ಕಲಬುರ್ಗಿಯಲ್ಲಿ ಸಿಎಂ ಇಬ್ರಾಹಿಂ ನೇತೃತ್ವದಲ್ಲಿ ಹೊಸ ಪ್ರಾದೇಶಿಕ ಪಕ್ಷ ಉದಯಕ್ಕೆ ನಾಂದಿ

ಕಲಬುರ್ಗಿಯಲ್ಲಿ ಸಿಎಂ ಇಬ್ರಾಹಿಂ ನೇತೃತ್ವದಲ್ಲಿ ಹೊಸ ಪ್ರಾದೇಶಿಕ ಪಕ್ಷ ಉದಯಕ್ಕೆ ನಾಂದಿ

ಕಲಬುರ್ಗಿಯಲ್ಲಿ ಸಿಎಂ ಇಬ್ರಾಹಿಂ ನೇತೃತ್ವದಲ್ಲಿ ಹೊಸ ಪ್ರಾದೇಶಿಕ ಪಕ್ಷ ಉದಯಕ್ಕೆ ನಾಂದಿ 

ಕಲಬುರಗಿ : ಕಲ್ಯಾಣ ಕರ್ನಾಟಕದ ಕೇಂದ್ರ ಸ್ಥಾನವಾದ ಕಲಬುರ್ಗಿಯಲ್ಲಿ, ನವ ಕರ್ನಾಟಕ ನಿರ್ಮಾಣ ಆಂದೋಲನ, ಸಿಎಂ ಇಬ್ರಾಹಿಂ ಅವರ ನೇತೃತ್ವದಲ್ಲಿ ಹೊಸ ಪ್ರಾದೇಶಿಕ ರಾಜಕೀಯ ಪಕ್ಷ ಉದಯಿಸುವ ಸೂಚನೆ ಇಂದು ಲಭಿಸಿದೆ. ಈ ಹಿನ್ನೆಲೆ ನಗರದಲ್ಲಿ ಇಂದು ಆಯೋಜಿಸಲಾದ ಸಮಾವೇಶದಲ್ಲಿ ಮಾತನಾಡಿದ ಸಿಎಂ ಇಬ್ರಾಹಿಂ ಅವರು, ಕೆಲವೇ ದಿನಗಳಲ್ಲಿ ಪಕ್ಷದ ಹೆಸರನ್ನು ಅಧಿಕೃತವಾಗಿ ಘೋಷಿಸಲಾಗುವುದೆಂದು ತಿಳಿಸಿದರು.

ರೈತರು, ದಲಿತರು, ಮುಸ್ಲಿಮರು, ಕನ್ನಡಪರ ಸಂಘಟನೆಗಳು, ಕಾರ್ಮಿಕರು, ಮಹಿಳಾ ಹಾಗೂ ಯುವಜನ ಹೋರಾಟಗಾರರನ್ನು ಒಂದೇ ವೇದಿಕೆಗೆ ತರಿಸಿ, ರಾಜ್ಯದ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಗಟ್ಟಿಯಾದ ಪ್ರಾದೇಶಿಕ ಪಕ್ಷವನ್ನು ಕಟ್ಟುವ ಉದ್ದೇಶದಿಂದ ಈ ಆಂದೋಲನ ಆರಂಭಿಸಲಾಗಿದೆ ಎಂದು ಅವರು ಹೇಳಿದರು.

ರಾಜ್ಯದಲ್ಲಿ ವ್ಯಾಪಕವಾಗಿ ನಡೆಯುತ್ತಿರುವ ಭ್ರಷ್ಟಾಚಾರ, ಧರ್ಮಗಳ ನಡುವೆ ಕಲಹ ಹುಟ್ಟುಹಾಕುವ ರಾಜಕೀಯ, ನಿರುದ್ಯೋಗ ಸಮಸ್ಯೆ, ಉತ್ತರ ಕರ್ನಾಟಕದ ಜನರ ಬಗ್ಗೆ ತೋರಲಾಗುತ್ತಿರುವ ಮಲತಾಯಿ ಧೋರಣೆ, ಪ್ರತ್ಯೇಕ ರಾಜ್ಯದ ಕೂಗು ಸೇರಿದಂತೆ ಅನೇಕ ಜನಪರ ಸಮಸ್ಯೆಗಳ ಬಗ್ಗೆ ಚರ್ಚಿಸಿ, ಈ ಭಾಗದ ಜನರ ಹಿತಕ್ಕಾಗಿ ಶ್ರಮಿಸುವ ನಿಟ್ಟಿನಲ್ಲಿ ಹೊಸ ಪಕ್ಷವನ್ನು ಕಟ್ಟಲಾಗುತ್ತಿದೆ ಎಂದು ಸಿಎಂ ಇಬ್ರಾಹಿಂ ಹೇಳಿದರು.

ಈ ಸಮಾವೇಶದಲ್ಲಿ ಕೆ. ವಾಸು, ಮೊಹಮ್ಮದ್ ಯುನೂಸ್ ಖಾನ್, ಕೆಟಿಸಿ ಸೇರಿದಂತೆ ಪ್ರಮುಖ ಕಾರ್ಯಕರ್ತರು ವೇದಿಕೆ ಮೇಲೆ ಉಪಸ್ಥಿತರಿದ್ದರು.