸುವ ಈ ನಾಡು ಕಂಡ ಶ್ರೇಷ್ಠ ಲೇಖಕರಲ್ಲಿ ಒಬ್ಬರು ಎಂದು ಲೇಖಕ ಡಾ.ಸಿದ್ಧರಾಮ ಹೊನ್ಕಲ್ ಬರಗೂರರ ಕುರಿತು ಪರಿಚಯಿಸುತ್ತಾ ಮಾತನಾಡಿದರು.ಅವರು‌ ಗುರುಮಿಠಕಲ್ ದ ಪ್ರಥಮ ದರ್ಜೆ ಸರ್ಕಾರಿ ಪದವಿ ಕಾಲೇಜಿನಲ್ಲಿ ಇತ್ತೀಚೆಗೆ ಎರ್ಪಡಿಸಿದ ಬರಗೂರರ ಕಥೆ ಚಿತ್ರಕಥೆ ಸಂಭಾಷಣೆ ಹಾಡು ಬರೆದು ಅವರೇ ನಿರ್ದೇಶಿಸಿದ "ಸ್ವಪ್ನಮಂಟಪ" ಚಾರಿತ್ರಿಕ ಹಾಗೂ ವರ್ತಮಾನದ ತಲ್ಲಣಗಳಿಗೆ ಸ್ಪಂದಿಸಿದ ಚಲನಚಿತ್ರ ಪ್ರದರ್ಶನ ಕಾರ್ಯಕ್ರಮದಲ್ಲಿ ಆಶಯ ನುಡಿ ಆಡುತ್ತಾ ಈ ಮಾತುಗಳು ಹಂಚಿಕೊಂಡರು.

ಈ ಸ್ವಪ್ನ ಮಂಟಪ ಆಂಧ್ರದ ಗಡಿನಾಡು ಆದ ನಮ್ಮ ಗುರುಮಿಠಕಲ್ ಪದವಿ ವಿದ್ಯಾರ್ಥಿಗಳಿಗೆ ತೋರಿಸುವ ಮೂಲಕ ಗಡಿನಾಡಿನಲ್ಲಿ ಕನ್ನಡದ ಗೀತೆ ಮೊಳಗಿಸುವ ಸಾರ್ಥಕ ಕೆಲಸ ಮಾಡಿದ ನಾಡೋಜ ಬರಗೂರರಿಗೂ ಹಾಗೂ ನಮ್ಮ ಜಿಲ್ಲೆಯ ಹೆಮ್ಮೆಯ ಲೇಖಕ ಹೊನ್ಕಲ್ ಅವರಿಗೆ ಕೃತಜ್ಞತೆಗಳು ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ.ಪುರುಷೋತ್ತಮ ಅವರು ಅಭಿನಂದನೆಗಳು ತಿಳಿಸಿದರು.ಕಾರ್ಯಕ್ರಮದ ವೇದಿಕೆಯಲ್ಲಿ ಕಸಾಪ ಅಧ್ಯಕ್ಷ ಬಸರೆಡ್ಡಿ ಪಾಟೀಲ ಹಾಗೂ ವಿಶ್ರಾಂತ ಪ್ರಾಂಶುಪಾಲ ಲಕ್ಷ್ಮಯ್ಯ ಕಲಾಲ್, ಡಾ.ಬಾಬುರಾಯ ದೊರೆ ಮುಂತಾದವರು ಉಪಸ್ಥಿತರಿದ್ದರು.ಡಾ.ಮರೆಪ್ಪ ನಾಟೇಕಾರ‌ ಕಾರ್ಯಕ್ರಮ ನಿರ್ವಹಿಸಿ ಚಲನಚಿತ್ರ ಪ್ರದರ್ಶನ ಏರ್ಪಡಿಸಿದ್ದರು. ಕಾಲೇಜಿನ ಇತರ ಉಪನ್ಯಾಸಕರು, ನೂರಾರುವ ವಿದ್ಯಾರ್ಥಿಗಳು ಭಾಗವಹಿಸಿದ್ದರು.