ಕನ್ನಡ ನಾಡು ನುಡಿ ಶ್ರೀಮಂತವಾದದ್ದು - ಮಹಿಪಾಲರೆಡ್ಡಿ ಮುನ್ನೂರ
ಕನ್ನಡ ನಾಡು ನುಡಿ ಶ್ರೀಮಂತವಾದದ್ದು - ಮಹಿಪಾಲರೆಡ್ಡಿ ಮುನ್ನೂರ.
ಯಾದಗಿರಿ : ಕನ್ನಡ ನಾಡು-ನುಡಿಗೆ ಸಾವಿರಾರು ವರ್ಷಗಳ ಇತಿಹಾಸವಿದ್ದು ಅದರಲ್ಲೂ ವಿಶೇಷವಾಗಿ ಕಲೆ,ಸಾಹಿತ್ಯ, ಸಂಸ್ಕೃತಿ,ಪರಂಪರೆಗಳಿಂದ ಶ್ರೀಮಂತಗೊಂಡಿದೆ ಎಂದು ಹಿರಿಯ ಸಾಹಿತಿ,ಲೇಖಕ ಮಹಿಪಾಲರೆಡ್ಡಿ ಮುನ್ನೂರ ಹೇಳಿದರು
ಯಾದಗಿರಿಯ ನಗರದ ಲುಂಬಿನಿ ವನದಲ್ಲಿ ಯಾದಗಿರಿ ಜಿಲ್ಲಾ ನಾಗರೀಕರ ಸಾಂಸ್ಕೃತಿಕ ಪ್ರತಿಷ್ಠಾನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಸುವರ್ಣ ಕರ್ನಾಟಕ 50 ರ ಸಂಭ್ರಮ ಹಾಗೂ ಕನ್ನಡ ರಾಜ್ಯೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ಕನ್ನಡ ನುಡಿ ಸಂಭ್ರಮದ ನಿಮಿತ್ಯ ಸಂಗೀತ ಕಾರ್ಯಕ್ರಮವನ್ನು ಸಸಿಗೆ ನೀರು ಉಣಿಸುವುದರ ಮುಖಾಂತರ ಚಾಲನೆ ನೀಡಿ ಮಾತನಾಡಿದರು.
ಈ ಅಖಂಡ ಕರ್ನಾಟಕವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಎಲ್ಲರೂ ಒಂದಾಗಿ ಒಗ್ಗಟ್ಟು ಪ್ರದರ್ಶನ ನೀಡಬೇಕು,ಕರ್ನಾಟಕದ ಏಕೀಕರಣಕ್ಕಾಗಿ ದುಡಿದ ಮಹನೀರನ್ನು ನಾವು ಸ್ಮರಿಸಲೇಬೇಕು ಹಾಗೂ ಕನ್ನಡ ನಾಡಿನ ಭವ್ಯ ಸಾಂಸ್ಕೃತಿಕ ಪರಂಪರೆ,ನಾಡು,ನುಡಿ ಸಂರಕ್ಷಣೆಯ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಸಿದ್ದರಾಮ ಹೊನಕಲ್ ಹೇಳಿದರು.
ಈ ಸಮಾರಂಭದ ವೇದಿಕೆ ಮೇಲೆ ಕಲ್ಬುರ್ಗಿಯ ಹಿರಿಯ ಪತ್ರಕರ್ತ ಶಿವರಂಜನ್ ಸತ್ಯಂಪೇಟೆ,ಖ್ಯಾತ ಚಿತ್ರ ಕಲಾವಿದ ಮೇಘನಾಥ್ ಅಬ್ರಾಹಿಂ ಬೆಳ್ಳಿ,ಯಾದಗಿರಿ ಜಿಲ್ಲಾ ನಾಗರಿಕರ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಚೆನ್ನಬಸಪ್ಪ ಕೆ.ಎಸ್. ಕವಯತ್ರಿ ಚಂದ್ರಕಲಾ ಗೂಗಲ್, ಗಜಲ್ ಲೇಖಕಿ ಸುವರ್ಣ ರಾಥೋಡ್,ಸೇರಿದಂತೆ ಇತರರು ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಬೂದಯ್ಯ ಹಿರೇಮಠ ಮತ್ತು ತಂಡ ಶಾಸ್ತ್ರೀಯ ಸಂಗೀತ, ಮಲ್ಲಿಕಾರ್ಜುನ್ ಮತ್ತು ತಂಡ ಜಾನಪದ ಸಂಗೀತ,ಗಣೇಶ್ ಕುಮಾರ ಮತ್ತು ತಂಡ ಸುಗಮ ಸಂಗೀತ ಕಾರ್ಯಕ್ರಮಗಳು ಜರುಗಿದವು.