ಪುರಸಭೆ ಅಧ್ಯಕ್ಷ ಆನಂದಕುಮಾರ ಟೈಗರ್ ಅವರು ಪೌರ ಕಾರ್ಮಿಕರಿಗೆ ಉಚಿತ ಹೊದಿಕೆಗಳು ವಿತರಿಸಿದರು.
ಸಚಿವ ಪ್ರಿಯಾಂಕ್ ಖರ್ಗೆ ಹುಟ್ಟುಹಬ್ಬ ಆಚರಿಸಿದ ಚಿಂಚೋಳಿ ಬ್ಲಾಕ್ ಕಾಂಗ್ರಸ್ | ಉಚಿತ ನೇತ್ರ ತಪಾಸಣೆ, ಶಸ್ತ್ರ ಶಿಬಿರ ಆಯೋಜನೆ
ಸಚಿವ ಪ್ರಿಯಾಂಕ್ ಖರ್ಗೆ ರಾಜ್ಯದ ಜನಪ್ರೀಯ ಮಾದರಿ ನಾಯಕ : ಸುಭಾಷ ರಾಠೋಡ
ಚಿಂಚೋಳಿ :ಬ್ಲಾಕ್ ಕಾಂಗ್ರೆಸ್ ಸಮಿತಿ ಚಿಂಚೋಳಿ -ಕಾಳಗಿ -ಕೊಡ್ಲಿ ವತಿಯಿಂದ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಜನ್ಮ ದಿನದ ಪ್ರಯುಕ್ತ ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸೆ ಶಿಬಿರ ಕಾರ್ಯಕ್ರಮ ಪಟ್ಟಣದ ವೀರೇಂದ್ರ ಪಾಟೀಲ್ ಪಬ್ಲಿಕ್ ಶಾಲೆಯ ಜಾಗೀರದಾರ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೆಪಿಸಿಸಿ ಉಪಾಧ್ಯಕ್ಷ ಸುಭಾಷ ರಾಠೋಡ್, ಚಿಕ್ಕ ವಯಸ್ಸಿನಲ್ಲಿಯೇ ಮಾದರಿ ರಾಜಕಾರಿಯಾಗಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಜನಪ್ರಿಯ ನಾಯಕರಾಗಿದ್ದಾರೆ.
ಪ್ರವಾಸೋದ್ಯಮ, ಸಮಾಜ ಕಲ್ಯಾಣ ಮತ್ತು ಪ್ರಸ್ತುತ ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್, ಐಟಿಬಿಟಿ ಸಚಿವರಾಗಿ ರಾಜ್ಯದ ಜನರಿಗೆ ಉತ್ತಮ ಸೇವೆಯನ್ನು ನೀಡುತ್ತಿದ್ದಾರೆ. ಪ್ರಿಯಾಂಕ್ ಖರ್ಗೆ ಅವರು ದೇಶದ 140 ಕೋಟಿ ಜನ ಒಂದಾಗಿ ಬಾಳಬೇಕೆಂಬ ಸಿದ್ದಾಂತದ ಮೇಲೆ ಮಹಾತ್ಮ ಗಾಂಧಿ, ಜವಾಹಾರಲಾಲ್ ನೆಹರು, ಸರ್ದಾರ ವಲ್ಲೆಭಾಯಿ ಪಟೇಲ, ಬಾಬುಜಗಜೀವನ ರಾಂ, ಡಾ. ಬಿ.ಆರ್. ಅಂಬೇಡ್ಕರ್ , ಇಂದ್ರಗಾಂಧಿ, ರಾಜೀವ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರು ನಡೆದುಕೊಂಡು ಬಂದ ಸಿದ್ದಾಂತದ ಮೇಲೆ ನಡೆಯುತ್ತಿದ್ದಾರೆ.
ಪ್ರಿಯಾಂಕ್ ಖರ್ಗೆ ಅವರು ಆರ್.ಎಸ್.ಎಸ್, ಬಿಜೆಪಿ. ಜೆಡಿಎಸ್ ಪಕ್ಷದ ಸಂಘಟನೆಗಳ ವಿರೋಧಿ ಅಲ್ಲ. ರಾಜಕೀಯ ವೈಚಾರಿಕತೆಗಳ ಬಗ್ಗೆ ವಿರೋಧಿಯಾಗಿದ್ದಾರೆ. ದೇಶದ ಸಂವಿಧಾನಕ್ಕೆ ಎಲ್ಲೂರು ತಲೆ ಬಾಗಬೇಕೆಂಬುವುದರ ಹೋರಾಟ ಪ್ರಿಯಾಂಕ್ ಖರ್ಗೆ ಅವರದಾಗಿದೆ. ಆ ಹೋರಾಟಕ್ಕೆ ಎಲ್ಲರೂ ಬೆಂಬಲ ಸೂಚಿಸುತ್ತಿದ್ದಾರೆ. ದೇಶದ ಸಂಘಟನೆಗಳ ಬಗ್ಗೆ ಸ್ಪಷ್ಟತೆ ಪ್ರಿಯಾಂಕ್ ಖರ್ಗೆ ಅವರಿಗೆ ಇದೆ ಎಂದರು.
ಬಳಿಕ ಕೇಕ್ ಕತ್ತರಿಸಿ ಪ್ರಿಯಾಂಕ್ ಖರ್ಗೆ ಅವರು ಹುಟ್ಟುಹಬ್ಬ ಆಚರಿಸಿ, ದೇಶದ ಸಂವಿಧಾನ ಪಠಿಸಿ ಪ್ರಮಾಣಿಕರಿಸಿದರು.
ಪುರಸಭೆ ಅಧ್ಯಕ್ಷ ಆನಂದಕುಮಾರ ಟೈಗರ್ ಅವರು ಪೌರ ಕಾರ್ಮಿಕರಿಗೆ ಉಚಿತ ಹೊದಿಕೆಗಳು ವಿತರಿಸಿದರು.
ಚಿಂಚೋಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಮಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಪ್ರಗತಿಪರ ರೈತ ಮುಖಂಡ ಬಾಬುರಾವ ಪಾಟೀಲ್, ಧೂಳಪ್ಪ ಹೊಡೆಬೀರನಳ್ಳಿ, ಆನಂದಕುಮಾರ ಟೈಗರ್, ,ವಕ್ತಾರ ಶರಣು ಪಾಟೀಲ್ ಮೋತಕಪಳ್ಳಿ, ಅಬ್ದುಲ್ ಬಾಶೀದ್ , ನಾಗೇಶ ಗುಣಾಜಿ, ಲಕ್ಷ್ಮಣ ಆವಂಟಿ, ಗೋಪಾಲ ಗಾರಂಪಳ್ಳಿ ಅಅನಿಲಕುಮಾರ ಜಮಾದಾರ ಹುಡುದಳ್ಳಿ, ಪ್ರವೀಣ ಟಿ ಟಿ, ಹಾದಿ ಚೇರಮೆನ್, ನರಸಿಂಹಲು ಕುಂಬಾರ, ಆರ್ ಗಣಪತರಾವ, ಸೈಯದ್ ಶಬೀರ್, ರಾಮಶೆಟ್ಟಿ ಪವಾರ, ತುಕರಾಮ ಪವಾರ, ಜನಾರ್ಧನ್ ಪಾಟೀಲ್, ಅವರು ಉಪಸ್ಥಿತರಿದ್ದರು.
