ಕಮಲಾಪುರ| ಕಸಾಪಕ| ಸಮ್ಮೇಳನ ಸರ್ವಾಧ್ಯಕ್ಷರಾದ ಡಾ.ಶಿವರಾಜ ಶಾಸ್ತ್ರಿಗೆ ಅಧಿಕೃತ ಅಹ್ವಾನ

ಕಮಲಾಪುರ| ಕಸಾಪಕ| ಸಮ್ಮೇಳನ ಸರ್ವಾಧ್ಯಕ್ಷರಾದ ಡಾ.ಶಿವರಾಜ ಶಾಸ್ತ್ರಿಗೆ ಅಧಿಕೃತ ಅಹ್ವಾನ

ಕಮಲಾಪುರ| ಕಸಾಪಕ| ಸಮ್ಮೇಳನ ಸರ್ವಾಧ್ಯಕ್ಷರಾದ ಡಾ.ಶಿವರಾಜ ಶಾಸ್ತ್ರಿಗೆ ಅಧಿಕೃತ ಅಹ್ವಾನ 

ಕಲಬುರಗಿ/ಕಮಲಾಪುರ : ಜಗತ್ತಿನ ಅತ್ಯಂತ ಶ್ರೀಮಂತ ಭಾಷೆ ಕನ್ನಡ, ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ, ಪ್ರತಿಯೊಬ್ಬರ ಅಂತರಂಗದ ಭಾಷೆಯಾಗಿದೆ, ಕನ್ನಡ ಭಾಷೆ ಉಳಿಸುವ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ನಿರಂತರ ಸಮ್ಮೇಳನಗಳನ್ನು ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ ಎಂದು ಮಾತೋಶ್ರೀ ಪೂಜ್ಯ ಡಾ.ದಾಕ್ಷಾಯಣಿ ಅವ್ವ ಅವರು‌ ನುಡಿದರು.

ಮಂಗಳವಾರ ಕಲಬುರಗಿ ನಗರದ ಶ್ರೀ ಶರಣಬಸವೇಶ್ವರ ಮಹಾಮನೆಯಲ್ಲಿ ಶ್ರೀ ಶರಣಬಸವೇಶ್ವರ ಸಂಸ್ಥಾನದ 8 ನೇ ಪೀಠಾಧಿಪತಿಗಳಾದ ಸಮ್ಮುಖದಲ್ಲಿ ಸಮ್ಮೇಳನದ ಸರ್ವಾಧ್ಯಕ್ಷರಾದ ಡಾ.ಶಿವರಾಜ ಶಾಸ್ತ್ರಿ ಅವರಿಗೆ ಅಧಿಕೃತ ಆಹ್ವಾನ ನೀಡಲಾಯಿತು. 

  ಶ್ರೀ ಶರಣ ಬಸವೇಶ್ವರ ನಿಧ್ಯವರ್ಧಕ ಸಂಘದ ಚೇರಪರ್ಸನ್ ಪೂಜ್ಯ ಮಾತೋಶ್ರೀ ಡಾ ದಾಕ್ಷಾಯಣಿ ಎಸ್ ಅಪ್ಪ ಅವರು ಮಾತನಾಡುತ್ತಾ ನವೆಂಬರ್ ೧೭ ರಂದು ಸೊಂ ಗ್ರಾಮದ ದತ್ತ ದಿಗಂಬರ ಶ್ರೀ ಮಾಣಿಕೇಶ್ವರ ದೇವಸ್ಥಾನದಲ್ಲಿ ಜರುಗಲಿರುವ ಕಮಲಾಪುರ ತಾಲೂಕಿನಲ್ಲಿ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದ್ದು ಕಮಲಾಪುರ ಪ್ರಥಮ ಸಮ್ಮೇಳನಕ್ಕೆ ನಮ್ಮ ಸಂಸ್ಥೆಯ ಹಿರಿಯ ಪ್ರಾಧ್ಯಾಪಕರಾಗಿದ ಡಾ.ಶಿವರಾಜ ಶಾಸ್ತ್ರೀ ಅವರಿಗೆ ಸವಾ೯ಧ್ಯಕ್ಷ ಸ್ಥಾನ ನೀಡಿದ್ದು ಸಮ್ಮೇಳನಕ್ಕೆ ಹೊಸ ಕಳೆ ಬಂದಿದೆ, ದಿವ್ಯಾಂಗ ಚೇತನರನ್ನು ಸವಾ೯ಧ್ಯಕ್ಷರನ್ನಾಗಿ ಮಾಡುವ ಮೂಲಕ ಕನ್ನಡ ಸಾಹಿತ್ಯ ಪರಿಷತ್ತು ಅವಕಾಶ ವಂಚಿತರಿಗೆ ಅವಕಾಶ ನೀಡಿ ಮುನ್ನೆಲೆಗೆ ತರುವತ್ತ ಧಿಟ್ಟ ಹೆಜ್ಜೆ ಇಟ್ಟದೆ, ಕಮಲಾಪುರ ಪ್ರಥಮ ಸಮ್ಮೆಳನ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.

ಕಲಬುರಗಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ವಿಜಯ ಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿದರು , ಈ ಸಂದರ್ಭದಲ್ಲಿ ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದಶಿ೯ ಬಸವರಾಜ ದೇಶಮುಖ, ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ, ಕೋಶಾಧ್ಯಕ್ಷ ಶರಣರಾಜ ಛಪ್ಪರಬಂಧಿ, ಹಿರಿಯ ಸಾಹಿತಿ ರವೀಂದ್ರ ಭಂಟನಳ್ಳಿ, ಆಳಂದ ಕಸಾಪ ತಾಲೂಕು ಅಧ್ಯಕ್ಷ ಹಣಮಂತ ಶೇರಿ, ವಿಕೆ ಸಲಗರ ವಲಯ ಅಧ್ಯಕ್ಷ ಬಂಡಪ್ಪ ಚಿಲಿ, ಸೊಂತ ವಲಯ ಅಧ್ಯಕ್ಷ ಅನಂತಕುಮಾರ ಪಾಟೀಲ್, ತಾಲೂಕು ಪದಾಧಿಕಾರಿಗಳಾದ ಸಂಜಯಕುಮಾರ ನಾಟೀಕರ, ಮಲ್ಲಿನಾಥ ಅಂಬಲಗಿ‌ ಇತರರು ಉಪಸ್ಥಿತರಿದ್ದರು