ಕಳಪೆ ಬದು ನಿರ್ಮಾಣ ಆರೋಪ – ಸಂಬಂಧಿತ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಮನವಿ

ಕಳಪೆ ಬದು ನಿರ್ಮಾಣ ಆರೋಪ – ಸಂಬಂಧಿತ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಮನವಿ

ಕಳಪೆ ಬದು ನಿರ್ಮಾಣ ಆರೋಪ – ಸಂಬಂಧಿತ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಮನವಿ

ಯಡ್ರಾಮಿ: ಯಡ್ರಾಮಿ ತಾಲ್ಲೂಕಿನ ಬಿಳವಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ವೇ ನಂ. 60ರಲ್ಲಿ ಜರುಗಿದ ಬದು ನಿರ್ಮಾಣ ಕಾರ್ಯದಲ್ಲಿ ಗಂಭೀರ ಅಕ್ರಮಗಳು ನಡೆದಿರುವ ಬಗ್ಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಹಿಬೂಬ್ ಕೆ. ಚೌದರಿ ಅವರು ತಮ್ಮ ಹೆಸರಿನ ಹೊಲದಲ್ಲಿ (ಸರ್ವೇ ನಂ. 60)ಬದು ನಿರ್ಮಾಣ (ಕೆಲಸ ಸಂಖ್ಯೆ: 1515006016-24-83 / 2025-26 / 1515006016/FI/93393042895326590)ವನ್ನು ಜಮೀನಿನ ಮಾಲಿಕರ ಅನುಮತಿ, ಒಪ್ಪಿಗೆ ಅಥವಾ ಯಾವುದೇ ರೀತಿಯ ಮಾಹಿತಿ ನೀಡದೇ ನಡೆಸಲಾಗಿದೆ ಎಂದು ಆರೋಪಿಸಿದ್ದಾರೆ. “ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ” ಎಂಬ ಗಾದೆಯಂತೆ, ಯಾವುದೇ ದಾಖಲೆಗಳನ್ನೂ ಪಡೆಯದೇ, ಮಾಲಿಕನಿಗೆ ತಿಳಿಯದಂತೆ ಕಾರ್ಯ ಮುಗಿಸಿ ಬಿಲ್‌ವನ್ನೂ ಎತ್ತಿಕೊಂಡಿರುವುದು ಗಂಭೀರ ಅವ್ಯವಸ್ಥೆ ಎಂದು ಅವರು ತಿಳಿಸಿದ್ದಾರೆ.

ಈ ಕುರಿತು ಬಿಳವಾರ ಗ್ರಾಮ ಪಂಚಾಯಿತಿಯ ಸಂಬಂಧಪಟ್ಟ ಪಿಡಿಒ, ಜೇಇ ಹಾಗೂ ಕಂಪ್ಯೂಟರ್ ಅಪರೇಟರ್ ಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಮಹಿಬೂಬ್ ಕೆ. ಚೌದರಿ ಅವರು ಯಡ್ರಾಮಿ ತಾಲ್ಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕಾಧಿಕಾರಿಗೆ ಅಧಿಕೃತವಾಗಿ ಮನವಿ ಸಲ್ಲಿಸಿದ್ದಾರೆ.

ಈ ಅಕ್ರಮದ ವಿರುದ್ಧ ಕಠಿಣ ಕ್ರಮ ಕೈಗೊಂಡು ನ್ಯಾಯ ಒದಗಿಸುವಂತೆ ಅವರು ಬೇಡಿಕೆ ಇಟ್ಟಿದ್ದಾರೆ ಎಂದು ನ್ಯಾಯವಾದಿ ಮಹಿಬೂಬ್ ಕೆ. ಚೌದರಿ ಬಿಳವಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

— ವರದಿ: ಜೇಟ್ಟೆಪ್ಪ ಎಸ್. ಪೂಜಾರಿ