ಸಿರಿ ಸ್ನೇಹ ಬಳಗದಿಂದ ಮಹಿಳಾ ದಿನಾಚರಣೆ- ಸನ್ಮಾನ

ಸಿರಿ ಸ್ನೇಹ ಬಳಗದಿಂದ ಮಹಿಳಾ ದಿನಾಚರಣೆ- ಸನ್ಮಾನ

ಸಿರಿ ಸ್ನೇಹ ಬಳಗದಿಂದ ಮಹಿಳಾ ದಿನಾಚರಣೆ- ಸನ್ಮಾನ

ಕಲಬುರಗಿ: ನಗರದ ಸಿದ್ಧಾರೂಢ ಕಾಲೋನಿಯ ಸಿರಿ ಸ್ನೇಹ ಬಳಗವು ಬಿದರಿಯವರ ಮನೆ ಆವರಣದಲ್ಲಿ ದಿನಾಂಕ:೧೬-೦೩-೨೦೨೫ ರಂದು ರವಿವಾರ ಬೆಳಗ್ಗೆ ೧೦- 

೩೦ ಗಂಟೆಗೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿದೆ. ಮುಖ್ಯ ಅತಿಥಿಗಳಾಗಿ ಸಾಹಿತ್ಯ ಶ್ರೀ ಪ್ರಶಸ್ತಿ ಪುರಸ್ಕೃತ ಸಾಹಿತಿ, ಸಿಯುಕೆ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಶಿವಗಂಗಾ ರುಮ್ಮಾ ಅಗಮಿಸುವರು.ಸಿರಿ ಸ್ನೇಹ ಬಳಗದ ಅಧ್ಯಕ್ಷೆ ಡಾ.ಚಂದ್ರಕಲಾ ಬಿದರಿ ಅಧ್ಯಕ್ಷತೆಯಲ್ಲಿ ಜರುಗುವುದು. ಸನ್ಮಾನಿತರಾಗಿ ಚನ್ನಮ್ಮ ಪ್ರಶಸ್ತಿ ಪುರಸ್ಕೃತ ಡಾ.ವಿಶಾಲಾ ಕ್ಷಿ ಕರಡ್ಡಿ,ಕೇಂದ್ರ ಸಾಹಿತ್ಯ ಅಕಾಡೆಮಿ ಕನ್ನಡ ಸಲಹಾ ಸಮಿತಿ ಸದಸ್ಯೆ ಡಾ.ಜಯದೇವಿ ಗಾಯಕವಾಡ,ಸಾಹಿತ್ಯ ಶ್ರೀ ಪ್ರಶಸ್ತಿ ಪುರಸ್ಕೃತೆ ಡಾ.ಸಾರಿಕಾದೇವಿ ಕಾಳಗಿ,ಚನ್ನಮ್ಮ ಸಾಹಿತ್ಯ ಪ್ರಶಸ್ತಿ ಪುರಸ್ಕೃತೆ ಡಾ.ಸಂಗೀತಾ ಹಿರೇಮಠ ಅವರನ್ನು ಸನ್ಮಾನಿಸಲಾಗುವುದು ಹೆಚ್ಚಿನ‌ ಸಂಖ್ಯೆಯಲ್ಲಿ ಸಾಹಿತ್ಯಾಸಕ್ತರು,ಮಹಿಳಾ ಅಭಿಮಾನಿಗಳು ಆಗಮಿಸಲು ಸಿರಿ ಸ್ನೇಹ ಬಳಗ ಮನವಿ ಮಾಡಿದೆ.