ಕಲಬುರಗಿ: ಪ್ರಿಯಾಂಕ್ ಖರ್ಗೆ ಹುಟ್ಟುಹಬ್ಬದ ಅಂಗವಾಗಿ ಉಚಿತ ಬೇಸಿಕ್ ಕಂಪ್ಯೂಟರ್ ತರಬೇತಿ ಚಾಲನೆ

ಕಲಬುರಗಿ: ಪ್ರಿಯಾಂಕ್ ಖರ್ಗೆ ಹುಟ್ಟುಹಬ್ಬದ ಅಂಗವಾಗಿ ಉಚಿತ ಬೇಸಿಕ್ ಕಂಪ್ಯೂಟರ್ ತರಬೇತಿ ಚಾಲನೆ

ಕಲಬುರಗಿ: ಪ್ರಿಯಾಂಕ್ ಖರ್ಗೆ ಹುಟ್ಟುಹಬ್ಬದ ಅಂಗವಾಗಿ ಉಚಿತ ಬೇಸಿಕ್ ಕಂಪ್ಯೂಟರ್ ತರಬೇತಿ ಚಾಲನೆ

ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರು, ಐಟಿ & ಬಿಟಿ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವರಾದ ಪ್ರಿಯಾಂಕ್ ಖರ್ಗೆ ಅವರ ಜನ್ಮದಿನವನ್ನು ಅಂಗವಾಗಿ ಇಂದು ನಗರದ ರೆಡ್ಡಿಸ್ ಇನ್ಸಟ್ಯೂಟ್ ಕಂಪ್ಯೂಟರ್ ತರಬೇತಿ ಕೇಂದ್ರ ಹಾಗೂ ಶ್ರೀ ಮಲ್ಲಿಕಾರ್ಜುನ ಖರ್ಗೆ ಅಭಿಮಾನಿಗಳ ಸಂಘ ಜಂಟಿಯಾಗಿ ಯುವಕ–ಯುವತಿಯರಿಗಾಗಿ ಉಚಿತ ಬೇಸಿಕ್ ಕಂಪ್ಯೂಟರ್ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಕಾರ್ಯಕ್ರಮವನ್ನು ಶಾಸಕರಾದ ಅಲ್ಲಂಪ್ರಭು ಪಾಟೀಲ,ವಿಧಾನ ಪರಿಷತ್ ಸದಸ್ಯ ಹಾಗೂ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ,ಸಂಸ್ಥೆಯ ಅಧ್ಯಕ್ಷ ಶಾಂತರೆಡ್ಡಿ ಪೇಟಶಿರೂರ ಅವರು ಉದ್ಘಾಟಿಸಿದರು.

ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಂಪ್ರಭು ಪಾಟೀಲ ಅವರು,

“ಪ್ರಿಯಾಂಕ್ ಖರ್ಗೆ ಅವರು ಹೋರಾಟದ ಬದುಕಿನಿಂದ ರಾಜಕೀಯಕ್ಕೆ ಬಂದವರು. ಕ್ಷೇತ್ರದ ಅಭಿವೃದ್ಧಿಗಾಗಿ ಅವರು ನಡೆಸಿದ ಕಾರ್ಯಗಳು ಶ್ಲಾಘನೀಯ. ಇಂದು ಯುವಕರಿಗಾಗಿ ಆಯೋಜಿಸಿರುವ ಉಚಿತ ಕಾಂಪ್ಯೂಟರ್ ತರಬೇತಿ ಶ್ಲಾಘನೀಯ ಕಾರ್ಯ,” ಎಂದು ಪ್ರಶಂಸಿಸಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ವಿಧಾನ ಪರಿಷತ್ ಸದಸ್ಯ ಜಗದೇವ ಗುತ್ತೇದಾರ ಅವರು ಮಾತನಾಡಿ,

“ಜಿಲ್ಲೆಗೆ ಉಸ್ತುವಾರಿ ಸಚಿವರಾದ ನಂತರ ಪ್ರಿಯಾಂಕ್ ಖರ್ಗೆ ಅವರು ಅನೇಕ ಅಭಿವೃದ್ಧಿ ಯೋಜನೆಗಳಿಗೆ ಚೈತನ್ಯ ತುಂಬಿದ್ದಾರೆ. ಕಳೆದ 15 ವರ್ಷಗಳಿಂದ ಮಲ್ಲಿಕಾರ್ಜುನ ಖರ್ಗೆ ಅಭಿಮಾನಿಗಳ ಸಂಘವು ಉಚಿತ ಬ್ಯಾಗ್–ಪುಸ್ತಕ ಕಿಟ್‌ಗಳು, ಕುಶಾಗ್ರಮತಿ ಖರ್ಗೆ ಪ್ರಶಸ್ತಿ ಮತ್ತು ಕಂಪ್ಯೂಟರ್ ತರಬೇತಿಗಳ ಮೂಲಕ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸುತ್ತಿರುವುದು ಮಾದರಿಯಾಗಿದೆ,” ಎಂದು ತಿಳಿಸಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಂತರೆಡ್ಡಿ ಪೇಟಶಿರೂರ ಅವರು,

“ಪ್ರಿಯಾಂಕ್ ಖರ್ಗೆ ಅವರು ಸಾವಿರಾರು ಯುವಕರಿಗೆ ದಾರಿದೀಪವಾಗಿದ್ದಾರೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಆರೋಗ್ಯ ಹಾಗೂ ರಾಜಕೀಯ ಪ್ರಗತಿ ಲಭ್ಯವಾಗಲಿ,” ಎಂದು ಶುಭ ಹಾರೈಸಿದರು.

ಪತ್ರಕರ್ತ ರಾಜು ದೇಶಮುಖ,ಉದ್ಯಮಿ ಲಕ್ಷ್ಮೀನಾರಾಯಣ ಮನೋಕರ,ಯುವ ಕಾಂಗ್ರೆಸ್ ಮುಖಂಡ ಸಿದ್ರಾಮ ಗೋದಿ ಸೇರಿದಂತೆ ಅನೇಕ ಗಣ್ಯರು ವೇದಿಕೆಯನ್ನು ಅಲಂಕರಿಸಿದರು.

ಕಾರ್ಯಕ್ರಮದಲ್ಲಿ ದಯಾನಂದ ಮನೋಕರ, ಮಂಜುನಾಥ ಅಣಕಲ್, ಸಿದ್ರಾಮರೆಡ್ಡಿ, ಪ್ರಶಾಂತ ರೆಡ್ಡಿ, ಲಿಂಗರಾಜ ಭಾವಿಕಟ್ಟಿ, ರಾಧಾಕೃಷ್ಣ, ಜಯವರ್ಧನ, ಜಗದೀಶ ಪಾಟೀಲ್, ಆನಂದ ಹೋಳಕುಂದಿ, ನಾಗರಾಜ, ಕಲ್ಯಾಣರಾವ, ಆಕಾಶ, ಚಂದ್ರಕಾಂತ ಸೇರಿದಂತೆ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವೇದಿಕೆಯ ಮೇಲಿದ್ದ ಗಣ್ಯರಿಗೆ ಸಂತೋಷ ಜವಳಿ ವಂದನಾರ್ಪಣೆ ಮಾಡಿ ಕಾರ್ಯಕ್ರಮ ಮುಕ್ತಾಯವಾಯಿತು.