ಸಾಹಿತಿ-ಸಾಂಸ್ಕೃತಿಕ ವಲಯ ಒಂದಾಗಿಸಿದ “ವಿಠ್ಠಲ” ಸಂಸ್ಮರಣ ಸಮಾರಂಭ
ಸಾಹಿತಿ-ಸಾಂಸ್ಕೃತಿಕ ವಲಯ ಒಂದಾಗಿಸಿದ “ವಿಠ್ಠಲ” ಸಂಸ್ಮರಣ ಸಮಾರಂಭ ಜರುಗಿತು
ಬೆಂಗಳೂರು: ಬಸವನಗುಡಿ ನಗರದ ಡಾ. ಸಿ. ಅಶ್ವಥ್ ಕಲಾಭವನದಲ್ಲಿ ವಿಠ್ಠಲ ಪ್ರತಿಷ್ಠಾನ ಕಲಬುರಗಿ, ಶಿರಪುರ ಪ್ರಕಾಶನ ಹಾಗೂ ಸ್ವರ ಫೌಂಡೇಶನ್ ಸಂಯುಕ್ತವಾಗಿ ಆಯೋಜಿಸಿದ್ದ “ವಿಠಲ” ಸಂಸ್ಮರಣ ಗ್ರಂಥ ಲೋಕಾರ್ಪಣೆ ಮತ್ತು ವಿಠ್ಠಲ ಪ್ರಶಸ್ತಿ ಪ್ರದಾನ ಸಮಾರಂಭ ಭಾನುವಾರ ಯಶಸ್ವಿಯಾಗಿ ನೆರವೇರಿತು.
ಕಾರ್ಯಕ್ರಮದಲ್ಲಿ ಶ್ರೀಪತಿ ಕುಲಕರ್ಣಿ ಅವರು ಅತಿಥಿಗಳನ್ನು ಸ್ವಾಗತಿಸಿ ಸಮಾರಂಭಕ್ಕೆ ಚಾಲನೆ ನೀಡಿದರು.
ಸಾಹಿತಿ ಸ್ವಾಮಿರಾವ ಕುಲಕರ್ಣಿ ಅವರು ಪ್ರಾಸ್ತಾವಿಕ ಭಾಷಣ ಮಾಡುತ್ತಾ, “ಮಾನವನ ಬದುಕಿಗೆ ಸಾಹಿತ್ಯವೇ ಮೂಲಾಧಾರ. ಮನುಷ್ಯನ ಜೀವನ ಸಾರ್ಥಕವಾಗಬೇಕಾದರೆ ಸಮಾಜ ಸೇವೆ, ಸಹಾನುಭೂತಿ ಮತ್ತು ನಿಷ್ಠೆ ಅವಶ್ಯಕ” ಎಂದು ಹೇಳಿದರು. ಬಡತನದಲ್ಲಿ ಹುಟ್ಟಿ, ಲಂಚಕ್ಕೆ ಆಸೆಪಡದೆ ತನ್ನ ಹುದ್ದೆಯ ಕರ್ತವ್ಯವನ್ನು ನಿಷ್ಠೆಯಿಂದ ನಿರ್ವಹಿಸಿದ ವಿಠಲರ ಜೀವನವೇ ಸಮಾಜಕ್ಕೆ ಸಂದೇಶವಿದೆ ಎಂದು ಅವರು ಸ್ಮರಿಸಿದರು.
ವಿದ್ಯಾ ವಾಚಸ್ಪತಿ ಡಾ. ಅರಳು ಮಲ್ಲಿಗೆ ಪಾರ್ಥಸಾರಥಿ ಅವರು “ವಿಠ್ಠಲ” ಸಂಸ್ಮರಣ ಗ್ರಂಥವನ್ನು ಲೋಕಾರ್ಪಣೆ ಮಾಡಿ ಮಾತನಾಡಿ,
“ವಿವೇಕ, ವಿನಯ ಮತ್ತು ಸಂಸ್ಕಾರ ಮನುಷ್ಯನ ಬದುಕನ್ನು ಸಾರ್ಥಕವಾಗಿಸುವ ಮೂರು ಮಹತ್ವದ ಮೌಲ್ಯಗಳು. ವಿಠಲರಂಥ ಸಾಹಿತ್ಯಾಭಿಮಾನಿಗಳು ಕನ್ನಡದ ಬೆಳವಣಿಗೆಗೆ ಶ್ರಮಿಸಿದವರು ಅಪರೂಪ”ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಡಾ. ಮುದ್ದುಮೋಹನ ಅವರು ವಿಠ್ಠಲ ಪ್ರಶಸ್ತಿಯನ್ನು ಪ್ರದಾನ ಮಾಡಿದರು.
ಸಂಶೋಧನಾ ವಿಜ್ಞಾನಿ ಡಾ. ಎಸ್.ಎಂ. ಓಂಕಾರ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ವಿಠಲರ ಸಾಹಿತ್ಯ, ಸೇವೆ ಮತ್ತು ವ್ಯಕ್ತಿತ್ವವನ್ನು ಸ್ಮರಿಸಿದರು.
ಕಾರ್ಯಕ್ರಮಕ್ಕೆ ವಿಠ್ಠಲ ಪ್ರತಿಷ್ಠಾನದ ಅಧ್ಯಕ್ಷೆ ಶ್ರೀಮತಿ ಚಿತ್ರಾ ಕುಲಕರ್ಣಿ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
ಸಮಾರಂಭವು ಸಾಹಿತ್ಯಾಭಿಮಾನಿಗಳ ಮಹತ್ತರ ಸಾನ್ನಿಧ್ಯದಲ್ಲಿ ನಿಷ್ಟೆ, ಮೌಲ್ಯಗಳು ಮತ್ತು ಸಾಹಿತ್ಯ ಸೇವೆಯ ಮಹತ್ವವನ್ನು ನೆನಪಿಸುವ ವೇದಿಕೆಯಾಗಿತ್ತು.
ಪತ್ರಕರ್ತ ಶರಣಗೌಡ ಪಾಟೀಲ್ ಪಾಳಾ, ಡಾ ಬಸವರಾಜ ಕೊನೇಕ, ಸಾಹಿತಿ ಬಸವರಾಜ ಸಬರದ ಉಪಸ್ಥಿತರಿದ್ದರು.
ಸ್ವಾಮಿರಾವ ಕುಲಕರ್ಣಿ ಅವರಿಗೆ ಗೌರವಿಸಿ ಸನ್ಮಾನಿಸಿದ ಚಿತ್ರ
ವಿಠಲ ಸಂಸ್ಮರಣ ಗ್ರಂಥ ಲೋಕಾರ್ಪಣೆ
