ಕಮಲಾಪುರ | ಸಾಹಿತ್ಯದ ನಡಿಗೆ ಗ್ರಾಮದ ಕಡೆಗೆ ವಿಶೇಷ ಅಭಿಯಾನ
ಕಮಲಾಪುರ | ಸಾಹಿತ್ಯದ ನಡಿಗೆ ಗ್ರಾಮದ ಕಡೆಗೆ ವಿಶೇಷ ಅಭಿಯಾನ
ಶುಕ್ರವಾರ ಕಮಲಾಪುರ ತಾಲೂಕಿನ ಮಹಾಗಾಂವ ಕ್ರಾಸ್ ಸಮೀಪದ ಶ್ರೀ ಮಹಾಂತೇಶ್ವರ ಪ್ರೌಢಶಾಲೆಯಲ್ಲಿ ಕಸಾಪ ವಲಯ ಘಟಕ ವತಿಯಿಂದ ಹಮ್ಮಿಕೊಂಡ ಸಾಹಿತ್ಯದ ನಡಿಗೆ ಗ್ರಾಮದ ಕಡೆಗೆ ವಿಶೇಷ ಅಭಿಯಾನದಡಿಯಲ್ಲಿ ಹಮ್ಮಿಕೊಂಡ ಮಕ್ಕಳ ಸಾಹಿತ್ಯ ಸಂಭ್ರಮ ಕಾರ್ಯಕ್ರಮವದ ಉದ್ಘಾಟನಾ ಕಾರ್ಯಕ್ರಮ .
ವೈಜ್ಞಾನಿಕ ತಳಹದಿಯ ಮೇಲೆ ರಚನೆಗೊಂಡಿರುವ ಕನ್ನಡ ಭಾಷೆ ನಮ್ಮೆಲ್ಲರ ಅನ್ನದ ಭಾಷೆಯಾಗಬೇಕು ಕೇವಲ ವರ್ಷಕ್ಕೊಮ್ಮೆ ರಾಜ್ಯೋತ್ಸವ ದಿನದಂದು ಕನ್ನಡದ ಸ್ಮರಣೆ ಮಾಡಿ ಮರೆತು ಬಿಡುವುದು ಒಳ್ಳೆಯದಲ್ಲ ರಾಜ್ಯೋತ್ಸವ ನಿತ್ಯೋತ್ಸವವಾದಾಗ ಮಾತ್ರ ಕನ್ನಡ ಭಾಷೆ ಉಳಿಯಲು ಸಾಧ್ಯವಾಗುತ್ತದೆ ಎಂದು ಬಿಜೆಪಿ ಮುಖಂಡ ಶಿವಕುಮಾರ್ ಪಸಾರ ಹೇಳಿದರು
ಇಂದಿನ ಆಧುನಿಕ ಯುಗದಲ್ಲಿ ಅನ್ಯ ಭಾಷೆಗಳ ಹಾವಳಿಯಿಂದ ಕನ್ನಡ ಭಾಷೆ ಆಪತ್ತು ಎದುರಿಸುತ್ತಿದೆ ಕನ್ನಡ ಉಳಿಸಿ ಬೆಳೆಸುವ ಬೆಳೆಸಲು ಪ್ರತಿಯೊಬ್ಬರೂ ಶ್ರಮಿಸಬೇಕು ನಿತ್ಯವೂ ಕನ್ನಡ ಮಾತನಾಡುವ ಮೂಲಕ ಕನ್ನಡ ಬೆಳೆಸಲು ಶ್ರಮಿಸಬೇಕು ಎಂದರು.
ಸಾಹಿತಿ, ಶಿಕ್ಷಕ ಅಶೋಕ ಕೋಟಿ ಉಪನ್ಯಾಸ ನೀಡಿ ವಿದ್ಯಾರ್ಥಿ ಜೀವನದಲ್ಲಿ ಮಕ್ಕಳು ಕಥೆ ಕವನ ಸಾಹಿತ್ಯ ನಾಟಕ ಅಭಿನಯಗಳ ಕುರಿತು ಆಸಕ್ತಿ ಹೊಂದಬೇಕು , ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವಂತೆ ಇದರಿಂದ ಮಕ್ಕಳಲ್ಲಿ ಸಾಹಿತ್ಯದ ಅಭಿರುಚಿ ಬೆಳೆದು ಭಾವಿ ಜೀವನದಲ್ಲಿ ಒಳ್ಳೆಯ ಸಾಹಿತಿಗಳಾಗಲು ಪ್ರೇರಣೆ ದೊರಕುತ್ತದೆ,
ಮಂಠಾಳ ಶ್ರೀ ಚನ್ನಬಸವ ಸ್ವಾಮೀಜಿಗಳು ಆಶೀರ್ವಚನ ನೀಡುತ್ತಾ ಪ್ರತಿಯೊಬ್ಬರೂ ಕನ್ನಡದ ಕಾರ್ಯಕ್ರಮಗಳಿಗೆ ಸಮಯ ನೀಡಬೇಕು ಕನ್ನಡ ಭಾಷೆ ಉಳಿಕೆಗಾಗಿ ಮಠಮಾನ್ಯಗಳು ಸಹ ಶ್ರಮಿಸುತ್ತಿವೆ , ಆದರೆ ಕನ್ನಡ ಸಾಹಿತ್ಯ ಪರಿಷತ್ತು ನಿರಂತರ ಕಾರ್ಯಕ್ರಮಗಳ ಮೂಲಕ ಕನ್ನಡದ ಕುರಿತು ಜಾಗೃತಿ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದರು
ಕಮಲಾಪುರ್ ಕಸಾಪ ತಾಲೂಕು ಅಧ್ಯಕ್ಷ ಸುರೇಶ ಲೇಂಗಟಿ ಆರ್ ಐ ಮಂಜುನಾಥ ಬಿರಾದರ, ಶಿ ಸಿ ಆರ್ ಪಿ ರಾಗಿಣಿ, ಕಸಾಪ ವಲಯ ಅಧ್ಯಕ್ಷ ಅಂಬರಾಯ ಮಡ್ಡೆ ಮಾತನಾಡಿದರು.
ಮಹಾಗಾಂವ ಜೆಸ್ಕಾಂ ಕಚೇರಿಯ ಮಾರ್ಗದಾಳುಗಳಾದ ಮತಿವಂತ್ ಹಾಗೂ ಮಲ್ಲಯ್ಯ ಸ್ವಾಮಿ ಅವರನ್ನು ಸತ್ಕರಿಸಲಾಯಿತು.
ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ಕಳ್ಳಿಮಠದ ಶ್ರೀ ವಿರೂಪಾಕ್ಷ ದೇವರು, ಶಿವಯೋಗಿ ಕಳ್ಳಿಮಠ, ಶೋಭಾ ಕಳ್ಳಿಮಠ,
ಶ್ರೀ ಮಹಾಂತೇಶ್ವರ ಪ್ರೌಢಶಾಲೆ ಮುಖ್ಯ ಗುರು ರೇವಣಸಿದ್ದಪ್ಪ ನಿಂಬಾಜಿ, ನೀಲಮ್ಮ, ದಿಪಿಕಾ ಇತರರು ಇದ್ದರು
ಮುರುಘರಾಜೇಂದ್ರ ಹಿರೇಮಠ ನಿರೂಪಿಸಿದರು.