ಅಳ್ಳಳ್ಳಿ ಮಠದಲ್ಲಿ ಕಲರವ ಕವನ ಸಂಕಲನ ಜನಾರ್ಪಣೆ

ಅಳ್ಳಳ್ಳಿ ಮಠದಲ್ಲಿ ಕಲರವ ಕವನ ಸಂಕಲನ ಜನಾರ್ಪಣೆ

ಅಳ್ಳಳ್ಳಿ ಮಠದಲ್ಲಿ ಕಲರವ ಕವನ ಸಂಕಲನ ಜನಾರ್ಪಣೆ 

ಚಿತ್ತಾಪುರ ತಾಲೂಕಿನ ಕರದಾಳ ಗ್ರಾಮದ ಯುವಕವಿ ವಿಶ್ವರಾಧ್ಯ ವಿಶ್ವಕರ್ಮ ಅವರ ಚಚ್ಚಿಲ ಕೃತಿ ಕಲರವ ಕವನ ಸಂಕಲನವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕ ಅಧ್ಯಕ್ಷ ವೀರೇಂದ್ರ ಕುಮಾರ್ ಕೊಲ್ಲೂರ್ ಅವರು  ಜನಾರ್ಪಣೆಗೊಳಿಸಿದರು 

 ಅಳ್ಳಳ್ಳಿಯ ಅಯ್ಯಪ್ಪಯ್ಯ ಮಹಾತ್ಮ ಪೀಠ ಮಠದಲ್ಲಿನಡೆದ ಹಂಪಿ ವಿಶ್ವವಿದ್ಯಾಲಯ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕ ಘಟಕ ಚಿತ್ತಾಪುರ ಹಮ್ಮಿಕೊಂಡ ರಂಗಕಲೆ ಮತ್ತು ಸಂಗೀತ ಕ್ಷೇತ್ರಕ್ಕೆ ಚಿತ್ತಾಪುರ ತಾಲೂಕಿನ ಕೊಡುಗೆ ಎಂಬ ಒಂದು ದಿನದ ವಿಚಾರ ಸಂಕೀರ್ಣದಲ್ಲಿ ಮುಖ್ಯ ಅತಿಥಿಗಳಾಗಿ ಪುಸ್ತಕ ಲೋಕಾರ್ಪಣೆ ಗೊಳಿಸಿದರು.

 ಕಾರ್ಯಕ್ರಮದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ. ಪ ರಮಶಿವಯ್ಯ ಹಾಗೂ ಅಯ್ಯಪ್ಪಯ್ಯ ಮಹಾತ್ಮ ಪೀಠದ ಶ್ರೀಗಳಾದ ನಾಗಪ್ಪಯ್ಯ ಸ್ವಾಮಿಗಳು .ಹಾಗೂ ಶಿರಸಪ್ಪಯ್ಯ ಸ್ವಾಮಿಗಳು. ಶಹಪುರದ ಏಕದಂಡಿ ಮಠದ ಶ್ರೀ ಅಚ್ಚೇಂದ್ರ ಸ್ವಾಮಿಗಳು.ಕನ್ನಡ ವಿಶ್ವವಿದ್ಯಾಲಯದ ನಾಟಕ ವಿಭಾಗದ ಮುಖ್ಯಸ್ಥ ಡಾ. ವೀರೇಶ್ ಬಡಿಗೇರ್.ಸಾಹಿತಿ ನರಸಿಂಗರಾವ್ ಹೇಮನೂರು ಕವಿ ವಿಶ್ವರಾಧ್ಯ ವಿಶ್ವಕರ್ಮ ಇದ್ದರು